CSK vs RCB: ಟಾಸ್ ಗೆದ್ದ ಸಿಎಸ್ಕೆ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಆರ್ಸಿಬಿ ಉತ್ತಮ ಆರಂಭ ನೀಡಿತು. ಫಿಲ್ ಸಾಲ್ಟ್ 32 ರನ್ ಗಳಿಸಿದರೆ, ಕೊಹ್ಲಿ 31 ರನ್ ಗಳಿಸಿ ತಂಡಕ್ಕೆ ಉತ್ತಮ ಆರಂಭ ನೀಡಿದರು. ಆದರೆ ಈ ಇಬ್ಬರ ವಿಕೆಟ್ಗಳ ನಂತರ ತಂಡವು ಸಂಕಷ್ಟಕ್ಕೆ ಸಿಲುಕಿದಂತೆ ಕಾಣುತ್ತಿತ್ತು.

CSK vs RCB: RCB ವಿರುದ್ಧದ ಪಂದ್ಯದಲ್ಲಿ CSK ತಂಡವು ಸೋಲನುಭವಿಸಿದೆ. 17 ವರ್ಷಗಳ ನಂತರ, ಆರ್ಸಿಬಿ ತಂಡವು ಚೆಪಾಕ್ನಲ್ಲಿ ಸಿಎಸ್ಕೆ ತಂಡವನ್ನು 50 ರನ್ಗಳ ಭಾರಿ ಅಂತರದಿಂದ ಸೋಲಿಸಿದೆ. CSK ಗೆ ಪಂದ್ಯವನ್ನು ಗೆಲ್ಲಲು ಹಲವು ಅವಕಾಶಗಳಿದ್ದವು. ಆದರೆ ತಂಡದ ಫೀಲ್ಡಿಂಗ್ ಅದನ್ನು ಹಾಳುಮಾಡಿತ್ತು. ಈ ಮಧ್ಯೆ, ಸೋಲಿಗೆ ದೊಡ್ಡ ಕಾರಣ ಎಂದು ಸಾಬೀತಾದ ಒಬ್ಬ ಆಟಗಾರ, ಸುಲಭವಾದ ಕ್ಯಾಚ್ ಅನ್ನು ತಪ್ಪಿಸಿಕೊಂಡಿದ್ದು ಮಾತ್ರವಲ್ಲದೆ ಬ್ಯಾಟಿಂಗ್ನಲ್ಲಿಯೂ ದುರ್ಬಲವಾಗಿ ಕಾಣುತ್ತಿದ್ದರು.
ಟಾಸ್ ಗೆದ್ದ ಸಿಎಸ್ಕೆ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಆರ್ಸಿಬಿ ಉತ್ತಮ ಆರಂಭ ನೀಡಿತು. ಫಿಲ್ ಸಾಲ್ಟ್ 32 ರನ್ ಗಳಿಸಿದರೆ, ಕೊಹ್ಲಿ 31 ರನ್ ಗಳಿಸಿ ತಂಡಕ್ಕೆ ಉತ್ತಮ ಆರಂಭ ನೀಡಿದರು. ಆದರೆ ಈ ಇಬ್ಬರ ವಿಕೆಟ್ಗಳ ನಂತರ ತಂಡವು ಸಂಕಷ್ಟಕ್ಕೆ ಸಿಲುಕಿದಂತೆ ಕಾಣುತ್ತಿತ್ತು. ನಂತರ ನಾಯಕ ರಜತ್ ಪಾಟಿದಾರ್ ಬ್ಯಾಟಿಂಗ್ ಮಾಡಲು ಬಂದರು. ಆದರೆ ಈ ಸಂದರ್ಭದಲ್ಲಿ CSK ಆಟಗಾರರು 3 ಕ್ಯಾಚ್ಗಳನ್ನು ಕೈಬಿಟ್ಟರು. ಇದರಿಂದ ಧೋನಿ ಮತ್ತು ಜಡೇಜಾ ಅಸಮಾಧಾನಗೊಂಡಂತೆ ಕಾಣುತ್ತಿದ್ದರು.
ಕ್ಯಾಚ್ಗಳನ್ನು ಕೈಬಿಟ್ಟವರು ಯಾರು?
ರಜತ್ ಪಾಟಿದಾರ್ ಅವರ ಮೊದಲ ಕ್ಯಾಚ್ 17 ರನ್ ಗಳಿಸಿದ್ದಾಗ ಮಿಸ್ ಆಯಿತು. ರವೀಂದ್ರ ಜಡೇಜಾ ಅವರ ಓವರ್ನಲ್ಲಿ ಪಾಟಿದಾರ್ ಸಿಕ್ಸ್ ಬಾರಿಸಲು ಹೋಗಿ ಪೇಚಿಗೆ ಸಿಲುಕಿದರು. ಆದರೆ ಅವರ ಅದೃಷ್ಟಕ್ಕೆ, ಸಿಎಸ್ಕೆ ದುರಾದೃಷ್ಟಕ್ಕೆ ದೀಪಕ್ ಹೂಡಾ ಆ ಕ್ಯಾಚ್ ಕೈಬಿಟ್ಟರು. ಅದಾದ ಬಳಿಕ ಮುಂದಿನ ಎರಡು ಕ್ಯಾಚ್ಗಳನ್ನು ಖಲೀಲ್ ಅಹ್ಮದ್ ಮತ್ತು ರಾಹುಲ್ ತ್ರಿಪಾಠಿ ಕೈಚೆಲ್ಲಿದರು. ರಜತ್ ಪಾಟಿದಾರ್ 51 ರನ್ ಗಳಿಸಿ ತಂಡದ ಸ್ಕೋರ್ ಅನ್ನು 196 ಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದರು.
CSK ತಂಡದ ಬ್ಯಾಟಿಂಗ್ ವಿಫಲ:
197 ರನ್ಗಳ ಗುರಿಗೆ ಪ್ರತಿಕ್ರಿಯೆಯಾಗಿ, CSK ತಂಡದ ಬ್ಯಾಟಿಂಗ್ ದುರ್ಬಲವಾಗಿ ಕಾಣುತ್ತಿತ್ತು. ಆರಂಭಿಕ ಆಟಗಾರ ರಾಚಿನ್ ರವೀಂದ್ರ 41 ರನ್ ಗಳಿಸುವ ಮೂಲಕ ಉತ್ತಮ ಆರಂಭ ನೀಡಿದರು. ಆದರೆ ಅವರಿಗೆ ಯಾರಿಂದಲೂ ಬೆಂಬಲ ಸಿಗಲಿಲ್ಲ. ದೀಪಕ್ ಹೂಡಾ ಕೂಡ ಬ್ಯಾಟಿಂಗ್ ನಲ್ಲಿ 4 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು. 17 ವರ್ಷಗಳ ನಂತರ ಆರ್ಸಿಬಿ ತಂಡವು ಚೆನ್ನೈ ತಂಡವನ್ನು ಅದರ ತವರು ನೆಲದಲ್ಲಿ ಸೋಲಿಸಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.