ವಿನೋದ್ ಕಾಂಬ್ಳಿ ಬದುಕಿರುವವರೆಗೂ ಪ್ರತೀ ತಿಂಗಳು 30 ಸಾವಿರ ಸಹಾಯಧನ ಕೊಡುವುದಾಗಿ ಭರವಸೆ ನೀಡಿದ ಲೆಜೆಂಡರಿ ಕ್ರಿಕೆಟರ್!

ಡಿಸೆಂಬರ್ 2024 ರಲ್ಲಿ, ಅವರ ಆರೋಗ್ಯದಲ್ಲಿ ಹಠಾತ್ ಕ್ಷೀಣತೆ ಉಂಟಾದ ಕಾರಣ, ಅವರು ಹಲವಾರು ದಿನಗಳ ಕಾಲ ಆಸ್ಪತ್ರೆಯಲ್ಲಿ ಉಳಿಯಬೇಕಾಯಿತು. ಈಗ ಸುನಿಲ್ ಗವಾಸ್ಕರ್ ಅವರ ಪಾಲಿನ ದೇವರಾಗಿ ಮುಂದೆ ಬಂದಿದ್ದಾರೆ.

Written by - Bhavishya Shetty | Last Updated : Apr 15, 2025, 09:12 PM IST
    • ವಿನೋದ್ ಕಾಂಬ್ಳಿ ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತಿ ಪಡೆಯಲಿದ್ದಾರೆ
    • ಸುನಿಲ್ ಗವಾಸ್ಕರ್ ಅವರ ಪಾಲಿನ ದೇವರಾಗಿ ಮುಂದೆ ಬಂದಿದ್ದಾರೆ.
    • ಚಾಂಪ್ಸ್ ಫೌಂಡೇಶನ್ ಕಾಂಬ್ಳಿಯ ಜೀವನದಲ್ಲಿ ಬೆಂಬಲವಾಗಿ ನಿಲ್ಲಲಿದೆ
ವಿನೋದ್ ಕಾಂಬ್ಳಿ ಬದುಕಿರುವವರೆಗೂ ಪ್ರತೀ ತಿಂಗಳು 30 ಸಾವಿರ ಸಹಾಯಧನ ಕೊಡುವುದಾಗಿ ಭರವಸೆ ನೀಡಿದ ಲೆಜೆಂಡರಿ ಕ್ರಿಕೆಟರ್!
Sunil Gavaskar Help Vinod Kambli

ಸಚಿನ್ ತೆಂಡೂಲ್ಕರ್ ಅವರ ಬಾಲ್ಯದ ಗೆಳೆಯ ಮತ್ತು ದಂತಕಥೆ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತಿ ಪಡೆಯಲಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ. 

Add Zee News as a Preferred Source

ಇದನ್ನೂ ಓದಿ: ಹೊಗೇನಕಲ್ ನಲ್ಲಿ ಅಕ್ರಮ ಮದ್ಯ‌ ಮಾರಾಟ- ನೀರಿನಲ್ಲಿ ಪ್ರವಾಸಿಗರ ಜೀವದೊಂದಿಗೆ ಚೆಲ್ಲಾಟ

ಡಿಸೆಂಬರ್ 2024 ರಲ್ಲಿ, ಅವರ ಆರೋಗ್ಯದಲ್ಲಿ ಹಠಾತ್ ಕ್ಷೀಣತೆ ಉಂಟಾದ ಕಾರಣ, ಅವರು ಹಲವಾರು ದಿನಗಳ ಕಾಲ ಆಸ್ಪತ್ರೆಯಲ್ಲಿ ಉಳಿಯಬೇಕಾಯಿತು. ಈಗ ಸುನಿಲ್ ಗವಾಸ್ಕರ್ ಅವರ ಪಾಲಿನ ದೇವರಾಗಿ ಮುಂದೆ ಬಂದಿದ್ದಾರೆ. ಗವಾಸ್ಕರ್ ಅವರ ಪ್ರತಿಷ್ಠಾನದ ಅಡಿಯಲ್ಲಿ, ಕಾಂಬ್ಳಿಗೆ ವಾರ್ಷಿಕ ವೈದ್ಯಕೀಯ ವೆಚ್ಚಗಳ ಜೊತೆಗೆ ಮಾಸಿಕ ವೆಚ್ಚಗಳಿಗೆ ಹಣವನ್ನು ಒದಗಿಸುವ ಭರವಸೆ ನೀಡಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಸುನಿಲ್ ಗವಾಸ್ಕರ್ ಅವರ ಚಾಂಪ್ಸ್ ಫೌಂಡೇಶನ್ ಕಾಂಬ್ಳಿಯ ಜೀವನದಲ್ಲಿ ಬೆಂಬಲವಾಗಿ ನಿಲ್ಲಲಿದೆ. ಗವಾಸ್ಕರ್ ಅವರ ಚಾಂಪ್ಸ್ ಫೌಂಡೇಶನ್ ಅಡಿಯಲ್ಲಿ ಕಾಂಬ್ಳಿ ಪ್ರತಿ ತಿಂಗಳು 30 ಸಾವಿರ ರೂ. ಮತ್ತು ವಾರ್ಷಿಕವಾಗಿ 3 ಲಕ್ಷ 60 ಸಾವಿರ ರೂ. ಪಡೆಯಲಿದ್ದಾರೆ. ಇದಲ್ಲದೆ, ವಾರ್ಷಿಕವಾಗಿ 30 ಸಾವಿರ ರೂ. ಮೌಲ್ಯದ ವೈದ್ಯಕೀಯ ವೆಚ್ಚಗಳು ಸಹ ಲಭ್ಯವಿರುತ್ತವೆ.

ಇದನ್ನೂ ಓದಿ:  Forgotten History: ಮಹಿಷಾಸುರ ಮರ್ದಿನಿ: ಭಾರತದ ಮೊದಲ ಪ್ಯಾನ್-ಇಂಡಿಯಾ ಚಿತ್ರದ ರೋಚಕ ಇತಿಹಾಸ

ಕಾಂಬ್ಳಿ 'ಕ್ರಿಕೆಟ್ ದೇವರು' ಸಚಿನ್ ತೆಂಡೂಲ್ಕರ್ ಅವರ ಬಾಲ್ಯದ ಸ್ನೇಹಿತ. ಕಾಂಬ್ಳಿ ಅನಾರೋಗ್ಯದ ಸಮಯದಲ್ಲಿ ಸಚಿನ್ ಅವರ ಬೆಂಬಲವನ್ನೂ ಪಡೆದರು. ಕಾಂಬ್ಳಿಯ ಎರಡು ಶಸ್ತ್ರಚಿಕಿತ್ಸೆಗಳಿಗೆ ಅವರು ಆರ್ಥಿಕ ನೆರವು ನೀಡಿದರು. ಇದನ್ನು ಸ್ವತಃ ಕಾಂಬ್ಳಿ ಬಹಿರಂಗಪಡಿಸಿದ್ದಾರೆ. ಈಗ ಗವಾಸ್ಕರ್ ಅವರಿಗೆ ಸಹಾಯ ಮಾಡಲು ಕೈ ಚಾಚಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

 

About the Author

Bhavishya Shetty

ಭವಿಷ್ಯ ಎ ಶೆಟ್ಟಿಯವರು ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಸೀನಿಯರ್‌ ಕಂಟೆಂಟ್‌ ಎಡಿಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಏಳು ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2022 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ರೀಡೆ, ಜೀವನಶೈಲಿ, ಟೆಕ್ನಾಲಜಿ, ಎನ್‌ಆರ್‌ಐ ಇತ್ಯಾದಿಗಳಲ್ಲಿ ವ್ಯಾಪಕವಾಗಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2018ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ದುಡಿದಿದ್ದಾರೆ. ...Read More

Trending News