IND vs NZ ODI: ಕಳೆದ ದಿನ ಆಕ್ಲೆಂಡ್ ಮೈದಾನದಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಕಳಪೆ ಬೌಲಿಂಗ್ ನಿಂದಾಗಿ ಸೋಲು ಕಂಡಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾದ ಬ್ಯಾಟ್ಸ್ ಮನ್ ಗಳು ಉತ್ತಮವಾಗಿ ಆಡಿದ್ದರೂ ಸಹ ಬೌಲರ್ ಗಳು ಸಂಪೂರ್ಣ ಪ್ಲಾಪ್ ಆಗುವಂತಾಯಿತು. ಈ ಪಂದ್ಯದಲ್ಲಿ ಎಲ್ಲೋ ಟೀಂ ಇಂಡಿಯಾದ ಆಟಗಾರನೊಬ್ಬ ಸೋಲಿಗೆ ದೊಡ್ಡ ಕಾರಣ ಆದರು ಎಂದನಿಸುತ್ತಿದೆ. ಈ ಆಟಗಾರ ಟಿ 20 ಕ್ರಿಕೆಟ್‌ನಲ್ಲಿ ತಂಡಕ್ಕಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ, ಆದರೆ ಏಕದಿನದಲ್ಲಿ ನಾಯಕ ಶಿಖರ್ ಧವನ್ ಅವರ ನಿರೀಕ್ಷೆಗೆ ತಕ್ಕಂತೆ ಆಟವಾಡಲಿಲ್ಲ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Video : ಟೀಂ ಇಂಡಿಯಾಗೆ ಮರಳಲು ಟ್ರೈನಿಂಗ್ ಆರಂಭಿಸಿದ ಈ ಸ್ಟಾರ್ ಬೌಲರ್!


ಏಕದಿನ ಕ್ರಿಕೆಟ್‌ಗೆ ಬಂದ ತಕ್ಷಣ ಈ ಆಟಗಾರ ಫ್ಲಾಪ್:


ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಯುವ ವೇಗಿಗಳಾದ ಉಮ್ರಾನ್ ಮಲಿಕ್ ಮತ್ತು ಅರ್ಷದೀಪ್ ಸಿಂಗ್ ಟೀಂ ಇಂಡಿಯಾ ಪದಾರ್ಪಣೆ ಮಾಡಿದ್ದಾರೆ. ಅರ್ಷದೀಪ್ ಸಿಂಗ್ ಕೆಲವು ಸಮಯದಿಂದ T20 ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ಪ್ರಮುಖ ಆಟಗಾರರಾಗಿದ್ದಾರೆ, ಆದರೆ ಅವರು ತಮ್ಮ ODI ಚೊಚ್ಚಲ ಪಂದ್ಯದಲ್ಲಿ ಅದೇ ಆಟವನ್ನು ಪುನರಾವರ್ತಿಸಲು ವಿಫಲರಾಗಿದ್ದಾರೆ.


ಅರ್ಷದೀಪ್ ಸಿಂಗ್ ಮೊದಲ ಏಕದಿನ ಪಂದ್ಯದಲ್ಲಿ ಅತ್ಯಂತ ಕಳಪೆ ಆಟ ಪ್ರದರ್ಶನ  ತೋರಿದ್ದಾರೆ. ಈ ಪಂದ್ಯದಲ್ಲಿ ಅರ್ಷದೀಪ್ ಸಿಂಗ್ 8.1 ಓವರ್ ನಲ್ಲಿ ಬೌಲ್ ಮಾಡಿ 8.30 ಎಕಾನಮಿಯೊಂದಿಗೆ 68 ರನ್ ನೀಡಿದ್ದು, ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಿಲ್ಲ. ಅರ್ಶದೀಪ್ ಅವರು ತಮ್ಮ ಆರ್ಥಿಕ ಬೌಲಿಂಗ್ ಮತ್ತು ಆರಂಭಿಕ ಓವರ್‌ನಲ್ಲಿ ವಿಕೆಟ್‌ಗಳನ್ನು ಕಬಳಿಸಲು ಹೆಸರುವಾಸಿಯಾಗಿದ್ದಾರೆ.


ಇದನ್ನೂ ಓದಿ: IND vs NZ: ಸೋಲಿನ ನಂತರ ಟೀಂ ಇಂಡಿಯಾದಲ್ಲಿ ಬದಲಾವಣೆ, 2ನೇ ಪಂದ್ಯಕ್ಕೆ ಈ ಆಟಗಾರ ಹೊರಕ್ಕೆ!


ಟಿ20 ಕ್ರಿಕೆಟ್‌ನಲ್ಲಿ ಇದುವರೆಗಿನ ಸಾಧನೆ:


ಅರ್ಷದೀಪ್ ಸಿಂಗ್ ಇದುವರೆಗೆ ಟೀಂ ಇಂಡಿಯಾ ಪರ 21 ಟಿ20 ಪಂದ್ಯಗಳನ್ನಾಡಿದ್ದಾರೆ. ಈ ಪಂದ್ಯಗಳಲ್ಲಿ ಅರ್ಷದೀಪ್ ಸಿಂಗ್ 8.17ರ ಎಕಾನಮಿಯಲ್ಲಿ ರನ್ ನೀಡುವ ಮೂಲಕ 33 ವಿಕೆಟ್ ಪಡೆದಿದ್ದಾರೆ. ಏಷ್ಯಾ ಕಪ್ 2022 ಮತ್ತು ಟಿ 20 ವಿಶ್ವಕಪ್ 2022 ರಲ್ಲಿ ಅರ್ಷದೀಪ್ ಸಿಂಗ್ ಟೀಮ್ ಇಂಡಿಯಾದ ಭಾಗವಾಗಿದ್ದರು, ಅವರು ಈ ಎರಡೂ ಪಂದ್ಯಾವಳಿಗಳಲ್ಲಿ ಅತ್ಯಂತ ಯಶಸ್ವಿಯಾಗಿದ್ದರು.\


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ