ಕ್ರಿಕೆಟ್‌ನಲ್ಲಿ ದಾಖಲೆಗಳನ್ನು ಹೇಳುತ್ತಾ ಹೋದರೆ ಕೊನೆ ಎಂಬುದೇ ಇಲ್ಲದಂತೆ ಅಗಿದೆ. ಏಕೆಂದರೆ ಈಗೀಗ ಕ್ರಿಕೆಟ್‌ನ ಪ್ರಚಾರ, ಆಟಗಾರರ ಐತಿಹಾಸಿಕ ದಾಖಲೆಗಳು, ಅದಕ್ಕೆ ಸಂಬಂಧಿಸಿದ ಹಲವಾರು ವಿಷಯಗಳು ಹೆಚ್ಚು ಹೆಚ್ಚು ಮನ್ನಣೆ ಪಡೆದುಕೊಳ್ಳುತ್ತಿವೆ. ವರ್ಷದಿಂದ ವರ್ಷಕ್ಕೆ ಕ್ರಿಕೆಟ್‌ನಲ್ಲಿ ರೆಕಾರ್ಡ್‌ಗಳ ಸರಮಾಲೆಗಳು ಅಧಿಕಗೊಳ್ಳುತ್ತ ಹೋಗುತ್ತಿವೆ. ಅದರಂತೆ ಈ 2025ರ ವರ್ಷದಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಹಿಡಿದವರು ಯಾರು ಯಾರು ಎನ್ನುವ ಮಾಹಿತಿ ಇಲ್ಲಿದೆ.
ವಿಶ್ವದಲ್ಲಿ ಟೆಸ್ಟ್, ಏಕದಿನ ಹಾಗೂ ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಕ್ಯಾಚ್ ಹಿಡಿದವರು ಒಟ್ಟು ಮೂವರು ಆಟಗಾರರು ಇದ್ದಾರೆ. ಇದರಲ್ಲಿ ಒಬ್ಬರು ಕೂಡ ಭಾರತೀಯ ಆಟಗಾರರು ಇಲ್ಲ. ಐಪಿಎಲ್‌ನಲ್ಲಿ ಅತಿ ಹೆಚ್ಚು ಕ್ಯಾಚ್ ಹಿಡಿದವರ ಪೈಕಿ ವಿದೇಶಿ ಪ್ಲೇಯರ್‌ಗಳೇ ಎಲ್ಲ ಸ್ಥಾನ ಪಡೆದಿದ್ದಾರೆ. ಇದರಿಂದ ಭಾರತೀಯ ಆಟಗಾರರ ಮೈದಾನದಲ್ಲಿ ಯಾವ ರೀತಿ ಪ್ರದರ್ಶನ ನೀಡುತ್ತಿದ್ದಾರೆ ಎನ್ನುವುದು ಇದರಿಂದ ಗೊತ್ತಾಗುತ್ತದೆ.
2025ರಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಹಿಡಿದವರು ಎಂದರೆ ದಕ್ಷಿಣ ಆಫ್ರಿಕಾದ ಟಿ20 ತಂಡದ ಕ್ಯಾಪ್ಟನ್ ಐಡೆನ್ ಮಾರ್ಕ್ರಾಮ್, ನ್ಯೂಜಿಲೆಂಡ್‌ನ ಮ್ಯಾಥ್ಯೂ ಬ್ರೇಸ್‌ವೆಲ್ ಹಾಗೂ ಇಂಗ್ಲೆಂಡ್‌ನ ಹ್ಯಾರಿ ಬ್ರೂಕ್ ಅಗಿದ್ದಾರೆ. ಈ ಮೂವರು ವಿದೇಶಿ ಆಟಗಾರರು ತಲಾ 34 ಕ್ಯಾಚ್‌ಗಳನ್ನು ಹಿಡಿದಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ಪಾಕಿಸ್ತಾನದ ಆಲ್‌ರೌಂಡರ್ ಆಘಾ ಸಲ್ಮಾನ್ ಇದ್ದು 27 ಕ್ಯಾಚ್‌ಗಳನ್ನು ಹಿಡಿದಿದ್ದಾರೆ. ಐದನೇ ಸ್ಥಾನದಲ್ಲಿ ಜಿಂಬಾಬ್ವೆಯ ಬ್ರೈನ್ ಬೆನೆಟ್ ಇದ್ದು ಇವರು 26 ಕ್ಯಾಚ್‌ಗಳನ್ನು ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಮತ್ತೆ ವೈಭವ್ ಸೂರ್ಯವಂಶಿ ಸಿಡಿಲಬ್ಬರ.. 14 ಸಿಕ್ಸರ್ ಚಚ್ಚಿರೋ ಯಂಗ್ ಓಪನರ್, ದ್ವಿಶತಕ ಮಿಸ್!
ಇಂಡಿಯನ್ ಪ್ರಿಮೀಯರ್ ಲೀಗ್ 2025ರಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದವರ ಪೈಕಿ ರಾಜಸ್ತಾನ್ ರಾಯಲ್ಸ್ ತಂಡದ ಶಿಮ್ರಾನ್ ಹೆಟ್ಮೆರ್ ಅಗ್ರಸ್ಥಾನಿಯಾಗಿದ್ದಾರೆ. ಎರಡನೇ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಮನ್ ಧೀರ್ ಇದ್ದು ಮೂರನೇ ಸ್ಥಾನದಲ್ಲಿ ರಾಜಸ್ತಾನ್ ರಾಯಲ್ಸ್ ತಂಡದ ಓಪನರ್ ಯಶಸ್ವಿ ಜೈಸ್ವಾಲ್ ಇದ್ದಾರೆ. ಜೈಸ್ವಾಲ್ 14 ಇನ್ನಿಂಗ್ಸ್‌ಗಳಿಂದ 10 ಕ್ಯಾಚ್ ಪಡೆದಿದ್ದಾರೆ. ಟೆಸ್ಟ್‌ನಲ್ಲಿಯೂ ಐಡೆನ್ ಮಾರ್ಕ್ರಾಮ್ ಪ್ರತಿ ಇನ್ನಿಂಗ್ಸ್‌ನಂತೆ ಕ್ಯಾಚ್ ಹಿಡಿದು ಮೊದಲ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: 2025ರಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿರೋ ಬಿಗ್ ಹಿಟ್ಟರ್ ಯಾರು.. ಅಭಿಷೇಕ್ ಶರ್ಮಾ ಅಲ್ಲವೇ ಅಲ್ಲ!









