)
ಭಾರತೀಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದಾರೆ. ಇತ್ತೀಚೆಗೆಯಷ್ಟೇ ಐಪಿಎಲ್ಗೂ ಗುಡ್ಬೈ ಹೇಳಿರುವ ಅವರು, ತಮ್ಮ ವೃತ್ತಿಜೀವನದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಟೆಸ್ಟ್ಗಳಲ್ಲಿ ಅತಿ ಹೆಚ್ಚು ವಿಕೆಟ್ಗಳನ್ನು ಪಡೆದವರ ಪಟ್ಟಿಯಲ್ಲಿ ಅವರು ಏಳನೇ ಸ್ಥಾನದಲ್ಲಿದ್ದಾರೆ.
ಕ್ರಿಕೆಟ್ ಜಗತ್ತಿನಲ್ಲಿ ಅಶ್ವಿನ್ ಅವರ ಸ್ಥಾನಮಾನ ಹೆಚ್ಚಾದಂತೆ, ಅವರ ಗಳಿಕೆಯೂ ಹೆಚ್ಚಿದೆ. ಅವರು ಟೀಮ್ ಇಂಡಿಯಾಕ್ಕಾಗಿ ಟೆಸ್ಟ್ಗಳಲ್ಲಿ 500 ಕ್ಕೂ ಹೆಚ್ಚು ವಿಕೆಟ್ಗಳನ್ನು ಪಡೆದಿದ್ದಾರೆ. ಕ್ರಿಕೆಟ್ ಮೈದಾನದಲ್ಲಿ ಉತ್ತಮ ಹೆಸರು ಗಳಿಸಿರುವ ಅಶ್ವಿನ್ ಅವರ ಗಳಿಕೆಯಲ್ಲಿ ಯಾವುದೇ ಇಳಿಕೆಯಾಗಿಲ್ಲ. ಅಶ್ವಿನ್ ಅವರ ಒಟ್ಟು ಸಂಪತ್ತು 100 ಕೋಟಿ ರೂ.ಗಳಿಗಿಂತ ಹೆಚ್ಚು ಎಂದು ವರದಿಯಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಅವರ ಒಟ್ಟು ಆಸ್ತಿ 132 ಕೋಟಿ ರೂ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಿಂದ (BCCI) ಸಂಬಳ, ಐಪಿಎಲ್ ಒಪ್ಪಂದಗಳು ಮತ್ತು ಜಾಹೀರಾತುಗಳಿಂದ ಬರುವ ಆದಾಯವೂ ಇದೆ. ಸ್ಪಿನ್ನರ್ ಅಶ್ವಿನ್ ಬಿಸಿಸಿಐ ಗ್ರೇಡ್ ಎ ಭಾಗವಾಗಿರುವುದರಿಂದ 5 ಕೋಟಿ ರೂ. ಪಡೆಯುತ್ತಾರೆ. ಅಶ್ವಿನ್ ಐಪಿಎಲ್ 2022 ರಿಂದ ರಾಜಸ್ಥಾನ ರಾಯಲ್ಸ್ನ ಭಾಗವಾಗಿದ್ದಾರೆ. ಫ್ರಾಂಚೈಸಿ ಅವರಿಗೆ ಪ್ರತಿ ವರ್ಷ 5 ಕೋಟಿ ರೂ. ಪಾವತಿಸುತ್ತಿತ್ತು. ಇತ್ತೀಚೆಗೆ ದುಬೈನಲ್ಲಿ ನಡೆದ ಮೆಗಾ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅವರನ್ನು 9.75 ಕೋಟಿ ರೂ.ಗೆ ಖರೀದಿಸಿತ್ತು.
ಅಶ್ವಿನ್ ಜಾಹೀರಾತುಗಳ ಮೂಲಕವೂ ಉತ್ತಮ ಆದಾಯವನ್ನು ಗಳಿಸುತ್ತಿದ್ದಾರೆ. ಇವುಗಳಲ್ಲಿ ಮೈಂತ್ರಾ, ಬಾಂಬೆ ಶೇವಿಂಗ್ ಕಂಪನಿ, ಮನ್ನಾ ಫುಡ್ಸ್, ಅರಿಸ್ಟೋಕ್ರಾಟ್ ಬ್ಯಾಗ್ಸ್, ಒಪ್ಪೊ, ಮೂವ್, ಸ್ಪೆಕ್ಸ್ಮೇಕರ್ಸ್, ಜೂಮ್ಕಾರ್, ಕೊಕೊ ಸ್ಟುಡಿಯೋ ತಮಿಳು ಮತ್ತು ಡ್ರೀಮ್ 11 ಸೇರಿವೆ. ಇದರ ಜೊತೆಗೆ, ಅಶ್ವಿನ್ ಚೆನ್ನೈನಲ್ಲಿ ಸುಮಾರು 9 ಕೋಟಿ ರೂ. ಮೌಲ್ಯದ ದೊಡ್ಡ ಬಂಗಲೆ ಹೊಂದಿದ್ದಾರೆ.
ಸೆಪ್ಟೆಂಬರ್ 17, 1986 ರಂದು ಜನಿಸಿದ ಅಶ್ವಿನ್ ಅವರಿಗೆ ಐಷಾರಾಮಿ ಕಾರುಗಳೆಂದರೆ ತುಂಬಾ ಇಷ್ಟ. ಅವರ ಬಳಿ ಐಷಾರಾಮಿ ಬ್ರಾಂಡ್ ಕಾರುಗಳಿವೆ. ಅವರ ಬಳಿ ಆಡಿ Q7 SUV ಮತ್ತು ರೋಲ್ಸ್ ರಾಯ್ಸ್ ಕಾರುಗಳಿವೆ. ಅವುಗಳ ಬೆಲೆ ಸುಮಾರು 6 ಕೋಟಿ ರೂ.