)
Team India Asia Cup 2025 Final: ಏಷ್ಯಾ ಕಪ್ 2025 ರಲ್ಲಿ ಟೀಮ್ ಇಂಡಿಯಾ ಅಜೇಯವಾಗಿದೆ. ಭಾರತ ತಂಡವು ಒಂದರ ನಂತರ ಒಂದರಂತೆ ಪಂದ್ಯಗಳನ್ನು ಗೆದ್ದು ಇದೀಗ ಏಷ್ಯಾಕಪ್ ಫೈನಲ್ ಪ್ರವೇಶಿಸಿದೆ. ಎರಡನೇ ಸೂಪರ್ 4 ಪಂದ್ಯ ನಡೆದಿದ್ದು ಟೀಮ್ ಇಂಡಿಯಾ, ಬಾಂಗ್ಲಾದೇಶ ವಿರುದ್ಧ ೪೧ ರನ್ಗಳ ಗೆಲುವು ಸಾಧಿಸಿದೆ.
ಈ ಪಂದ್ಯದಲ್ಲಿ ಟೀಂ ಇಂಡಿಯಾದ ಅಭಿಷೇಕ್ ಶರ್ಮಾ ಮತ್ತು ಶುಭ್ಮನ್ ಗಿಲ್ ಮೋಡಿ ಮಾಡಿದ್ದರೆ, ಬೌಲಿಂಗ್ನಲ್ಲಿ ಕುಲ್ದೀಪ್ ಯಾದವ್ ಅಬ್ಬರಿಸಿದ್ದರು.
ಬಾಂಗ್ಲಾದೇಶ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿತು. ಎರಡೂ ತಂಡಗಳು ಸೂಪರ್ ಫೋರ್ ಅನ್ನು ಉತ್ತಮವಾಗೇ ಪ್ರಾರಂಭಿಸಿದವು. ಟೀಮ್ ಇಂಡಿಯಾ ಪಾಕಿಸ್ತಾನವನ್ನು ಸೋಲಿಸಿದರೆ, ಬಾಂಗ್ಲಾದೇಶ ಶ್ರೀಲಂಕಾವನ್ನು ಸೋಲಿಸಿ ಸೂಪರ್ ಫೋರ್ಗೆ ಪ್ರವೇಶ ಮಾಡಿತ್ತು. ಇದೀಗ ಭಾರತ ಬಾಂಗ್ಲಾದೇಶವನ್ನು ಸೋಲಿಸಿ, ಫೈನಲ್ ಪ್ರವೇಶಿಸಿದೆ.