ಐಪಿಎಲ್ ಕ್ರೀಡಾಕೂಟ 2008ರಲ್ಲಿ ಆರಂಭವಾಯಿತು. ಇದೀಗ ಐಪಿಎಲ್ 18ನೇ ಆವೃತ್ತಿ ಇಂದು ಆರಂಭಗೊಂಡಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಅದ್ಧೂರಿ ಓಪನಿಂಗ್ ಸಮಾರಂಭ ಜರುಗಿತು. ಆರಂಭಿಕ ಪಂದ್ಯದಲ್ಲಿಯೇ ಕೋಲ್ಕತ್ತಾ ನೈಟ್ ರೈಡರ್ಸ್ ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಲುಣಿಸಿ ಗೆಲುವಿನ ಶುಭಾರಂಭ ಮಾಡಿದೆ.
ಅನೇಕ ಆಟಗಾರರು ಐಪಿಎಲ್ ಬಹುಮಾನದ ಹಣಕ್ಕಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ. ಐಪಿಎಲ್ 2025 ರಲ್ಲಿ ಆರು ಆಟಗಾರರು ಟೂರ್ನಮೆಂಟ್ ಬಹುಮಾನದ ಹಣಕ್ಕಿಂತ ಅಧಿಕ ಸಂಭಾವನೆಯನ್ನು ಪಡೆಯುತ್ತಿದ್ದಾರೆ. ಐಪಿಎಲ್ 2025 ಗೆಲ್ಲುವವರಿಗೆ 20 ಕೋಟಿ ರೂಪಾಯಿ ಬಹುಮಾನ ಸಿಗಲಿದೆ. ಆದರೆ ಈ ಆರು ಆಟಗಾರರ ಸಂಭಾವನೆ 20 ಕೋಟಿಯನ್ನೂ ಮೀರಿದೆ.
ರಿಷಭ್ ಪಂತ್
ಐಪಿಎಲ್ ಹರಾಜಿನ ಮೊದಲ ನೇ ದಿನದಂದು ರಿಷಭ್ ಪಂತ್‌ಗಾಗಿ ಬಿಡ್ಡಿಂಗ್ ಶುರುವಾಯಿತು. ಟೀಮ್ ಇಂಡಿಯಾದ ಸ್ಟಾರ್ ವಿಕೆಟ್‌ಕೀಪರ್ ರಿಷಭ್ ಪಂತ್ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಸೇಲ್ ಆಗುವ ಮೂಲಕ ದಾಖಲೆ ಬರೆದರು. 27 ವರ್ಷದ ರಿಷಭ್ ಪಂತ್ ಅವರನ್ನು ಲಕ್ನೋ ಸೂಪರ್ ಜಯಂಟ್ಸ್ ತಂಡ 27 ಕೋಟಿ ರೂ.ಗೆ ಪಡೆದುಕೊಂಡಿದೆ.
ಇದನ್ನೂ ಓದಿ: RCB vs KKR: ಕೊಹ್ಲಿ, ಸಾಲ್ಟ್ ಭರ್ಜರಿ ಜೊತೆಯಾಟ! ಕೋಲ್ಕತ್ತಾ ವಿರುದ್ಧ ಗೆಲುವಿನ ಶುಭಾರಂಭ ಮಾಡಿದ RCB
ಶ್ರೇಯಸ್ ಅಯ್ಯರ್
ಶ್ರೇಯಸ್ ಅಯ್ಯರ್ ಅವರನ್ನು ಪಂಜಾಬ್ ತಂಡ 26.75 ಕೋಟಿ ರೂ ಗೆ ಖರೀದಿಸಿದೆ. ಪಂಜಾಬ್ ತಂಡದ ನಾಯಕತ್ವವನ್ನು ಶ್ರೇಯಸ್ ಅಯ್ಯರ್ ವಹಿಸಿಕೊಂಡಿದ್ದಾರೆ. ಐಪಿಎಲ್ 2024ರಲ್ಲಿ ಶ್ರೇಯಸ್ ಅಯ್ಯರ್ ಕೆಕೆಆರ್ ತಂಡವನ್ನು ಗೆಲುವಿನೆಡೆಗೆ ಮುನ್ನಡೆಸಿದ್ದರು. ಶ್ರೇಯಸ್ ಅಯ್ಯರ್ ಕ್ಯಾಪ್ಟನ್ಸಿಯಲ್ಲಿ ಕೆಕೆಆರ್ ತಂಡ ಚಾಂಪಿಯನ್ ಆಗಿತ್ತು. ಈ ಬಾರಿ ಪಂಜಾಬ್ ತಂಡದ ನಾಯಕತ್ವ ಶ್ರೇಯಸ್ ಅಯ್ಯರ್ ಹಗಲ ಮೇಲಿದೆ.
ವೆಂಕಟೇಶ್ ಅಯ್ಯರ್
ಕಳೆದ ವರ್ಷ ಕೆಕೆಆರ್ ತಂಡದಲ್ಲಿ ವೆಂಕಟೇಶ್ ಅಯ್ಯರ್ ಅವರ ಪ್ರದರ್ಶನ ಅದ್ಭುತವಾಗಿತ್ತು. ಕೆಕೆಆರ್ ಅವರನ್ನು ಉಳಿಸಿಕೊಳ್ಳದೇ ಹರಾಜಿಗೆ ಬಿಟ್ಟಿತು. ಆದರೆ ಬಳಿಕ ವೆಂಕಟೇಶ್ ಅಯ್ಯರ್ ಅವರನ್ನು 23.75 ಕೋಟಿ ರೂಪಾಯಿಗೆ ಕೆಕೆಆರ್ ಮರಳಿ ಖರೀದಿಸಿತು. ಅವರು ಐಪಿಎಲ್ ಬಹುಮಾನದ ಹಣಕ್ಕಿಂತ ಸುಮಾರು 3 ಕೋಟಿ ಹೆಚ್ಚು ಗಳಿಸುತ್ತಿದ್ದಾರೆ.
ಹೆನ್ರಿಕ್ ಕ್ಲಾಸೆನ್
ಸನ್‌ರೈಸರ್ಸ್ ಹೈದರಾಬಾದ್ ಐಪಿಎಲ್ 2024 ರಲ್ಲಿ ಫೈನಲ್‌ಗೆ ತಲುಪಿತ್ತು. ಆದರೆ ಫೈನಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 8 ವಿಕೆಟ್ ಗಳಿಂದ ಸೋಲುಂಡು ಚಾಂಪಿಯನ್ ಪಟ್ಟ ಕಳೆದುಕೊಂಡಿತು. ಹೆನ್ರಿಕ್ ಕ್ಲಾಸೇನ್ ಅವರಂತಹ ಸ್ಟಾರ್ ಆಟಗಾರರನ್ನು ಎಸ್‌ಆರ್‌ಹೆಚ್ ಈ ಬಾರಿ ಖರೀದಿಸಿದೆ. ಹೆನ್ರಿಕ್ ಕ್ಲಾಸೇನ್ 23 ಕೋಟಿ ಸಂಭಾವನೆಯನ್ನು ಪಡೆಯುತ್ತಾರೆ.
ವಿರಾಟ್ ಕೊಹ್ಲಿ
ಐಪಿಎಲ್‌ನಲ್ಲಿ 8,000 ಕ್ಕೂ ಹೆಚ್ಚು ರನ್‌ಗಳನ್ನು ಹೊಂದಿರುವ ವಿರಾಟ್ ಕೊಹ್ಲಿ ಕೂಡ ಬಹುಮಾನದ ಮೊತ್ತಕ್ಕಿಂತ ಹೆಚ್ಚಿನ ಸಂಭಾವನೆ ಪಡೆಯುತ್ತಾರೆ. ಆರ್‌ಸಿಬಿ ತಂಡದ ಸ್ಟಾರ್ ಪ್ಲೇಯರ್ ಆಗಿರುವ ವಿರಾಟ್ ಕೊಹ್ಲಿ 21 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ.
ನಿಕೋಲಸ್ ಪೂರನ್
ನಿಕೋಲಸ್ ಪೂರನ್ ಹರಾಜಿನಲ್ಲಿ ಬಿಡ್ಡಿಂಗ್ ವಾರ್ ಅನ್ನು ಸೃಷ್ಟಿಸಿದರು. ಲಕ್ನೋ ಸೂಪರ್ ಜಯಂಟ್ಸ್ ವೆಸ್ಟ್ ಇಂಡೀಸ್‌ನ ಎಡಗೈ ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್ ಅವರನ್ನು 21 ಕೋಟಿ ಕೊಟ್ಟು ಖರೀದಿಸಿದೆ.
ಇದನ್ನೂ ಓದಿ: IPL 2025: ಇತಿಹಾಸ ಸೃಷ್ಟಿಸಿದ ಅಜಿಂಕ್ಯ ರಹಾನೆ! ಐಪಿಎಲ್‌ನಲ್ಲಿ ಟೀಂ ಇಂಡಿಯಾ ಸ್ಟಾರ್ ಆಟಗಾರನ ವಿಭಿನ್ನ ದಾಖಲೆ
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









