ಕೆಕೆಆರ್ ಹಾಗೂ ಪಂಜಾಬ್ ನಡುವೆ ಬಿಗ್ ಫೈಟ್ ನಡೆಯಬೇಕಿತ್ತು. ಆದರೆ ಮಳೆ ನಿರಂತರವಾಗಿ ಸುರಿದಿದ್ದರಿಂದ ಇಡೀ ಪಂದ್ಯವನ್ನು ರದ್ದು ಮಾಡಲಾಗಿತ್ತು.

Shresta Iyer: ಇಂಡಿಯನ್ ಪ್ರೀಮಿಯರ್ ಲೀಗ್ (IPL)ನ 12ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಮಹತ್ವದ ಪಂದ್ಯ ನಡೆಯಬೇಕಿತ್ತು. ಆದ್ರೆ ಮಳೆಯ ಕಾರಣದಿಂದ ಪಂದ್ಯವನ್ನು ಸಂಪೂರ್ಣವಾಗಿ ನಡೆಸಲಾಗಲಿಲ್ಲ. ಸದ್ಯ ಈ ಸಂಬಂಧ ಪಂಜಾಬ್ ಕಿಂಗ್ಸ್ ತಂಡದ ನಾಯಕ ಮತ್ತು ಭಾರತ ಏಕದಿನ ತಂಡದ ಉಪನಾಯಕ ಶ್ರೇಯಸ್ ಅಯ್ಯರ್ ಅವರ ಸಹೋದರಿ ಶ್ರೇಸ್ತಾ ಅಯ್ಯರ್ ಅವರಿಗೆ ಸಾಮಾಜಿಕ ಮಾಧ್ಯಮದ ಮೂಲಕ ಬೆದರಿಕೆ ಹಾಗೂ ಅವಾಚ್ಯ ಶಬ್ಧಗಳಿಂದ ನಿಂದಿಸಲಾಗಿದೆ.
2026ರ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ 12ನೇ ಪಂದ್ಯ ಮಳೆಯಿಂದ ರದ್ದಾದ ನಂತರ ಈ ವಿವಾದ ಭುಗಿಲೆದ್ದಿದೆ. ಏಪ್ರಿಲ್ 6 ರಂದು ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಕೆಕೆಆರ್ ಹಾಗೂ ಪಂಜಾಬ್ ನಡುವೆ ಬಿಗ್ ಫೈಟ್ ನಡೆಯಬೇಕಿತ್ತು. ಆದರೆ ಮಳೆ ನಿರಂತರವಾಗಿ ಸುರಿದಿದ್ದರಿಂದ ಇಡೀ ಪಂದ್ಯವನ್ನು ರದ್ದು ಮಾಡಿ ತಲಾ ಒಂದೊಂದು ಅಂಕವನ್ನು ನೀಡಲಾಯಿತು. ಈ ಅಂಕಕ್ಕೆ ಸಂಬಂಧ ಪಟ್ಟಂತೆ ಶ್ರೇಯಸ್ ಅಯ್ಯರ್ ಅವರ ಸಹೋದರಿ ಶ್ರೇಸ್ತಾ ಅಯ್ಯರ್ ವಿಡಿಯೋವೊಂದನ್ನ ಶೇರ್ ಮಾಡಿದ್ದರು. ಇದಕ್ಕೆ ಭಾರೀ ವಿರೋಧ ಕೇಳಿ ಬಂದಿದೆ.
ಶ್ರೇಸ್ತಾ ಅಯ್ಯರ್ ವಿಡಿಯೋದಲ್ಲಿ, ನಾವು ಪಂಜಾಬಿಗಳು, ದೊಡ್ಡ ಹೃದಯವಂತರು. ಆದ್ದರಿಂದ, ನಾವು ನಿಮಗೆ ಒಂದು ಅಂಶವನ್ನು ನೀಡಿದ್ದೇವೆ ಎಂದು ತಮಾಷೆಯಾಗಿ ಬರೆದಿದ್ದರು. ವಿಡಿಯೋ ವೈರಲ್ ಆಗುತ್ತಿದ್ದಂತೆ ಆನ್ಲೈನ್ನಲ್ಲಿ ಮಿಶ್ರ ಪ್ರತಿಕ್ರಿಯೆಗಳು ಕೇಳಿ ಬಂದವು. ಶ್ರೇಸ್ತಾ ಇನ್ಸ್ಟಾಗ್ರಾಮ್ನಲ್ಲಿ ತನ್ನ ಸಹೋದರನ ತಂಡವು ಕೆಕೆಆರ್ಗೆ ಒಂದು ಪಾಯಿಂಟ್ ಅನ್ನು ಉಡುಗೊರೆಯಾಗಿ ನೀಡಿದೆ ಎಂದು ಕ್ಲಿಪ್ ಪೋಸ್ಟ್ ಮಾಡಿದ್ದರು.
ಶ್ರೇಸ್ತಾ ಅಯ್ಯರ್ ವಿಡಿಯೋವನ್ನು ಡಿಲೇಟ್ ಮಾಡಿ, ಮತ್ತೊಂದು ಪೋಸ್ಟ್ನಲ್ಲಿ ಈ ರೀತಿ ಬರೆದುಕೊಂಡಿದ್ದಾರೆ. ನನ್ನ ಇತ್ತೀಚಿನ ವೀಡಿಯೊವನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡಿದ್ದರಿಂದ ಅದನ್ನು ತೆಗೆದುಹಾಕಿದ್ದೇನೆ. ಇದು ಸುಮ್ಮನೆ ತಮಾಷೆಯಾಗಾಗಿ ಪೋಸ್ಟ್ ಮಾಡಲಾಗಿತ್ತು. ಆದರೆ ಎಲ್ಲರೂ ಅದನ್ನು ತಪ್ಪಾಗಿ ಅರ್ಥೈಸಿಕೊಂಡು ಬೇಕಾಬಿಟ್ಟಿ ಕಾಮೆಂಟ್ಗಳನ್ನು ಮಾಡಿದ್ದಾರೆ. ನಕಾರಾತ್ಮಕತೆಯನ್ನು ಮಾತ್ರವಲ್ಲದೆ, ಕೆಲವು ಬೆದರಿಕೆ ಸಂದೇಶಗಳು ಬಂದಿದ್ದರಿಂದ ಆತಂಕವಾಗಿದೆ ಎಂದು ಇನ್ಸ್ಟಾಗ್ರಾಮ್ನಲ್ಲಿ ಬರೆದಿದ್ದಾರೆ.
ಈ ಹಿಂದೆ ಶ್ರೇಯಸ್ ಅಯ್ಯರ್ ಅವರು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಇದ್ದರು. ಈ ಸಂದರ್ಭದಲ್ಲಿ ಕೆಕೆಆರ್ ಟ್ರೋಫಿಯನ್ನು ಎತ್ತಿ ಹಿಡಿದಿತ್ತು. ಆದರೆ ಮುಂದಿನ ಸೀಸನ್ನಲ್ಲಿ ಕೆಕೆಆರ್, ಶ್ರೇಯಸ್ ಅಯ್ಯರ್ ಅವರನ್ನು ಉಳಿಸಿಕೊಳ್ಳಲಿಲ್ಲ. ಇದರಿಂದ ಶ್ರೇಯಸ್ ಅಯ್ಯರ್ ಸಹೋದರಿ ಇದನ್ನೇ ಗುರಿಯಾಗಿಸಿಕೊಂಡು ವಿಡಿಯೋ ಪೋಸ್ಟ್ ಮಾಡಿದ್ದಾರೆ ಎಂದು ತಿಳಿದು ಕೆಲ ಫ್ಯಾನ್ಸ್ ಅವರಿಗೆ ಬೆದರಿಕೆ ಹೊಡ್ಡಿದ್ದಾರೆ ಎನ್ನಲಾಗುತ್ತಿದೆ.