Palash Muchhal calls off wedding : ಸ್ಮೃತಿಯ ತಂದೆ ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಮದುವೆಯನ್ನು ಮುಂದೂಡಲಾಗಿದೆ ಎಂದು ಪಾಲಕ್ ಮುಚ್ಚಲ್ ಕಳೆದ ಕೆಲವು ದಿನಗಳ ಹಿಂದೆ ದೃಢಪಡಿಸಿದರು. ಇದರ ನಡುವೆ, ಪಲಾಶ್ ಸ್ಮೃತಿಗೆ ಮೋಸ ಮಾಡಿದ್ದಾರೆ ಎಂಬ ಹೇಳಿಕೆಗಳು ವೈರಲ್ ಆಗಿವೆ. ಅಲ್ಲದೆ, ಯುವತಿಯೊಬ್ಬಳು ಪಲಾಶ್ ತನಗೆ ಮೋಸ ಮಾಡಿದ್ದಾರೆ ಎಂಬ ಆರೋಪ ಹೊರಿಸಿ, ಕೆಲ ಸ್ಕ್ರೀನ್ ಶಾಟ್ಸ್‌ಗಳನ್ನು ಹಂಚಿಕೊಂಡಿದ್ದರು.
ಹೌದು.. ಮೇರಿ ಡಿ'ಕೋಸ್ಟಾ ಎಂಬ ಯುವತಿ ಪಲಾಶ್ ಮುಚ್ಚಲ್ ಜೊತೆಗಿನ ಚಾಟ್‌ಗಳ ಹಲವಾರು ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ. ಈ ಸ್ಕ್ರೀನ್‌ಶಾಟ್‌ಗಳು ಅಧಿಕೃತವೇ ಎಂದು ದೃಢೀಕರಿಸಲಾಗಿಲ್ಲವಾದರೂ, ಹಂಚಿಕೊಂಡಿರುವ ಸ್ಕ್ರೀನ್‌ಶಾಟ್‌ಗಳಲ್ಲಿ ಪಲಾಶ್ ಅವರ ಹೆಸರು ಮತ್ತು ಐಡಿಯನ್ನು ಕಾಣಬಹುದು. ಇನ್ನು ಯುವತಿ ವೃತ್ತಿಯಲ್ಲಿ ನೃತ್ಯ ಸಂಯೋಜಕಿ ಎಂದು ಹೇಳಲಾಗುತ್ತಿದೆ. ವರದಿಯ ಪ್ರಕಾರ, ಪಲಾಶ್ ಮತ್ತು ಸ್ಮೃತಿ ಅವರ ಮದುವೆಗೂ ನೃತ್ಯ ಸಂಯೋಜನೆ ಮಾಡಲು ಸಿದ್ಧರಾಗಿದ್ದರು ಎನ್ನಲಾಗಿದೆ ಆದರೆ, ಈ ಕುರಿತು ಅಧಿಕೃತ ಮಾಹಿತಿ ಇಲ್ಲ.
ಇದನ್ನೂ ಓದಿ:"ಮರೆತು ಮುಂದೆ ಸಾಗುವ ಸಮಯ.." ಕೊನೆಗೂ ಮದುವೆ ರದ್ದಾದ ಬಗ್ಗೆ ಮೌನ ಮುರಿದ ಸ್ಮೃತಿ ಮಂಧಾನ!
ರೆಡ್ಡಿಟ್‌ನಲ್ಲಿ, ಹಲವಾರು ಬಳಕೆದಾರರು ಪಲಾಶ್ ಸ್ಮೃತಿ ಬಿಟ್ಟು ಬೇರೆ ಹುಡುಗಿಯ ಜೊತೆ ಕಾಣಿಸಿಕೊಂಡಿದ್ದರು ಎಂದು ಚರ್ಚೆ ನಡೆಸಿದ್ದಾರೆ. ವಿವಾಹಪೂರ್ವ ಕಾರ್ಯಕ್ರಮದಲ್ಲಿ ಸ್ಮೃತಿ ಅವರ ತಂದೆಗೆ ಈ ವಿಚಾರ ತಿಳಿದ ಹಿನ್ನಲೆ ಹೃದಯಾಘಾತವಾಯಿತು ಎಂಬ ಮಾತಿದೆ. ಆದರೆ, ಈ ಯಾವುದೇ ಹೇಳಿಕೆಗಳನ್ನು ದೃಢೀಕರಿಸಲಾಗಿಲ್ಲ ಮತ್ತು ಸ್ಮೃತಿ ಮತ್ತು ಪಲಾಶ್ ಈ ವದಂತಿಗಳಿಗೆ ಇನ್ನೂ ಪ್ರತಿಕ್ರಿಯಿಸಿಲ್ಲ.
ಇನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ಸ್ಕ್ರೀನ್‌ಶಾಟ್‌ಗಳು ವೈರಲ್ ಆಗಿವೆ. ಇದರಲ್ಲಿ ಮೇರಿ ಡಿ'ಕೋಸ್ಟಾ ಮತ್ತು ಪಲಾಶ್ ಮುಚ್ಚಲ್ ನಡುವಿನ ಸಂಭಾಷಣೆ ಕಾಣಬಹುದು. ಅಚ್ಚರಿ ವಿಚಾರ ಅಂದ್ರೆ, ಇದುವರೆಗೂ ಪಲಾಶ್ ಈ ಆರೋಪಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದರ ನಡುವೆ ಇದೀಗ ಸ್ಮೃತಿ ಮತ್ತು ಪಲಾಶ್ ತಮ್ಮ ಮದುವೆಯನ್ನು ಸಂಪೂರ್ಣವಾಗಿ ರದ್ದು ಮಾಡಿಕೊಂಡಿರುವುದಾಗಿ ಘೋಷಿಸಿದ್ದಾರೆ..
(ಗಮನಿಸಿ : ಸೋಷಿಯಲ್ ಮೀಡಿಯಾ ರೆಡ್ಡಿಟ್‌ನಲ್ಲಿ ವೈರಲ್ ಆಗಿದ್ದ ಪೋಸ್ಟ್ ಡಿಲೀಟ್ ಮಾಡಲಾಗಿದೆ. ಹಾಗಾಗಿ ಇದನ್ನು Zee Kannada News ದೃಢಪಡಿಸುವುದಿಲ್ಲ. ಸ್ಕ್ರೀನ್‌ಶಾಟ್‌ಗಳ ಸತ್ಯಾಸತ್ಯತೆಯನ್ನು ಸಹ ನಾವು ಪರಿಶೀಲಿಸಿಲ್ಲ. ಅಲ್ಲದೆ, ಈ ಮೇಲಿನ ಯಾವುದೇ ವಿಚಾರವನ್ನು ನಾವು ಖಚಿತಪಡಿಸುವುದಿಲ್ಲ.)









