)
ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದ ರಿಷಭ್ ಪಂತ್ ನೇತೃತ್ವದ ಟೀಮ್ ಇಂಡಿಯಾ ಕೊನೆ ದಿನದಲ್ಲಿ ಬೃಹತ್ ರನ್ಗಳನ್ನು ಕಲೆ ಹಾಕಬೇಕಿದೆ. ಪಂದ್ಯವನ್ನು ತನ್ನ ಹಿಡಿತದಲ್ಲಿ ಹಿಡಿದುಕೊಂಡಿರುವ ದಕ್ಷಿಣ ಆಫ್ರಿಕಾ ಗೆಲ್ಲುವ ನಿರೀಕ್ಷೆಯಲ್ಲಿದೆ. ಆದರೆ ಈ ಪಂದ್ಯವನ್ನು ಟೀಮ್ ಇಂಡಿಯಾ ಗೆಲ್ಲುವ ಅವಕಾಶ ಕೂಡ ಇದ್ದು ಅದಕ್ಕೆ ಹೀಗೆ ಮಾಡಲೇಬೇಕು.
ಗುವಾಹಟಿಯ ಬರ್ಸಾಪುರದ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ತೆಂಬಾ ಬವುಮಾ ನೇತೃತ್ವದ ಆಫ್ರಿಕಾ ಭರ್ಜರಿ ಬ್ಯಾಟಿಂಗ್ ಮಾಡಿತ್ತು. ಮುತ್ತುಸ್ವಾಮಿ ಅವರ ಸೆಂಚುರಿ ಹಾಗೂ ಜಾನ್ಸೆನ್ ಅವರ ಅರ್ಧಶತಕದ ನೆರವಿನಿಂದ ಆಫ್ರಿಕಾ ಮೊದಲ ಇನ್ನಿಂಗ್ಸ್ನಲ್ಲಿ 489 ರನ್ಗಳನ್ನು ಕಲೆ ಹಾಕಿತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ್ದ ಟೀಮ್ ಇಂಡಿಯಾ, ಓಪನರ್ ಯಶಸ್ವಿ ಜೈಸ್ವಾಲ್ ಅರ್ಧಶತಕದೊಂದಿಗೆ 201 ರನ್ಗಳಿಗೆ ಆಲೌಟ್ ಅಗಿತ್ತು.
ಹೀಗಾಗಿ ಆಫ್ರಿಕಾ 288 ರನ್ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡಿತ್ತು. ಕೊನೆ ಇನ್ನಿಂಗ್ಸ್ನಲ್ಲೂ ಯಶಸ್ವಿ ಬ್ಯಾಟಿಂಗ್ ಮಾಡಿದ್ದ ಬವುಮಾ ನೇತೃತ್ವದ ಆಫ್ರಿಕಾ, ಐದು ವಿಕೆಟ್ಗೆ 260 ರನ್ಗಳನ್ನು ಕಲೆ ಹಾಕಿತು. ಇದರಿಂದ ದಕ್ಷಿಣ ಆಫ್ರಿಕಾ ತಂಡ ಒಟ್ಟು 549 ರನ್ಗಳ ಟಾರ್ಗೆಟ್ ಅನ್ನು ಟೀಮ್ ಇಂಡಿಯಾಗೆ ನೀಡಿದೆ. ಈ ಬೃಹತ್ ರನ್ಗಳನ್ನು ಚೇಸಿಂಗ್ ಮಾಡಲು ಪಂತ್ ಪಡೆಯ ಮುಂದೇ ಕೇವಲ ಒಂದು ದಿನ ಮಾತ್ರ ಬಾಕಿ ಇದೆ.
ಈಗಾಗಲೇ ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಆರಂಭಿಸಿರುವ ಭಾರತ ತಂಡ ಓಪನರ್ ಕೆ.ಎಲ್ ರಾಹುಲ್, ಜೈಸ್ವಾಲ್ ಅವರ ವಿಕೆಟ್ ಕಳೆದುಕೊಂಡು 27 ರನ್ಗಳಿಸಿದೆ. ಸದ್ಯ ಕ್ರೀಸ್ನಲ್ಲಿ ಕುಲ್ದೀಪ್ ಯಾದವ್ ಸಾಯಿ ಸುದರ್ಶನ್ ಅವರು ಇದ್ದಾರೆ. ಒಂದು ದಿನ ಬಾಕಿ ಇರುವುದರಿಂದ 90 ಓವರ್ಗಳು ಇರುತ್ತವೆ. ಈಗಾಗಲೇ 27 ರನ್ಗಳಿಸಿರುವ ಭಾರತ ಇನ್ನು 522 ರನ್ಗಳು ಗಳಿಸಬೇಕಿದೆ. ಕೊನೆ ದಿನದಲ್ಲಿ ಓವರ್ಗೆ, ಟೀಮ್ ಇಂಡಿಯಾ ಅವರೇಜ್ 5.8ರಂತೆ ರನ್ಗಳಿಸಿದರೆ ಟೆಸ್ಟ್ ಪಂದ್ಯವನ್ನು ಗೆದ್ದು ಸರಣಿಯನ್ನು ಸಮಬಲ ಸಾಧಿಸಬಹುದು. ಇದು ತುಂಬಾ ಕಠಿಣವಾದ ಸಾಧನೆಯಾದರೂ ಟೀಮ್ ಇಂಡಿಯಾದ ಆದೃಷ್ಟ ಚೆನ್ನಾಗಿದ್ದರೇ ಸಾಧಿಸಿ ತೋರಿಸಲು ಇದೊಂದು ಅವಕಾಶವಾಗಿದೆ.
ಟೀಮ್ ಇಂಡಿಯಾದ ಪ್ಲೇಯಿಂಗ್- 11
ರಿಷಭ್ ಪಂತ್ (ನಾಯಕ), ಯಶಸ್ವಿ ಜೈಸ್ವಾಲ್, ಕೆ.ಎಲ್ ರಾಹುಲ್, ಸಾಯಿ ಸುದರ್ಶನ್, ಧ್ರುವ್ ಜುರೆಲ್, ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ.