)
ಲಂಡನ್ನ ಐತಿಹಾಸಿಕ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆದ 'ರೆಡ್ ಫಾರ್ ರೂತ್ ಸ್ಪೆಷಲ್ ಟೈಮ್ಡ್ ಆಕ್ಷನ್'ನಲ್ಲಿ ಭಾರತೀಯ ಕ್ರಿಕೆಟಿಗ ಶುಭ್ಮನ್ ಗಿಲ್ರ ಟೆಸ್ಟ್ ಜೆರ್ಸಿಯು ದಾಖಲೆಯ £4,600 (ಅಂದಾಜು 5.41 ಲಕ್ಷ ರೂ.) ಮೊತ್ತಕ್ಕೆ ಮಾರಾಟವಾಗಿ ಈವೆಂಟ್ನ ಅತ್ಯಂತ ದುಬಾರಿ ವಸ್ತುವಾಗಿ ಗುರುತಿಸಿಕೊಂಡಿದೆ.ಇಂಗ್ಲೆಂಡ್ ವಿರುದ್ಧದ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಗಿಲ್ ಧರಿಸಿದ್ದ ಈ ಜೆರ್ಸಿಯು ಅವರ ಸಹಿಯೊಂದಿಗೆ, ಪಂದ್ಯದ ಕಲೆಗಳಿಂದ ಕೂಡಿದ್ದು, ತೊಳೆಯದ ಸ್ಥಿತಿಯಲ್ಲಿರುವುದರಿಂದ ಸಂಗ್ರಾಹಕರಿಗೆ ವಿಶೇಷ ಆಕರ್ಷಣೆಯಾಗಿತ್ತು.
ಏನಿದು ರೆಡ್ ಫಾರ್ ರೂತ್ ಡೇ?
'ರೆಡ್ ಫಾರ್ ರೂತ್ ದಿನ'ವು ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಟೆಸ್ಟ್ ಪಂದ್ಯದ ಒಂದು ದಿನವನ್ನು ಸಂಪೂರ್ಣ ಕೆಂಪು ಬಣ್ಣಕ್ಕೆ ಮೀಸಲಿರಿಸಿ ಆಚರಿಸಲಾಗುತ್ತದೆ.ಈ ದಿನದಂದು ಆಟಗಾರರು ಮತ್ತು ಅಭಿಮಾನಿಗಳು ಕೆಂಪು ಬಟ್ಟೆ ಧರಿಸಿ ಭಾಗವಹಿಸುತ್ತಾರೆ.ಈ ಕಾರ್ಯಕ್ರಮವು ಮಾಜಿ ಇಂಗ್ಲೆಂಡ್ ನಾಯಕ ಸರ್ ಆಂಡ್ರ್ಯೂ ಸ್ಟ್ರಾಸ್ ಅವರ ದಿವಂಗತ ಪತ್ನಿ ರೂತ್ ಸ್ಟ್ರಾಸ್ ಅವರ ಸ್ಮರಣಾರ್ಥವಾಗಿದ್ದು, ಶ್ವಾಸಕೋಶದ ಕ್ಯಾನ್ಸರ್ನಿಂದ ಅವರು ನಿಧನರಾಗಿದ್ದರು.ಈ ದಿನವು ಕ್ರಿಕೆಟ್ನ ಜೊತೆಗೆ ದಾನಧರ್ಮದ ಉದ್ದೇಶವನ್ನು ಸಾಕಾರಗೊಳಿಸುತ್ತದೆ.
ಗಿಲ್ರ ಜೆರ್ಸಿ ಗರಿಷ್ಠ ಮೊತ್ತವನ್ನು ಪಡೆದರೂ, ಇತರ ಭಾರತೀಯ ಆಟಗಾರರ ಸ್ಮರಣಿಕೆಗಳೂ ಬಿಡ್ ನಲ್ಲಿ ಗಮನ ಸೆಳೆದವು. ಅದರಲ್ಲೂ ವಿಶೇಷವಾಗಿ ರವೀಂದ್ರ ಜಡೇಜ ಮತ್ತು ಜಸ್ಪ್ರೀತ್ ಬುಮ್ರಾ ಅವರ ಜೆರ್ಸಿಗಳು ತಲಾ £4,200 (4.94 ಲಕ್ಷ ರೂ.)ಗೆ ಮಾರಾಟವಾದವು. - ಕೆ.ಎಲ್. ರಾಹುಲ್ರ ಜೆರ್ಸಿ £4,000 (4.70 ಲಕ್ಷ ರೂ.)ಗೆ ಖರೀದಿಯಾಯಿತು.33 - ಇಂಗ್ಲೆಂಡ್ನ ಜೋ ರೂಟ್ರ ಜೆರ್ಸಿ £3,800 (4.47 ಲಕ್ಷ ರೂ.) ಮತ್ತು ಅವರ ಕ್ಯಾಪ್ £3,000 ಗೆ ಮಾರಾಟವಾಯಿತು. - ರಿಷಭ್ ಪಂತ್ರ ಸಹಿಯಿರುವ ಕ್ಯಾಪ್ £1,500 (1.75 ಲಕ್ಷ ರೂ.)ಗೆ ಖರೀದಿಯಾಯಿತು.ಕ್ರಿಕೆಟ್ನ ಉತ್ಸಾಹವನ್ನು ದಾನಧರ್ಮದೊಂದಿಗೆ ಸಂಯೋಜಿಸುವ ಈ ಕಾರ್ಯಕ್ರಮವು, ಕ್ರೀಡೆಯು ಸಾಮಾಜಿಕ ಕಲ್ಯಾಣಕ್ಕೆ ತನ್ನ ಕೊಡುಗೆಯನ್ನು ನೀಡುತ್ತದೆ.