ನವದೆಹಲಿ: ಶುಕ್ರವಾರ ರಾತ್ರಿ ನಡೆದ ಐಪಿಲ್ ಪಂದ್ಯದಲ್ಲಿ ಕೊಲ್ಕತ್ತಾ ತಂಡವು ಡೆಲ್ಲಿ ತಂಡದ ವಿರುದ್ಧ ಸೋಲನ್ನು ಅನುಭವಿಸಿದೆ.ಈ ಸಂದರ್ಭದಲ್ಲಿ ಶಾರುಖ್ ಖಾನ್ ಅವರು ಸೌರವ್ ಗಂಗೂಲಿ ಗೆ ವಿಶೇಷ ಟ್ವಿಟ್ಟರ್ ಮೂಲಕ ವಿಶೇಷ ಸಂದೇಶ ರವಾನಿಸಿದ್ದಾರೆ. 



COMMERCIAL BREAK
SCROLL TO CONTINUE READING

ಈ ಹಿಂದೆ ಕೊಲ್ಕೊತ್ತಾ ನೈಟ್ ರೈಡರ್ಸ್  ತಂಡದಲ್ಲಿ  ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದ  ಗಂಗೂಲಿ ಈಗ ಡೆಲ್ಲಿ ತಂಡವು ಗೆಲುವು ಸಾಧಿಸುವುದರ ಹಿಂದಿನ ಸೂತ್ರದಾರ ಎಂದು ಹೇಳಲಾಗುತ್ತಿದೆ.


ಇದೆಲ್ಲದರ ನಡುವೆಯೂ ಈಗ ಕೊಲ್ಕತಾ ತಂಡದ ಮಾಲೀಕ ಶಾರುಖ್ ಟ್ವೀಟ್ ಮಾಡಿ  "ಶುಬ್ಮನ್ ಗಿಲ್ ಹಾಗೂ ರಸೆಲ್ ಮತ್ತೊಮ್ಮೆ ಅದ್ಬುತ ಪ್ರದರ್ಶನ ನೀಡಿದ್ದಾರೆ.ಆದರೆ ಸೋಲುವುದೇನೋ ಸರಿ ಆದರೆ ಪ್ರಮುಖವಾಗಿ ಬೌಲಿಂಗ್ ವಿಭಾಗದಲ್ಲಿ ವಿಫಲವಾದೆವು.ಈ ಆಟದ ಒಂದೇ ಸಕಾರಾತ್ಮಕ ಅಂಶವೆಂದರೆ ನಮ್ಮ ದಾದಾ ಈಡನ್ ನಲ್ಲಿ ಗೆದ್ದ ತಂಡದ ಜೊತೆ ಇದ್ದರು ,ಕಂಗ್ರಾಟ್ಸ್ ಡೆಲ್ಲಿ ತಂಡಕ್ಕೆ " ಎಂದು ಟ್ವೀಟ್ ಮಾಡಿದ್ದಾರೆ. 


39 ಎಸೆತಗಳಲ್ಲಿ ಶೇಬ್ಮನ್ ಗಿಲ್ 65 ರನ್ ಮತ್ತು ಆಂಡ್ರೆ ರಸೆಲ್ 21 ಎಸೆತಗಳಲ್ಲಿ 45 ರನ್ ಗಳಿಸುವ ಮೂಲಕ ತಂಡದ ಗೆಲುವಿನಲ್ಲಿ  ಪ್ರಮುಖ ಪಾತ್ರ ವಹಿಸಿದರು.