ನವದೆಹಲಿ: ಇಲ್ಲಿನ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಮೊದಲು ಬ್ಯಾಟ್ ಮಾಡಿದ ದೆಹಲಿ ತಂಡವು   ನಾಯಕ ಶ್ರೇಯಸ್ ಅಯ್ಯರ್ ಅವರ ಅಬ್ಬರದ ಬ್ಯಾಟಿಂಗ ಬಿಸಿ ಕೋಲ್ಕತ್ತಾ ಬೃಹತ್ ಮೊತ್ತ ಗಳಿಸಲು ನೆರವಾದರು. 



COMMERCIAL BREAK
SCROLL TO CONTINUE READING

ಶ್ರೇಯಸ್ ಅವರು ಕೇವಲ 40 ಎಸೆತಗಳಲ್ಲಿ 10 ಭರ್ಜರಿ ಸಿಕ್ಸರ್ ಹಾಗೂ 3 ಬೌಂಡರಿಗಳಿಂದ ಅಜೇಯ 93 ರನ್ ಗಳಿಸಿದರು. ಇವರ ಜೊತೆ ಪೃಥ್ವಿ ಷಾ 62, ಕೊಲಿನ್ ಮುನ್ರೋ 33 ರನ್ ಗಳ ನೆರವಿಂದ  20 ಓವರ್ ಗಳಲ್ಲಿ ಒಟ್ಟು ನಾಲ್ಕು ವಿಕೆಟ್ ಕಳೆದುಕೊಂಡು 219 ರನ್ ಗಳಿಸಿತು.



ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಕೋಲ್ಕತ್ತಾ ತಂಡವು 20 ಓವರ್ ಗಳಲ್ಲಿ  9 ವಿಕೆಟ್ ನಷ್ಟಕ್ಕೆ 164ರನ್ ಗಳಿಸಲಷ್ಟೇ ಸಾಧ್ಯವಾಯಿತು ಆ ಮೂಲಕ 55 ರನ್ ಗಳ ಸೋಲನ್ನು ಕೋಲ್ಕತ್ತಾ ಅನುಭವಿಸಿತು.ದೆಹಲಿ ಪರ  ಅಮಿತ್ ಮಿಶ್ರಾ, ಗ್ಲೆನ್ ಮ್ಯಾಕ್ಷ್ ವೆಲ್, ಅವೇಶ್ ಖಾನ್  ಟ್ರೆಂಟ್ ಬೌಲ್ಟ್, ತಲಾ ಎರಡು ವಿಕೆಟ್ ಗಳನ್ನು ಪಡೆದು ಕೊಲ್ಕತ್ತಾದ ಬೆನ್ನೆಲುಬು ಮುರಿದರು.