)
Smriti Mandhana net worth: ಟೀಂ ಇಂಡಿಯಾದ ಉಪನಾಯಕಿ ಸ್ಮೃತಿ ಮಂಧಾನ ಬಗ್ಗೆ ವಿಶೇಷವಾಗಿ ಪರಿಚಯದ ಅಗತ್ಯವೇ ಇಲ್ಲ. ಅಷ್ಟೊಂದು ಫೇಮಸ್ ಅವರು. ಅತಿ ಹೆಚ್ಚು ಅಂತರಾಷ್ಟ್ರೀಯ ಶತಕಗಳ ಪಟ್ಟಿಯಲ್ಲಿ ಎರಡನೇ ಮತ್ತು ODI ಶತಕಗಳಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಮಂಧಾನ, ಯಾವ ಪುರುಷ ಆಟಗಾರನಿಗೂ ಕಮ್ಮಿ ಇಲ್ಲ ಎಂಬಂತೆ ಆದಾಯ ಗಳಿಸುತ್ತಾರೆ. ಹೀಗಿರುವಾಗ ಈ ವರದಿಯಲ್ಲಿ ಅವರ ನಿವ್ವಳ ಮೌಲ್ಯ ಎಷ್ಟಿದೆ ಎಂಬುದರ ಬಗ್ಗೆ ತಿಳಿಯೋಣ.
ಸ್ಮೃತಿ ಮಂಧಾನ ಭಾರತದ ಅತ್ಯಂತ ಜನಪ್ರಿಯ ಮತ್ತು ಶ್ರೀಮಂತ ಮಹಿಳಾ ಕ್ರಿಕೆಟಿಗರಲ್ಲಿ ಒಬ್ಬರು. ಕಳೆದ ಹಲವಾರು ವರ್ಷಗಳಿಂದ ತಂಡದ ಉಪನಾಯಕಿಯಾಗಿದ್ದಾರೆ. 28 ವರ್ಷದ ಸ್ಮೃತಿ ನಾಯಕತ್ವದ ಉತ್ತಮ ಅನುಭವವನ್ನು ಹೊಂದಿದ್ದಾರೆ. WPL ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರನ್ನು ನಾಯಕಿಯಾಗಿ ಚಾಂಪಿಯನ್ ಮಾಡಿದ್ದಾರೆ. ಹಾಗೆಯೇ ಭಾರತೀಯ ತಂಡವನ್ನು ಹಲವು ಬಾರಿ ಮುನ್ನಡೆಸಿದ್ದಾರೆ. ಒಂದೆರಡು ವರ್ಷಗಳ ನಂತರ ಅವರು ನಿಯಮಿತವಾಗಿ ಟೀಮ್ ಇಂಡಿಯಾವನ್ನು ಮುನ್ನಡೆಸುತ್ತಿರುವುದು ಕಂಡುಬಂದರೆ, ಆಶ್ಚರ್ಯಪಡಬೇಕಾಗಿಲ್ಲ.
ಸ್ಮೃತಿ ಮಂಧಾನ ಅವರನ್ನು BCCI ಯ ಕೇಂದ್ರ ಒಪ್ಪಂದದಲ್ಲಿ ಸೇರಿಸಲಾಗಿದೆ. ಅವರನ್ನು A+ ಗ್ರೇಡ್ನಲ್ಲಿ ಇರಿಸಲಾಗಿದ್ದು, ಈ ದರ್ಜೆಯಲ್ಲಿ ಸೇರಿಸಲಾದ ಆಟಗಾರ್ತಿಯರಿಗೆ ವಾರ್ಷಿಕವಾಗಿ ಸುಮಾರು 50 ಲಕ್ಷ ರೂಪಾಯಿಗಳು ಸಿಗುತ್ತವೆ. ಇದಲ್ಲದೆ, ಅವರು ಪಂದ್ಯ ಶುಲ್ಕವಾಗಿ ಲಕ್ಷ ರೂಪಾಯಿಗಳನ್ನು ಪಡೆಯುತ್ತಾರೆ. ಬಿಸಿಸಿಐ ಮಹಿಳಾ ಕ್ರಿಕೆಟಿಗರಿಗೆ ಟೆಸ್ಟ್ ಪಂದ್ಯ ಆಡಲು 15 ಲಕ್ಷ ರೂಪಾಯಿಗಳನ್ನು ನೀಡುತ್ತದೆ. ಈ ಕ್ರಿಕೆಟಿಗರಿಗೆ ODI ಪಂದ್ಯಕ್ಕೆ 6 ಲಕ್ಷ ರೂಪಾಯಿಗಳ ಶುಲ್ಕ ಮತ್ತು T20 ಪಂದ್ಯಕ್ಕೆ 3 ಲಕ್ಷ ರೂಪಾಯಿಗಳ ಶುಲ್ಕ. ಇರುತ್ತದೆ.
RCB ಜೊತೆಗಿನ ಒಪ್ಪಂದ 3.40 ಕೋಟಿ:
ಸ್ಮೃತಿ ಮಂಧಾನ ಮಹಿಳಾ ಪ್ರೀಮಿಯರ್ ಲೀಗ್ (WPL) ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ನಾಯಕಿ. RCB ಜೊತೆಗಿನ ಅವರ ಒಪ್ಪಂದ 3.40 ಕೋಟಿ ರೂಪಾಯಿಗಳ ಮೌಲ್ಯದ್ದಾಗಿದೆ. RCB ಅವರ ನಾಯಕತ್ವದಲ್ಲಿ 2024 ರಲ್ಲಿ WPL ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಸ್ಮೃತಿ ಮಂಧಾನ ಅನೇಕ ದೊಡ್ಡ ಕಂಪನಿಗಳೊಂದಿಗೆ ಸಂಬಂಧ ಹೊಂದಿದ್ದಾರೆ. ಇದು ಅವರ ಗಳಿಕೆಯ ಪ್ರಮುಖ ಭಾಗವಾಗಿದೆ. ನೈಕ್, ಪೂಮಾ ಮತ್ತು ಬೋರ್ನ್ವಿಟಾದಂತಹ ಬ್ರ್ಯಾಂಡ್ಗಳನ್ನು ಅನುಮೋದಿಸುತ್ತಾರೆ. ಹಾಗೆಯೇ ಡಾಬರ್ನಂತಹ ಆರೋಗ್ಯ ರಕ್ಷಣಾ ಬ್ರಾಂಡ್ಗಳು ಮತ್ತು ಆಹಾರ ಕಂಪನಿಗಳೊಂದಿಗೆ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.