ಶುಭಮನ್ ಸಾರಾ ಮದುವೆ ಬಗ್ಗೆ ಸಿಕ್ತು ಬಿಗ್‌ ಅಪ್ಡೇಟ್‌! ತಂದೆಯಿಂದಲೇ ಹೊರಬಿತ್ತು ಅಸಲಿ ಸತ್ಯ

ಕ್ರಿಕೆಟಿಗ ಶುಭಮನ್ ಗಿಲ್ ಮತ್ತು ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ನಡುವಿನ ಸಂಬಂಧದ ಸುದ್ದಿ ಹಳೆಯದಾಗಿದ್ದರೂ, ಮದುವೆ ಕುರಿತ ಕುತೂಹಲ ಎಂದಿಗೂ ಕಡಿಮೆಯಾಗಿಲ್ಲ. ಅಭಿಮಾನಿಗಳು ಯಾವಾಗಲೂ ಈ ಜೋಡಿ ಮದುವೆಯಾಗುವುದೇ ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಿದ್ದರು. ಈಗ ಅದೇ ವಿಚಾರದಲ್ಲಿ ಶುಭಮನ್ ಅವರ ತಂದೆಯೇ ನೇರವಾಗಿ ಮಾತನಾಡಿರುವ ವೀಡಿಯೊ ವೈರಲ್ ಆಗಿದೆ.

Written by - Zee Kannada News Desk | Last Updated : Nov 16, 2025, 12:55 PM IST
  • ಸಾರಾ ಮತ್ತು ಶುಭಮನ್ ಇಬ್ಬರೂ ಹಲವು ಬಾರಿ ಒಟ್ಟಿಗೆ ಡಿನ್ನರ್ ಮತ್ತು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ
  • 14 ಸೆಕೆಂಡಿನ ವೀಡಿಯೊ ಈಗ ಎಲ್ಲೆಡೆ ಹರಿದಾಡುತ್ತಿದೆ
ಶುಭಮನ್ ಸಾರಾ ಮದುವೆ ಬಗ್ಗೆ ಸಿಕ್ತು ಬಿಗ್‌ ಅಪ್ಡೇಟ್‌! ತಂದೆಯಿಂದಲೇ ಹೊರಬಿತ್ತು ಅಸಲಿ ಸತ್ಯ

Shubman–Sara Marriage: ಕ್ರಿಕೆಟಿಗ ಶುಭಮನ್ ಗಿಲ್ ಮತ್ತು ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ನಡುವಿನ ಸಂಬಂಧದ ಸುದ್ದಿ ಹಳೆಯದಾಗಿದ್ದರೂ, ಮದುವೆ ಕುರಿತ ಕುತೂಹಲ ಎಂದಿಗೂ ಕಡಿಮೆಯಾಗಿಲ್ಲ. ಅಭಿಮಾನಿಗಳು ಯಾವಾಗಲೂ ಈ ಜೋಡಿ ಮದುವೆಯಾಗುವುದೇ ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಿದ್ದರು. ಈಗ ಅದೇ ವಿಚಾರದಲ್ಲಿ ಶುಭಮನ್ ಅವರ ತಂದೆಯೇ ನೇರವಾಗಿ ಮಾತನಾಡಿರುವ ವೀಡಿಯೊ ವೈರಲ್ ಆಗಿದೆ.

Add Zee News as a Preferred Source

ಇತ್ತೀಚಿನ ಕ್ರಿಕೆಟ್ ಪಂದ್ಯಾವಳಿಯೊಂದರಲ್ಲಿ ಶುಭಮನ್ ಗಿಲ್ ಅವರ ತಂದೆ ಲಖ್ವಿಂದರ್ ಸಿಂಗ್ ಮೈದಾನಕ್ಕೆ ಹಾಜರಾಗಿದ್ದರು. ಅವರ ಪಕ್ಕದಲ್ಲಿ ಕುಳಿತಿದ್ದ ಒಬ್ಬ ಕ್ರಿಕೆಟ್ ಅಭಿಮಾನಿ, ಶುಭಮನ್ ಅವರ ವೈಯಕ್ತಿಕ ಬದುಕಿನ ಬಗ್ಗೆ ನೇರವಾಗಿ ಪ್ರಶ್ನೆ ಮಾಡಿದ ದೃಶ್ಯ ಈಗ ಇಂಟರ್ನೆಟ್‌ನಲ್ಲಿ ಸದ್ದು ಮಾಡುತ್ತಿದೆ. ಆ 14 ಸೆಕೆಂಡಿನ ವೀಡಿಯೊ ಈಗ ಎಲ್ಲೆಡೆ ಹರಿದಾಡುತ್ತಿದೆ.

ಇದನ್ನೂ ಓದಿ: ಟೀಂ ಇಂಡಿಯಾಗೆ ಬಿಗ್‌ಶಾಕ್‌! ತಂಡದಿಂದ ಕ್ಯಾಪ್ಟನ್‌ ಶುಭಮನ್‌ ಗಿಲ್‌ ಔಟ್‌

ವೀಡಿಯೊದಲ್ಲಿ ಒಬ್ಬ ವ್ಯಕ್ತಿ, “ಅಂಕಲ್, ಶುಭಮನ್ ಮದುವೆ ಯಾವಾಗ ಮಾಡ್ತಾರೆ?” ಎಂದು ನೇರವಾಗಿ ಕೇಳುತ್ತಾರೆ. ಅದಕ್ಕೆ ಅವರು ನಗುತ ಕೈಯನ್ನು ಮೇಲಕ್ಕೆ ಎತ್ತಿ, “ದೇವರು ಬಯಸಿದಾಗ ಆಗುತ್ತೆ” ಎಂಬ ಸುಳಿವು ನೀಡುತ್ತಾರೆ. ಆದರೆ ಮುಂದಿನ ಪ್ರಶ್ನೆಯಾದ— “ಶುಭಮನ್ ಸಾರಾ ತೆಂಡೂಲ್ಕರ್‌ ಅನ್ನು ಮದುವೆಯಾಗ್ತಾರಾ?” ಎಂಬುದಕ್ಕೆ ಅವರು ಯಾವುದೇ ಉತ್ತರ ನೀಡದೆ ನಗುತ್ತಾ ಮೌನವಾಗಿರುತ್ತಾರೆ.

ಈ ಪ್ರತಿಕ್ರಿಯೆಯಿಂದ ಇಂಟರ್ನೆಟ್‌ನಲ್ಲಿ ಹಲವಾರು ಊಹಾಪೋಹಗಳು ಶುರುವಾಗಿದೆ. ಸಾರಾ ಮತ್ತು ಶುಭಮನ್ ಇಬ್ಬರೂ ಹಲವು ಬಾರಿ ಒಟ್ಟಿಗೆ ಡಿನ್ನರ್ ಮತ್ತು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರೂ, ತಮ್ಮ ಸಂಬಂಧದ ಬಗ್ಗೆ ಸಾರ್ವಜನಿಕವಾಗಿ ಏನೂ ಹೇಳಿದ್ದಾರೆಲ್ಲ. ಆದರೆ ಅಭಿಮಾನಿಗಳ ನಂಬಿಕೆ—ಇವರಿಬ್ಬರೂ ಒಟ್ಟಿಗಿದ್ದಾರೆ ಎಂಬುದು.

ಇದನ್ನೂ ಓದಿ: ಚೆನ್ನೈ ಸೂಪರ್ ಕಿಂಗ್ಸ್ ತೊರೆದು ರಾಜಸ್ಥಾನ ರಾಯಲ್ಸ್ ಸೇರಿದ ಈ ಸ್ಟಾರ್ ಆಟಗಾರ...!

ಸೋಶಿಯಲ್ ಮೀಡಿಯಾದಲ್ಲಿ ಈ ವೀಡಿಯೊ ಟ್ರೆಂಡ್ ಆಗುತ್ತಿದ್ದಂತೆ, ಅಭಿಮಾನಿಗಳು ಈಗ ಶುಭಮನ್ ಅವರ ತಂದೆಯ ಮಾತಿನಲ್ಲೇ ಸುಳಿವು ಹುಡುಕುತ್ತಿದ್ದಾರೆ. “ದೇವರು ಬಯಸಿದಾಗ” ಎಂಬ ಹೇಳಿಕೆ, ಮದುವೆಯ ಸಾಧ್ಯತೆಯ ಬಗ್ಗೆ ಸಣ್ಣ ಹಿಂಟ್‌ ನೀಡಿದಂತೆ ಕಾಣುತ್ತಿದೆ. ಆದರೆ ಅಧಿಕೃತ ಘೋಷಣೆ ಬರುವ ತನಕ ಎಲ್ಲವೂ ಊಹಾಪೋಹವೇ. ಅಂತಿಮವಾಗಿ, ಸಾರಾ–ಶುಭಮನ್ ಜೋಡಿ ನಿಜವಾಗಿಯೂ ಮದುವೆಯ ಮಂಟಪಕ್ಕೆ ಕಾಲಿಡುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅಭಿಮಾನಿಗಳಿಗೆ ಈಗ ಉಳಿದಿರುವುದು—ಆ ದಿನವನ್ನು ಕಾದು ನೋಡುವುದಷ್ಟೆ.

Trending News