“ಅವನು ಭಾರತ ಕ್ರಿಕೆಟ್ ತಂಡದ ಕಾಯಕಯೋಗಿ.. ಅವನಿದ್ದರೆ ಭಾರತ ತಂಡಕ್ಕೆ ಆನೆಬಲ..”

Raghavendra Divgi: ಪ್ರಾಮಾಣಿಕತೆ ಎಂಬ ಪದ ತುಂಬಾ ದೊಡ್ಡದು. ಜೀವನದ ಪ್ರತೀ ಹೆಜ್ಜೆಯಲ್ಲೂ ಪ್ರಾಮಾಣಿಕರಾಗಿಯೇ ಉಳಿಯುವುದು ಸುಲಭವಲ್ಲ.. ಎಷ್ಟೇ ಪ್ರಾಮಾಣಿಕರಾಗಿದ್ದರೂ ಸಮಯ, ಸಂದರ್ಭದ ಅನಿವಾರ್ಯತೆಯ ಕಾರಣಕ್ಕೆ ಆ ಪ್ರಾಮಾಣಿಕತೆಗೆ ಸಾಸಿವೆ ಕಾಳಿನಷ್ಟಾದರೂ ಧಕ್ಕೆ ಬಂದೇ ಬರುತ್ತದೆ. ಆದರೆ ರಾಘವೇಂದ್ರ ಇದಕ್ಕೆ ಅಪವಾದ. ​

Written by - Puttaraj K Alur | Last Updated : Mar 11, 2025, 04:16 PM IST
  • ರಾಘವೇಂದ್ರ ದಿವಗಿ ಭಾರತ ತಂಡದ ಥೋಡೌನ್ ಸ್ಪೆಷಲಿಸ್ಟ್
  • 13 ವರ್ಷಗಳಿಂದ ಭಾರತೀಯ ತಂಡದ ಬೆನ್ನೆಲುಬಾಗಿದ್ದಾರೆ
  • ಎಲ್ಲಾ ಬ್ಯಾಟ್ಸ್‌ಮನ್‌ಗಳಿಗೂ ಬಾಲ್ ಎಸೆದು ಅವರ ಪ್ರತಿಭೆಯನ್ನು ಗಟ್ಟಿಗೊಳಿಸಿದ ಯುವಕ
“ಅವನು ಭಾರತ ಕ್ರಿಕೆಟ್ ತಂಡದ ಕಾಯಕಯೋಗಿ.. ಅವನಿದ್ದರೆ ಭಾರತ ತಂಡಕ್ಕೆ ಆನೆಬಲ..”
ರಾಘವೇಂದ್ರ ದಿವಗಿ

Raghavendra Divgi: ಕಳೆದ 14 ವರ್ಷಗಳಲ್ಲಿ ಭಾರತ ತಂಡಕ್ಕೆ ರಕ್ತವನ್ನೇ ಬಸಿದ ಶ್ರಮಜೀವಿ ಅವನು... ನಮ್ಮ ಬ್ಯಾಟ್ಸ್‌ಮನ್‌ಗಳನ್ನು ಜಗತ್ತು ಮೆಚ್ಚಿದ ಪರಾಕ್ರಮಿಗಳನ್ನಾಗಿ ಮಾಡಿದ ಪರಿಶ್ರಮಿ ಅವನು..! ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಬೆನ್ನಲ್ಲೇ ಭಾರತ ತಂಡದ ಆಟಗಾರರೆಲ್ಲಾ ಆ ವಿಶೇಷ ವ್ಯಕ್ತಿಯ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಕನ್ನಡಿಗ ಕೆ.ಎಲ್.ರಾಹುಲ್ ಅಂತೂ ಚಾಂಪಿಯನ್ಸ್‌ಗೆ ಐಸಿಸಿ ಕೊಟ್ಟ ಬ್ಲೇಸರ್ ಅನ್ನೇ ಅವನಿಗೆ ತೊಡಿಸಿ ಗೌರವ ಸಲ್ಲಿಸಿದ್ದಾನೆ. ರನ್‌ ಮಷಿನ್‌ ಖ್ಯಾತಿಯ ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾರ ಜೊತೆಗೆ ನಿಲ್ಲಿಸಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.

Add Zee News as a Preferred Source

ಸಾಮಾನ್ಯವಾಗಿ ಇನ್ನೊಬ್ಬರ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳದ ಕ್ರಿಕೆಟಿಗರು ಆ ವಿಶೇಷ ವ್ಯಕ್ತಿಯನ್ನ ಅತ್ಯಂತ ಗೌರವದಿಂದ ಕಾಣುತ್ತಾರೆ. ಪ್ರೀತಿ, ಅಭಿಮಾನದ ಕಣ್ಣುಗಳಿಂದ ನೋಡುತ್ತಾರೆ. ಕಾರಣ ಆತ ಭಾರತ ಕ್ರಿಕೆಟ್ ತಂಡದ ಬೆನ್ನೆಲುಬು ಮತ್ತು ಆಧಾರಸ್ಥಂಭ.. He is heartbeat of Indian Cricket team ಎಂದಿದ್ದರು ರವಿ ಶಾಸ್ತ್ರಿ. ʼಅವನು ಭಾರತ ಕ್ರಿಕೆಟ್ ತಂಡದ ಪಾಲಿಗೆ ಉಸಿರುʼ ಎಂದಿದ್ದರು ಸುನಿಲ್ ಗವಾಸ್ಕರ್. ನಿಜ.. ಅವನಿಲ್ಲದೆ ಭಾರತ ಕ್ರಿಕೆಟ್ ತಂಡವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ತಂಡಕ್ಕೆ ಎಲ್ಲವೂ ಆಗಿ ಹೋಗಿದ್ದಾನೆ. ಆ ವಿಶೇಷ ವ್ಯಕ್ತಿಯ ಹೆಸರೇ ರಾಘವೇಂದ್ರ ದಿವಗಿ. 

ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ ಗೆದ್ದ ಟೀಂ ಇಂಡಿಯಾದ ಬಗ್ಗೆ ಪಾಕ್‌ ಕ್ರಿಕೆಟಿಗ ಶೋಯೆಬ್ ಅಖ್ತರ್ ಹೇಳಿದ್ದೇನು?

ಪ್ರಾಮಾಣಿಕತೆ ಎಂಬ ಪದ ತುಂಬಾ ದೊಡ್ಡದು. ಜೀವನದ ಪ್ರತೀ ಹೆಜ್ಜೆಯಲ್ಲೂ ಪ್ರಾಮಾಣಿಕರಾಗಿಯೇ ಉಳಿಯುವುದು ಸುಲಭವಲ್ಲ.. ಎಷ್ಟೇ ಪ್ರಾಮಾಣಿಕರಾಗಿದ್ದರೂ ಸಮಯ, ಸಂದರ್ಭದ ಅನಿವಾರ್ಯತೆಯ ಕಾರಣಕ್ಕೆ ಆ ಪ್ರಾಮಾಣಿಕತೆಗೆ ಸಾಸಿವೆ ಕಾಳಿನಷ್ಟಾದರೂ ಧಕ್ಕೆ ಬಂದೇ ಬರುತ್ತದೆ. ಆದರೆ ರಾಘವೇಂದ್ರ ಇದಕ್ಕೆ ಅಪವಾದ. ನಾನು ಅವನನ್ನು ತುಂಬಾ ವರ್ಷಗಳಿಂದ, ತುಂಬಾ ಹತ್ತಿರದಿಂದ ಬಲ್ಲೆ. ನನ್ನ ಕಣ್ಣಲ್ಲಿ ಪ್ರಾಮಾಣಿಕತೆಗೆ ಈ ಜಗತ್ತಿನಲ್ಲಿ ಮತ್ತೊಂದು ಹೆಸರೇನಾದರೂ ಇದ್ದರೆ ಅದು ರಾಘವೇಂದ್ರ ದಿವಗಿ. 

ಮ್ಯಾನೇಜರ್ ಆಗಿಯೋ, ಫಿಸಿಯೊ ಆಗಿಯೋ.. ಅಥವಾ ಬೇರೆ ಯಾವುದೋ ರೂಪದಲ್ಲೋ.. ಒಂದು ಸರಣಿಗೆ ಭಾರತ ಕ್ರಿಕೆಟ್ ತಂಡದ ಜೊತೆಗಿದ್ದರೆ ಸಾಕು.. ಕಾಲು ನೆಲದ ಮೇಲೆ ನಿಲ್ಲದ ಕಾಲವಿದು. ಅಂಥದ್ದರಲ್ಲಿ ರಾಘವೇಂದ್ರ ಕಳೆದ 14 ವರ್ಷಗಳಿಂದ ಭಾರತ ತಂಡದ ಉಸಿರೇ ಆಗಿ ಹೋಗಿದ್ದಾನೆ. ಅವನು ತಂಡದ ಥ್ರೋಡೌನ್ ಸ್ಪೆಷಲಿಸ್ಟ್. ಆತನ ಕಾರಣಕ್ಕೆ ಭಾರತ ತಂಡದ ಬ್ಯಾಟ್ಸ್‌ಮನ್‌ಗಳಿಗೆ quality ಅಭ್ಯಾಸ ಸಿಗುತ್ತಿದೆ. ವಿರಾಟ್ ಕೊಹ್ಲಿಯಂತಹ ದಿಗ್ಗಜನೇ ರಾಘು ಬಗ್ಗೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹತ್ತಾರು ಬಾರಿ ಮಾತನಾಡಿದ್ದಾರೆ. 

ನಮ್ಮವರ ಮಾತು ಪಕ್ಕಕ್ಕಿರಲಿ.. ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಇಂಗ್ಲೆಂಡ್, ದಕ್ಷಿಣ ಆಫ್ರಿಕಾದ ಕ್ರಿಕೆಟಿಗರು, ಕೋಚ್‌ಗಳು ಸಹ ರಾಘವೇಂದ್ರನನ್ನು ‘ಲೆಜೆಂಡ್’ ಎಂದೇ ಮಾತನಾಡಿಸುತ್ತಾರೆ. He is a man who has earned respect from all sides. ಆ ಗೌರವ ಸಿಕ್ಕಿದ್ದು ಅವನ ಕೆಲಸದ ಕಾರಣಕ್ಕೆ, ಕೆಲಸದ ಕಡೆ ಅವನ ಬದ್ಧತೆಯ ಕಾರಣಕ್ಕೆ.. ಅವನ ಪ್ರಾಮಾಣಿಕತೆಗೆ ಮತ್ತು ಸರಳ ವ್ಯಕ್ತಿತ್ವಕ್ಕೆ. ಕ್ರಿಕೆಟ್ ಪಂದ್ಯಗಳು, ನೆಟ್ ಪ್ರಾಕ್ಟೀಸ್.. ಹೀಗೆ ಎಲ್ಲಾ ಸಂದರ್ಭಗಳಲ್ಲೂ ಎಲ್ಲರಿಗಿಂತ ಮೊದಲು ಮೈದಾನಕ್ಕೆ ಬರುವುದು ಅವನೇ.. ಎಲ್ಲರಿಗಿಂತ ಕೊನೆಯವನಾಗಿ ಮೈದಾನದಿಂದ ನಿರ್ಗಮಿಸುವುದೂ ಅವನೇ.. 

ಇದನ್ನೂ ಓದಿ: ನ್ಯೂಜಿಲೆಂಡ್‌ಗೆ ಚೊಚ್ಚಲ ಚಾಂಪಿಯನ್ಸ್ ಟ್ರೋಫಿ ಗೆದ್ದು ಕೊಟ್ಟವನ ದುರಂತ ಕಥೆ..!

ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯನ್ನಾಡಿತ್ತು. ಸರಣಿಯ ಮೊದಲ ಪಂದ್ಯಕ್ಕಾಗಿ ನಾಗ್ಪುರಕ್ಕೆ ಬಂದಿಳಿದಾಗ.. ನಾಗ್ಪುರದಲ್ಲಿ ತಂಡದ ಜೊತೆ ಹೋಟೆಲ್‌ಗೆ ತೆರಳುತ್ತಿದ್ದಾಗ.. ಇವನ್ಯಾರೋ ಆಗಂತುಕನೆಂದು ಹೋಟೆಲ್ ಬಾಗಿಲಲ್ಲೇ ಪೊಲೀಸ್ ಅಧಿಕಾರಿಯೊಬ್ಬ ರಾಘವೇಂದ್ರನನ್ನು ತಡೆಯುತ್ತಾನೆ. ಬೇರೆಯವರಾಗಿದ್ದರೆ ಆ ಅಧಿಕಾರಿಗೆ ದಬಾಯಿಸುತ್ತಿದ್ದರೋ ಏನೋ.. ಆದರೆ ರಾಘವೇಂದ್ರ ಒಂದೇ ಒಂದು ಮಾತೂ ಆಡದೆ ಸುಮ್ಮನೆ ನಿಂತಿದ್ದ.. ಕೊನೆಗೆ ಅವರೇ ಸತ್ಯ ಅರಿತು ಕಳುಹಿಸಿಕೊಟ್ಟಿದ್ದರು. ನಂತರ ಆ ಪೊಲೀಸ್ ಅಧಿಕಾರಿಗೆ ಅದೇನನ್ನಿಸಿತೋ ಏನೋ.. ರಾಘವೇಂದ್ರನನ್ನು ಹೊಟೇಲ್‌ನಲ್ಲಿ ವೈಯಕ್ತಿಕವಾಗಿ ಭೇಟಿ ಮಾಡಿ ‘ನನ್ನನ್ನು ಕ್ಷಮಿಸಿ’ ಎಂದಿದ್ದ. ತನ್ನನ್ನು ತಡೆದಾಗಲೂ ಸಹನೆಯಿಂದ ನಿಂತಿದ್ದ ರಾಘವೇಂದ್ರನ ನಡವಳಿಕೆ ಆ ಅಧಿಕಾರಿಗೆ ಅಚ್ಚರಿ ತರಿಸಿತ್ತು.

ರಾಘವೇಂದ್ರ ದಿವಗಿ ಇರುವುದೇ ಹಾಗೆ.. ಅಹಂಕಾರ..? ಅವನ ಹತ್ತಿರಕ್ಕೂ ಸುಳಿಯುವುದಿಲ್ಲ..  ಅಪ್ರಾಮಾಣಿಕತೆ..? ದುರ್ಬೀನು ಹಾಕಿ ಹುಡುಕಿದರೂ ಸಿಗುವುದಿಲ್ಲ.. ಅವನು ಬದಲಾಗಿಲ್ಲ.. ಬದಲಾಗುವುದೂ ಇಲ್ಲ. ಭಾರತ ತಂಡಕ್ಕೆ ಕಾಲಿಟ್ಟಾಗ ಹೇಗಿದ್ದನೋ ಹಾಗೆಯೇ ಇದ್ದಾನೆ.. ಇವತ್ತು ಇಡೀ ಕ್ರಿಕೆಟ್ ಜಗತ್ತೇ ರಾಘವೇಂದ್ರ ಬಗ್ಗೆ ಮಾತನಾಡುತ್ತದೆ... ಅವನ ಕಥೆಯನ್ನು ಕುತೂಹಲದಿಂದ ಕೇಳುತ್ತದೆ. ಕೇಳಿ ಅಚ್ಚರಿ ಪಡುತ್ತದೆ.  ಅವನು ತನ್ನ ಕೆಲಸದಿಂದ ಪ್ರತೀದಿನವೂ ಅಚ್ಚರಿ ಪಡುವಂತೆ ಮಾಡುತ್ತಲೇ ಇರುತ್ತಾನೆ. ಏಕೆಂದರೆ ಅವನೊಬ್ಬ ಕಾಯಕಯೋಗಿ...

✍? ಸುದರ್ಶನ್ (ಈ ಲೇಖನವನ್ನು ಸುದರ್ಶನ್‌ ಅವರ ಫೇಸ್‌ಬುಕ್‌ ಪೇಜಿನಿಂದ ತೆಗೆದುಕೊಳ್ಳಲಾಗಿದೆ) 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Puttaraj K Alur

ಪುಟ್ಟರಾಜ ಕೆ ಆಲೂರ ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser) ನ್ಯೂಸ್‌, ಒಪೊಯಿ‌ (Opoyi) ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. ...Read More

Trending News