RCB ಆಟಗಾರ 33ನೇ ವಯಸ್ಸಿನಲ್ಲಿ 'ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ'..! 

ಶ್ರೀಲಂಕಾದ ಆಲ್‌ರೌಂಡರ್ ಮತ್ತು ವೇಗದ ಬೌಲರ್ ಇಸುರು ಉದಾನ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಈ ರೀತಿಯಾಗಿ ಅವರು ಒಂದು ದಶಕದ ಸುದೀರ್ಘ ವೃತ್ತಿಜೀವನವನ್ನು ಕೊನೆಗೊಳಿಸಿದ್ದಾರೆ.

Written by - Channabasava A Kashinakunti | Last Updated : Jul 31, 2021, 05:50 PM IST
  • ಶ್ರೀಲಂಕಾದ ಆಲ್‌ರೌಂಡರ್ ಮತ್ತು ವೇಗದ ಬೌಲರ್ ಇಸುರು ಉದಾನ
  • ಉದಾನ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ
  • 12 ವರ್ಷಗಳ ಅವಧಿಯಲ್ಲಿ ಅವರು ಕೇವಲ 45 ವಿಕೆಟ್‌ ಪಡೆದ ಉದಾನ
RCB ಆಟಗಾರ 33ನೇ ವಯಸ್ಸಿನಲ್ಲಿ 'ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ'..! 

ಕೊಲಂಬೊ : ಶ್ರೀಲಂಕಾದ ಆಲ್‌ರೌಂಡರ್ ಮತ್ತು ವೇಗದ ಬೌಲರ್ ಇಸುರು ಉದಾನ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಈ ರೀತಿಯಾಗಿ ಅವರು ಒಂದು ದಶಕದ ಸುದೀರ್ಘ ವೃತ್ತಿಜೀವನವನ್ನು ಕೊನೆಗೊಳಿಸಿದ್ದಾರೆ. 33 ವರ್ಷದ ಉದಾನ ಅವರು ಇತ್ತೀಚೆಗೆ ಭಾರತದ ವಿರುದ್ಧ ಸೀಮಿತ ಓವರ್‌ಗಳ ಸರಣಿಯ ಭಾಗವಾಗಿದ್ದರು.

ಉದಾನಾ(Isuru Udana) ಭಾರತದ ವಿರುದ್ಧ ಮೊದಲ ಏಕದಿನ ಮತ್ತು ಮೊದಲ ಎರಡು ಟಿ 20 ಪಂದ್ಯಗಳಲ್ಲಿ ಭಾಗವಹಿಸಿದ್ದರು ಆದರೆ ಅವರಿಗೆ ಒಂದು ವಿಕೆಟ್ ಕೂಡ ಪಡೆಯಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ : Tokyo Olympics Discus throw: ಫೈನಲ್ ಗೆ ಲಗ್ಗೆ ಇಟ್ಟ ಕಮಲ್‌ ಪ್ರೀತ್ ಕೌರ್, ಚಿನ್ನದ ಬೇಟೆಗೆ ಸಜ್ಜು

ಉದಾನ ವೃತ್ತಿಜೀವನದ ಸಾಧನೆಗಳು :

ಇಸುರು ಉದಾನ ಕೇವಲ 12 ಏಕದಿನ ಪಂದ್ಯಗಳು ಮತ್ತು 35 ಟಿ 20 ಅಂತರಾಷ್ಟ್ರೀಯ ಪಂದ್ಯ(International Matches)ಗಳನ್ನು ಆಡಿದ್ದು, 12 ವರ್ಷಗಳ ಅವಧಿಯಲ್ಲಿ ಅವರು ಕೇವಲ 45 ವಿಕೆಟ್‌ಗಳನ್ನು ಪಡೆದಿದ್ದಾರೆ. ಎರಡು ಸೀಸನ್‌ಗಳ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದರು.

ಈ ಕುರಿತು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಇಸುರು ಉದಾನ, 'ಕ್ರಿಕೆಟ್ ಎಂದೆಂದಿಗೂ ನನ್ನ ಲವ್(Criceket is my Love). ರಾಷ್ಟ್ರೀಯ ಗೌರವ ಮತ್ತು ಕ್ರೀಡಾ ಮನೋಭಾವವನ್ನು ಉಳಿಸಿಕೊಂಡು ನಾನು ಯಾವಾಗಲೂ ಮೈದಾನದಲ್ಲಿ ಮತ್ತು ಹೊರಗೆ ನನ್ನ ಶೇ. 100 ಶ್ರಮ ನೀಡಿದ್ದೇನೆ. ನಾನು ನಿವೃತ್ತಿ ಹೊಂದಲು ಇದು ಸರಿಯಾದ ಸಮಯ ಎಂದು ಭಾವಿಸಿದ್ದೇನೆ ಎಂದು ಹೇಳಿದ್ದಾರೆ.

ಉದಾನ ಕೊಹ್ಲಿಯ ವಿಶೇಷ ಬೌಲರ್ ಆಗಿದ್ದರು :

ಇಸುರು ಉದಾನ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ(Virat Kohli) ನಾಯಕತ್ವದ ರಾಯಲ್ ಚಾಲೆಂಜರ್ ಬೆಂಗಳೂರು ತಂಡದಲ್ಲಿ ಆಡುತ್ತಿದ್ದರು. 2020 ರಲ್ಲಿ, ರಾಯಲ್ ಚಾಲೆಂಜರ್ ಬೆಂಗಳೂರು ಈ ಶ್ರೀಲಂಕಾದ ಬೌಲರ್ ಅನ್ನು ಖರೀದಿಸಿತು. ಆದರೂ ಐಪಿಎಲ್ 2021 ರಲ್ಲಿ ಮಿನಿ ಹರಾಜಿಗೆ ಮುಂಚಿತವಾಗಿ ಅವರನ್ನು ಕೈ ಬಿಡಲಾಯಿತು. ಆದರೆ ಉದಾನ ಐಪಿಎಲ್ ಆಡಿದ ವರ್ಷ, ಅವರು ಆರ್ಸಿಬಿಗೆ 10 ಪಂದ್ಯಗಳಲ್ಲಿ 8 ವಿಕೆಟ್ ಪಡೆದಿದ್ದಾರೆ.

ಇದನ್ನೂ ಓದಿ : Tokyo Olympics 2020: ಚಿನ್ನದ ಪದಕ ಗೆಲ್ಲುವ ಹಾಕಿ ಆಟಗಾರರಿಗೆ 2.25 ಕೋಟಿ ರೂ. ಬಹುಮಾನ

ಇಸುರು ಉದಾನ ವೃತ್ತಿಜೀವನ :

ಉದಾನ 2009 ರ ಟಿ 20 ವಿಶ್ವಕಪ್‌ನಲ್ಲಿ ಶ್ರೀಲಂಕಾ(Srilanka) ಪರ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಪಾದಾರ್ಪಣೆ ಮಾಡಿದರು. ಅವರು 21 ಏಕದಿನ ಪಂದ್ಯಗಳಲ್ಲಿ 52.78 ಸರಾಸರಿಯಲ್ಲಿ 18 ವಿಕೆಟ್ ಮತ್ತು 34 ಟಿ 20 ಪಂದ್ಯಗಳಲ್ಲಿ 33.89 ಸರಾಸರಿಯಲ್ಲಿ 27 ವಿಕೆಟ್ ಪಡೆದಿದ್ದಾರೆ.

ಬ್ಯಾಟ್ಸ್‌ಮನ್‌ ಆಗಿ, ಅವರು ಏಕದಿನದಲ್ಲಿ 237 ರನ್ ಮತ್ತು ಟಿ 20 ಯಲ್ಲಿ 256 ರನ್ ಗಳಿಸಿದ್ದಾರೆ. 2020 ರ ಐಪಿಎಲ್ ಸೀಸನ್‌ನಲ್ಲಿ ಶ್ರೀಲಂಕಾದ ಏಕೈಕ ಆಟಗಾರ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

More Stories

Trending News