IND vs NZ Final: ಟೀಂ ಇಂಡಿಯಾಗೆ 252 ರನ್‌ಗಳ ಟಾರ್ಗೆಟ್‌ ನೀಡಿದ ನ್ಯೂಜಿಲೆಂಡ್‌

ICC Champions Trophy 2025: ಟಾಸ್‌ ಗೆದ್ದ ನ್ಯೂಜಿಲೆಂಡ್‌ ನಾಯಕ ಮಿಚೆಲ್ ಸ್ಯಾಂಟ್ನರ್ ಬ್ಯಾಟಿಂಗ್‌ ಆಯ್ದುಕೊಂಡರು. ಅದರಂತೆ ಅರಂಭಿಕರಾಗಿ ಕಣಕ್ಕಿಳಿದ ವಿಲ್‌ ಯಂಗ್‌ ಮತ್ತು ರಚಿನ್‌ ರವೀಂದ್ರ ಮೊದಲ ವಿಕೆಟ್‌ಗೆ ಉತ್ತಮ ಜೊತೆಯಾಟವಾಡುತ್ತಿದ್ದರು. ತಂಡದ ಮೊತ್ತ 57 ಆಗಿದ್ದಾಗ ವಿಲ್‌ ಯಂಗ್‌ (15) ವರುಣ್‌ ಚಕ್ರವರ್ತಿ ಬೌಲಿಂಗ್‌ನಲ್ಲಿ LBWಗೆ ಬಲಿಯಾದರು.

Written by - Puttaraj K Alur | Last Updated : Mar 9, 2025, 06:47 PM IST
  • ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಫೈನಲ್‌ ಪಂದ್ಯ‌
  • ನ್ಯೂಜಿಲೆಂಡ್‌ಗೆ ಆಘಾತ ನೀಡಿದ ಕುಲದೀಪ್‌ & ವರುಣ್‌ ಚಕ್ರವರ್ತಿ
  • ಟೀಂ ಇಂಡಿಯಾಗೆ 252 ರನ್‌ಗಳ ಟಾರ್ಗೆಟ್‌ ನೀಡಿದ ನ್ಯೂಜಿಲೆಂಡ್‌
IND vs NZ Final: ಟೀಂ ಇಂಡಿಯಾಗೆ 252 ರನ್‌ಗಳ ಟಾರ್ಗೆಟ್‌ ನೀಡಿದ ನ್ಯೂಜಿಲೆಂಡ್‌
ಟೀಂ ಇಂಡಿಯಾಗೆ 252 ರನ್‌ಗಳ ಟಾರ್ಗೆಟ್‌

IND vs NZ Final: ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯ ಫೈನಲ್‌ ಪಂದ್ಯದಲ್ಲಿ ಟೀಂ ಇಂಡಿಯಾಗೆ 252 ರನ್‌ಗಳ ಟಾರ್ಗೆಟ್‌ ನೀಡಿದೆ. ಟಾಸ್‌ ಗೆದ್ದ ನ್ಯೂಜಿಲೆಂಡ್‌ ನಾಯಕ ಮಿಚೆಲ್ ಸ್ಯಾಂಟ್ನರ್ ಬ್ಯಾಟಿಂಗ್‌ ಆಯ್ದುಕೊಂಡರು. ನಿಗದಿತ 50 ಓವರ್‌ಗಳಲ್ಲಿ  7 ವಿಕೆಟ್‌ ಕಳೆದುಕೊಂಡ ಕಿವೀಡ್‌ 251 ರನ್‌ ಗಳಿಸಿತು. 

Add Zee News as a Preferred Source

ಭಾರತೀಯ ಬೌಲರ್‌ಗಳು ಬಲಿಷ್ಠ ನ್ಯೂಜಿಲೆಂಡ್‌ಗೆ ಆರಂಭಿಕ ಆಘಾತ ನೀಡಿದರು. ಭಾರತದ ಪ್ರಮುಖ ವಿಕೆಟ್ ಟೇಕರ್ ಕುಲದೀಪ್‌ ಯಾದವ್‌ ಮತ್ತು ವರುಣ್‌ ಚಕ್ರವರ್ತಿ ಅದ್ಭುತ ಬೌಲಿಂಗ್‌ನಿಂದಾಗಿ ಕಿವೀಡ್‌ ತಂಡವನ್ನು ಕಟ್ಟಿ ಹಾಕಿದರು.  ಅರಂಭಿಕರಾಗಿ ಕಣಕ್ಕಿಳಿದ ವಿಲ್‌ ಯಂಗ್‌ ಮತ್ತು ರಚಿನ್‌ ರವೀಂದ್ರ ಮೊದಲ ವಿಕೆಟ್‌ಗೆ ಉತ್ತಮ ಜೊತೆಯಾಟವಾಡುತ್ತಿದ್ದರು. ತಂಡದ ಮೊತ್ತ 57 ಆಗಿದ್ದಾಗ ವಿಲ್‌ ಯಂಗ್‌ (15) ವರುಣ್‌ ಚಕ್ರವರ್ತಿ ಬೌಲಿಂಗ್‌ನಲ್ಲಿ LBWಗೆ ಬಲಿಯಾದರು.

ಇದನ್ನೂ ಓದಿ: ಚಾಂಪಿಯನ್ಸ್‌ ಟ್ರೋಫಿ ಬಳಿಕ ರೋಹಿತ್‌ ಶರ್ಮಾ ನಿವೃತ್ತಿಯಾದ್ರೆ ʼಈʼ ಆಟಗಾರನಿಗೆ ಉತ್ತರಾಧಿಕಾರಿ ಸ್ಥಾನ?

ನಂತರ ಭಾರತೀಯ ಬೌಲರ್‌ಗಳನ್ನು ಮನಬಂದಂತೆ ದಂಡಿಸುತ್ತಿದ್ದ ರಚಿನ್‌ ರವೀಂದ್ರ (37) ಕುಲದೀಪ್‌ ಯಾದವ್‌ ಬೌಲಿಂಗ್‌ನಲ್ಲಿ ಬೌಲ್ಡ್ ಆದರು. ಇವರ ನಂತರ ಉತ್ತಮ ಆಟದ ಭರವಸೆ ನೀಡಿದ್ದ ಕೇನ್ ವಿಲಿಯಮ್ಸನ್ (11) ಕುಲದೀಪ್‌ ಯಾದವ್‌ ಬೌಲಿಂಗ್‌ನಲ್ಲಿ ಅವರಿಗೇ ಕ್ಯಾಚ್‌ ನೀಡಿ ಪೆವಿಲಿಯನ್‌ ಸೇರಿದರು. ನಂತರ ರವೀಂದ್ರ ಜಡೇಜಾ ಬೌಲಿಂಗ್‌ನಲ್ಲಿ ಟಾಮ್ ಲ್ಯಾಥಮ್ (22) LBWಗೆ ಬಲಿಯಾದರು. ಬಳಿಕ ಉತ್ತಮವಾಗಿ ಆಡುತ್ತಿದ್ದ ನಾಯಕ ಗ್ಲೆನ್ ಫಿಲಿಪ್ಸ್ (34) ವರುಣ್‌ ಚಕ್ರವರ್ತಿ ಬೌಲಿಂಗ್‌ನಲ್ಲಿ ಬೌಲ್ಡ್‌ ಆದರು. ಕೊನೆಯಲ್ಲಿ ಬಂದ ಮೈಕೆಲ್ ಬ್ರೇಸ್‌ವೆಲ್ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿ 40 ಎಸೆತಗಳಲ್ಲಿ ಔಟಾಗದೆ 53​ ರನ್‌ ಗಳಿಸಿದರು. 

ಭಾರತ ಪರ ಬೌಲಿಂಗ್‌ನಲ್ಲಿ ಕುಲದೀಪ್‌ ಯಾದವ್‌ 40ಕ್ಕೆ 2 ವಿಕೆಟ್‌ ಪಡೆದು ಮಿಂಚಿದರೆ, ವರುಣ್‌ ಚಕ್ರವರ್ತಿ 45ಕ್ಕೆ 2 ಮತ್ತು ರವೀಂದ್ರ ಜಡೇಜಾ  ಮತ್ತು ಮೊಹಮ್ಮದ್‌ ಶಮಿ ತಲಾ ಒಂದೊಂದು ವಿಕೆಟ್‌ ಗಳಿಸಿದರು. 

 ಎರಡೂ ತಂಡಗಳ ಸ್ಕ್ವಾಡ್‌ ಈ ರೀತಿ ಇದೆ

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ಕೆ.ಎಲ್.ರಾಹುಲ್ (ವಿಕೆಟ್‌ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ

ನ್ಯೂಜಿಲೆಂಡ್‌ ತಂಡ: 

ಮಿಚೆಲ್ ಸ್ಯಾಂಟ್ನರ್ (ನಾಯಕ), ವಿಲ್ ಯಂಗ್, ರಾಚಿನ್ ರವೀಂದ್ರ, ಕೇನ್ ವಿಲಿಯಮ್ಸನ್, ಡ್ಯಾರಿಲ್ ಮಿಚೆಲ್, ಟಾಮ್ ಲ್ಯಾಥಮ್ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್‌ವೆಲ್,  ನಾಥನ್ ಸ್ಮಿತ್, ಕೈಲ್ ಜೇಮಿಸನ್, ವಿಲಿಯಂ ಒರೂರ್ಕ್

ಇದನ್ನೂ ಓದಿ: Team India : ಇಂದು ಫೈನಲ್‌ ಗೆದ್ದರೂ.. ಸೋತರೂ.. ಈ 4 ಭಾರತೀಯ ಆಟಗಾರರು ನಿವೃತ್ತಿ ಘೋಷಿಸಲಿದ್ದಾರೆ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News