)
Shubman Gill captaincy: ಟೆಸ್ಟ್ ನಾಯಕನಾಗಿ ತಮ್ಮ ಮೊದಲ ಸರಣಿಯಲ್ಲಿಯೇ ಶುಭಮನ್ ಗಿಲ್ ಟೀಂ ಇಂಡಿಯಾ ಪರ ಅದ್ಭುತ ಪ್ರದರ್ಶನ ನೀಡಿದರು. ಅವರ ನಾಯಕತ್ವದಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು 2-2 ಡ್ರಾದಲ್ಲಿ ಕೊನೆಗೊಳಿಸಿತು. ನಾಯಕತ್ವದ ಜೊತೆಗೆ ಈ ಸರಣಿಯಲ್ಲಿ ಅವರು ಬ್ಯಾಟಿಂಗ್ನಲ್ಲಿಯೂ ಸಾಕಷ್ಟು ರನ್ ಗಳಿಸಿದರು. ಇತ್ತೀಚಿನ ದಿನಗಳಲ್ಲಿ ಗಿಲ್ ಅವರ ನಾಯಕತ್ವದ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿರುವುದಕ್ಕೆ ಇದೇ ಕಾರಣ. ಏತನ್ಮಧ್ಯೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್, ಶುಭಮನ್ ಗಿಲ್ ಭವಿಷ್ಯದಲ್ಲಿ ಏಕದಿನ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
ಶುಭಮನ್ ಗಿಲ್ ಬಗ್ಗೆ ಮೊಹಮ್ಮದ್ ಕೈಫ್ ಹೇಳಿದ್ದೇನು?
ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿರುವ ಮೊಹಮ್ಮದ್ ಕೈಫ್, ರೋಹಿತ್ ಶರ್ಮಾ ಎಷ್ಟು ದಿನ ಏಕದಿನ ತಂಡದ ನಾಯಕರಾಗಿ ಉಳಿಯುತ್ತಾರೆಂಬುದು ನಮಗೆ ತಿಳಿದಿಲ್ಲವಾದ್ದರಿಂದ ಗಿಲ್ ಏಕದಿನ ತಂಡದ ನಾಯಕತ್ವವನ್ನ ವಹಿಸಿಕೊಳ್ಳುತ್ತಾರೆಂದು ಹೇಳಿದ್ದಾರೆ. ಗಿಲ್ ನಾಯಕತ್ವ ವಹಿಸಿಕೊಳ್ಳಲು ಸಂಪೂರ್ಣವಾಗಿ ಸಿದ್ಧರಾಗಿದ್ದಾರೆ. ಅವರು ಸೀಮಿತ ಓವರ್ಗಳ ಸ್ವರೂಪದಲ್ಲಿ ರನ್ ಗಳಿಸುವ ಕೌಶಲ್ಯ ಹೊಂದಿದ್ದಾರೆ. ಅವರು ಟೆಸ್ಟ್ ಪಂದ್ಯಗಳಲ್ಲಿ ನಾಯಕರಾಗಿ ಉತ್ತಮ ಪ್ರದರ್ಶನ ನೀಡಿದ್ದು, ತಂಡವನ್ನು ಅದ್ಭುತವಾಗಿ ಮುನ್ನಡೆಸಿದ್ದಾರೆ. ನೀವು ಯುವ ತಂಡದೊಂದಿಗೆ ಆಡುವಾಗ, ನೀವು ಎರಡೂ ಕೆಲಸಗಳನ್ನು ಮಾಡಬೇಕು. ಬ್ಯಾಟ್ನಿಂದ ರನ್ ಗಳಿಸಿ ಮತ್ತು ನಾಯಕನಾಗಿ ಉತ್ತಮ ಪ್ರದರ್ಶನ ನೀಡಿ. ಒಟ್ಟಾರೆ ಇದು ಗಿಲ್ಗೆ ಉತ್ತಮ ಪ್ರವಾಸವಾಗಿತ್ತು ಎಂದು ಹೇಳಬಹುದು.
ಇಂಗ್ಲೆಂಡ್ನಲ್ಲಿ ಯುವ ತಂಡದೊಂದಿಗೆ ಆಡಿದ ಟೆಸ್ಟ್ ಸರಣಿಯಲ್ಲಿ ಗಿಲ್ ಎಲ್ಲರನ್ನೂ ಮೆಚ್ಚಿಸಿದ್ದಾರೆಂದು ಕೈಫ್ ನಂಬಿದ್ದಾರೆ. ನಾಯಕನಾಗಿ ಶುಭಮನ್ ಗಿಲ್ ಈ ಸರಣಿಯಲ್ಲಿ ಸಿಕ್ಕ ಅವಕಾಶವನ್ನ ಚೆನ್ನಾಗಿಯೇ ನಿರ್ವಹಿಸಿದ್ದಾರೆಂದು ಕೈಫ್ ಹೇಳಿದ್ದಾರೆ. ಗಿಲ್ ನಾಯಕನಾದಾಗ ಅವರ ಟೆಸ್ಟ್ ದಾಖಲೆಯನ್ನು ನೋಡಿದರೆ, ಅವರಿಗೆ ನಾಯಕತ್ವ ಏಕೆ ಸಿಕ್ಕಿತು ಎಂಬ ಬಗ್ಗೆ ಅನೇಕ ಪ್ರಶ್ನೆಗಳು ಎದ್ದವು. ಯುವ ತಂಡದೊಂದಿಗೆ ಯುವ ನಾಯಕನೊಬ್ಬ ಭಾರೀ ಒತ್ತಡದಲ್ಲಿ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ತಲುಪಿದ್ದ. ಈ ಎಲ್ಲಾ ಟೀಕೆಗಳಿಗೆ ಅವರು ತಮ್ಮ ಬ್ಯಾಟ್ನಿಂದ ಉತ್ತರಿಸಿದರು. ಗಿಲ್ಗೆ ಸರ್ ಡಾನ್ ಬ್ರಾಡ್ಮನ್ ಅವರ ದಾಖಲೆಯನ್ನು ಮುರಿಯುವುದಕ್ಕೆ ಹೋಲಿಸುವ ಸಮಯ ಬಂದಿತು. ಈ ಪ್ರವಾಸದಲ್ಲಿ ಇಂಗ್ಲೆಂಡ್ ಬೌಲರ್ಗಳು ಗಿಲ್ ಮುಂದೆ ಅಸಹಾಯಕರಾಗಿ ಕಾಣುತ್ತಿದ್ದರು ಎದು ಕೈಫ್ ಅಭಿಪ್ರಾಯಪಟ್ಟಿದ್ದಾರೆ.
ಇಂಗ್ಲೆಂಡ್ ಸರಣಿಯಲ್ಲಿ ಶುಭಮನ್ ಗಿಲ್ ದಾಖಲೆ
ಇಂಗ್ಲೆಂಡ್ ಪ್ರವಾಸವು ಬ್ಯಾಟ್ಸ್ಮನ್ ಆಗಿ ಶುಭಮನ್ ಗಿಲ್ಗೆ ತುಂಬಾ ಉತ್ತಮವಾಗಿತ್ತು. ಅವರು ಐದು ಪಂದ್ಯಗಳ 10 ಇನ್ನಿಂಗ್ಸ್ಗಳಲ್ಲಿ 75.4 ಸರಾಸರಿಯಲ್ಲಿ 754 ರನ್ ಗಳಿಸಿದ್ದಾರೆ. ಈ ಪ್ರವಾಸದಲ್ಲಿ ಅವರು ದ್ವಿಶತಕ ಸೇರಿದಂತೆ ಒಟ್ಟು 4 ಶತಕಗಳನ್ನು ಗಳಿಸಿದ್ದಾರೆ. ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಅವರು 269 ರನ್ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಇದು ಟೆಸ್ಟ್ ಕ್ರಿಕೆಟ್ನಲ್ಲಿ ಅವರ ಅತ್ಯಧಿಕ ಸ್ಕೋರ್ ಆಗಿದೆ. ಅವರು ಈ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿ ಮಿಂಚಿದರು.