ಟೀಮ್ ಇಂಡಿಯಾ ಹಾಗೂ ನ್ಯೂಜಿಲೆಂಡ್ ಮೂರು ಪಂದ್ಯಗಳ ಸರಣಿಯಲ್ಲಿ ತಲಾ ಒಂದೊಂದು ಮ್ಯಾಚ್ ಗೆದ್ದು ಸಮಬಲ ಸಾಧಿಸಿವೆ. ಹೀಗಾಗಿ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆಯುವ ಅಂತಿಮ ಪಂದ್ಯ 2 ತಂಡಕ್ಕೂ ನಿರ್ಣಾಯಕವಾಗಿದೆ. ಇದರಿಂದ ಶುಭ್‌ಮನ್ ಗಿಲ್ ನೇತೃತ್ವದ ಟೀಮ್ ಇಂಡಿಯಾ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಗೆದ್ದು ಬೀಗಲು ಬಿಗ್ ಪ್ಲಾನ್ ಮಡುತ್ತಿದೆ. ಇದರ ನಡುವೆ ನಾಯಕ ಗಿಲ್, ಎಂತಹ ಫಿಲ್ಟರ್ ನೀರು ಕುಡಿಯುತ್ತಾರೆ ಎನ್ನುವುದು ಬಹಿರಂಗವಾಗಿದೆ.
ದೇಶದ ಅತ್ಯಂತ ಸ್ವಚ್ಛ ನಗರವೆಂದು ಖ್ಯಾತಿ ಪಡೆದಿರುವ ಇಂದೋರ್‌ನಲ್ಲಿ ನಾಳೆ ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಕೊನೆಯ ಏಕದಿನ ಪಂದ್ಯ ನಡೆಯಲಿದೆ. ಆದರೆ ಇಂದೋರ್‌ನಲ್ಲಿ ಸದ್ಯ ಕಲುಷಿತ ನೀರಿನ ಸಮಸ್ಯೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಇದು ಈಗ ರಾಷ್ಟ್ರವ್ಯಾಪಿ ಆಗಿ ಹರಡಿದೆ. ಇದರ ನಡುವೆ ಕ್ಯಾಪ್ಟನ್ ಶುಭ್‌ಮನ್ ಗಿಲ್ ಅವರು ಕುಡಿಯುವ ನೀರು ಅತ್ಯಂತ ಶುದ್ಧೀಕರಣ ಮಾಡಿರೋದು ಎಂದು ಇದೀಗ ಬಹಿರಂಗವಾಗಿದೆ ಎನ್ನಲಾಗಿದೆ.
ಟೀಮ್ ಇಂಡಿಯಾ ಆಟಗಾರರು ಎಲ್ಲ ಇಂದೋರ್‌ನ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ತಂಗಿದ್ದಾರೆ. ಆದರೆ ಈ ಹೋಟೆಲ್‌ಗೆ ಕ್ಯಾಪ್ಟನ್ ಗಿಲ್ ಅವರು 3 ಲಕ್ಷ ರೂಪಾಯಿ ಮೌಲ್ಯದ ಸ್ಪೆಷಲ್ ವಾಟರ್ ಫಿಲ್ಟರ್ ಅನ್ನು ತಂದಿದ್ದಾರೆ. ಇದನ್ನು ಹೋಟೆಲ್‌ನಲ್ಲಿ ಅಳವಡಿಸಲಾಗಿದ್ದು ಇದರಲ್ಲಿ ಫಿಲ್ಟರ್ ಆಗಿರುವ ನೀರನ್ನೇ ಶುಭ್‌ಮನ್ ಗಿಲ್ ಅವರು ಕುಡಿಯುತ್ತಿದ್ದಾರಂತೆ.
ಇದನ್ನೂ ಓದಿ: RCB ತಂಡದಲ್ಲಿ ಕನ್ನಡತಿ ದರ್ಬಾರ್.. ಸಾಲು ಸಾಲು ವಿಕೆಟ್ ಕಬಳಿಸಿ ಹ್ಯಾಟ್ರಿಕ್ ಗೆಲುವಿಗೆ ಕಾರಣವಾದ ಯಂಗ್ ಪ್ಲೇಯರ್!
ನಾಯಕ ಗಿಲ್ ತಂದಿರುವ 3 ಲಕ್ಷ ರೂಪಾಯಿ ಮೌಲ್ಯದ ವಿಶೇಷ ನೀರು ಶುದ್ಧೀಕರಣ ಯಂತ್ರ ಎಷ್ಟೊಂದು ಸ್ಪೆಷಲ್ ಎಂದರೆ ಫಿಲ್ಟರ್ ಆಗಿರುವ ನೀರನ್ನು ಶುದ್ಧೀಕರಿಸುತ್ತದೆ. ಅಂದರೆ ಆರ್‌ಒ ಸಂಸ್ಕರಿಸಿದ ನೀರು ಮತ್ತು ಪ್ಯಾಕ್ ಮಾಡಿದ ನೀರನ್ನು ಪುನಃ ಶುದ್ಧೀಕರಿಸುವ ಸಾಮರ್ಥ್ಯವನ್ನು ಈ ಮಿಷನ್ ಹೊಂದಿದೆ. ಇದನ್ನು ಹೋಟೆಲ್‌ನಲ್ಲಿ ಅಳವಡಿಕೆ ಮಾಡಲಾಗಿದ್ದು ಗಿಲ್ ಇದೇ ನೀರನ್ನು ಉಪಯೋಗಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಪೂಜೆ ಮಾಡುವಾಗ ಭಜನೆಯಲ್ಲಿ ತಲ್ಲೀನನಾದ ವಿರಾಟ್ ಕೊಹ್ಲಿ.. ಭಾರತದ ಲೆಜೆಂಡ್ರಿ ಬ್ಯಾಟರ್ ಹೋಗಿದ್ದು ಯಾವ ದೇವಾಲಯಕ್ಕೆ?









