ಕ್ರಿಕೆಟ್‌ ಲೋಕದಲ್ಲಿ ಸಂಚಲನ.. ಮ್ಯಾಚ್‌ ಫಿಕ್ಸಿಂಗ್‌ ಆರೋಪ.. ಮೂರು ಸ್ಟಾರ್‌ ಆಟಗಾರರ ಬಂಧನ!!

IND vs AUS: ಒಂದೆಡೆ ಭಾರತ-ಆಸ್ಟ್ರೇಲಿಯಾ ನಡುವೆ ಟೆಸ್ಟ್ ಪಂದ್ಯ ನಡೆಯುತ್ತಿದ್ದರೆ ಮತ್ತೊಂದೆಡೆ ದಕ್ಷಿಣ ಆಫ್ರಿಕಾದಿಂದ ಶಾಕಿಂಗ್ ನ್ಯೂಸ್ ಬಂದಿದೆ. ಮ್ಯಾಚ್ ಫಿಕ್ಸಿಂಗ್ ಆರೋಪದ ಮೇಲೆ ಮೂವರು ಆಟಗಾರರನ್ನು ಬಂಧಿಸಲಾಗಿದೆ.

Written by - Savita M B | Last Updated : Nov 30, 2024, 04:49 PM IST
  • ಭಾರತದಲ್ಲಿ ಕ್ರಿಕೆಟ್ ಗೆ ಧರ್ಮದ ಸ್ಥಾನಮಾನ ನೀಡಲಾಗಿದೆ.
  • ಒಂದೆಡೆ ಭಾರತ-ಆಸ್ಟ್ರೇಲಿಯಾ ನಡುವೆ ಟೆಸ್ಟ್ ಸರಣಿ ನಡೆಯುತ್ತಿರುವಾಗಲೇ ದಕ್ಷಿಣ ಆಫ್ರಿಕಾದಿಂದ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ
ಕ್ರಿಕೆಟ್‌ ಲೋಕದಲ್ಲಿ ಸಂಚಲನ.. ಮ್ಯಾಚ್‌ ಫಿಕ್ಸಿಂಗ್‌ ಆರೋಪ.. ಮೂರು ಸ್ಟಾರ್‌ ಆಟಗಾರರ ಬಂಧನ!! title=

Match fixing In Cricket: ಭಾರತದಲ್ಲಿ ಕ್ರಿಕೆಟ್ ಗೆ ಧರ್ಮದ ಸ್ಥಾನಮಾನ ನೀಡಲಾಗಿದೆ. ಎಷ್ಟೋ ಮಂದಿಗೆ ಕ್ರಿಕೆಟ್ ಎಂದರೆ ಪ್ರಾಣ.. ಆದರೆ ಯಾವಾಗ ಕ್ರಿಕೆಟ್ ಫಿಕ್ಸಿಂಗ್ ನಿಂದ ಕಳಂಕಿತವಾಗಿದೆಯೋ ಅಂದಿನಿಂದ ಕ್ರಿಕೆಟ್ ನ ಚಿತ್ರಣ ಕುಸಿದಿರುವುದು ಕಂಡು ಬರುತ್ತಿದೆ. ಒಂದೆಡೆ ಭಾರತ-ಆಸ್ಟ್ರೇಲಿಯಾ ನಡುವೆ ಟೆಸ್ಟ್ ಸರಣಿ ನಡೆಯುತ್ತಿರುವಾಗಲೇ ದಕ್ಷಿಣ ಆಫ್ರಿಕಾದಿಂದ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದ್ದು, ವಿಶ್ವದ ಮಾಜಿ ನಂಬರ್ ಒನ್ ಬೌಲರ್ ಲೊನ್ವಾಬೊ ತ್ಸೊಟ್ಸೊಬೆ ಸೇರಿದಂತೆ ದಕ್ಷಿಣ ಆಫ್ರಿಕಾದ ಮೂವರು ಆಟಗಾರರನ್ನು ಬಂಧಿಸಲಾಗಿದೆ.

Lonwabo Tsotsobe ಸೇರಿದಂತೆ ಮೂವರೂ ಮ್ಯಾಚ್ ಫಿಕ್ಸಿಂಗ್ ಆರೋಪ ಹೊತ್ತಿದ್ದಾರೆ. ಮೂವರೂ ಭ್ರಷ್ಟಾಚಾರದ ಗಂಭೀರ ಆರೋಪ ಎದುರಿಸುತ್ತಿದ್ದಾರೆ. ಮೂವರೂ ಪಂದ್ಯಗಳ ವೇಳೆ ರಿಗ್ಗಿಂಗ್ ಮತ್ತು ಲಂಚ ಪಡೆದ ಆರೋಪ ಎದುರಿಸುತ್ತಿದ್ದಾರೆ. ರಾಮ್ ಸ್ಲಾಮ್ ಚಾಲೆಂಜ್ ಪಂದ್ಯಾವಳಿಯ ಸಂದರ್ಭದಲ್ಲಿ, ಎಲ್ಲಾ ಮೂವರು ಆಟಗಾರರು ಭ್ರಷ್ಟಾಚಾರ ಮತ್ತು ಮ್ಯಾಚ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದರು ಎನ್ನಲಾಗಿದ್ದು, ಭ್ರಷ್ಟಾಚಾರ ತಡೆ ಕಾಯ್ದೆ, 2004ರ ಸೆಕ್ಷನ್ 15ರ ಅಡಿಯಲ್ಲಿ ಮೂವರೂ ಐದು ಪ್ರಕರಣಗಳಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದೆ. ಹಾಗಾಗಿ ಅವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.. 

ಇದನ್ನೂ ಓದಿ-ಐಶ್ವರ್ಯ ರೈ ಅವರ ಅತ್ತಿಗೆ ಯಾರು ಗೊತ್ತಾ..? ಮಾಜಿ ವಿಶ್ವ ಸುಂದರಿಯನ್ನೆ ಬೀಟ್‌ ಮಾಡುವಂತಿದ್ದಾರೆ ಸಹೋದರನ ಪತ್ನಿ..!!

ದಕ್ಷಿಣ ಆಫ್ರಿಕಾದ ಅಂತಾರಾಷ್ಟ್ರೀಯ ತಂಡದಲ್ಲಿ ಲೊನ್ವಾಬೊ ತ್ಸೊಟ್ಸೊಬೆ ಮಾತ್ರ ಸ್ಥಾನ ಪಡೆದರು. ಆದರೆ ಆ ಬಳಿಕ ಉತ್ತಮ ಪ್ರದರ್ಶನ ನೀಡದ ಕಾರಣ ತಂಡದಿಂದ ಕೈಬಿಡಲಾಗಿತ್ತು. ಅಥಿ ಎಂಬಾಲತಿ ಮತ್ತು ಥಾಮಿ ತ್ಸೊಲೆಕಿಲೆಗೆ ಒಂದೇ ಒಂದು ಅಂತಾರಾಷ್ಟ್ರೀಯ ಪಂದ್ಯವನ್ನು ಆಡುವ ಅವಕಾಶ ಸಿಕ್ಕಿರಲಿಲ್ಲ. 2014ರ ಟಿ20 ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಲೊನ್ವಾಬೊ ತ್ಸೊಟ್ಸೊಬೆ ಕೊನೆಯ ಬಾರಿ ಆಡಿದ್ದರು. ಭಾರತ ವಿರುದ್ಧ 3 ಟೆಸ್ಟ್ ಹಾಗೂ 10 ಏಕದಿನ ಪಂದ್ಯಗಳಲ್ಲಿ ಸೋತ್ಸೋಬೆ 22 ವಿಕೆಟ್ ಕಬಳಿಸಿದ್ದಾರೆ.

ಇದೆಲ್ಲದರ ಮಧ್ಯೆ, Lonwabo Tsotsobe ಲೆಜೆಂಡ್ ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್ ಮತ್ತು ಫಾಫ್ ಡುಪ್ಲೆಸಿಸ್ ಅವರೊಂದಿಗೆ ಆಡಿದ್ದಾರೆ. ಹೀಗಾಗಿ ಇದೀಗ ದಕ್ಷಿಣ ಆಫ್ರಿಕಾ ತಂಡಕ್ಕೆ ಮತ್ತೊಂದು ಕಳಂಕ ಬಂದಿದೆ ಎನ್ನಲಾಗುತ್ತಿದೆ.‌ 

ಇದನ್ನೂ ಓದಿ-ರಕ್ತದ ಮಡುವಿನಲ್ಲಿ ಬಿದ್ದ ದೊಡ್ಮನೆ ಕುಡಿ..?! ಯುವ ರಾಜ್‌ಕುಮಾರ್‌ ಅವತಾರಕ್ಕೆ ಅಭಿಮಾನಿಗಳು ಶಾಕ್‌..!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News