ಧೋನಿ ಸ್ಥಾನಕ್ಕೆ ಪರ್ಯಾಯ ಆಟಗಾರ ಇಲ್ಲ - ಸಂಜಯ ಜಗದಾಳೆ

ಭಾರತ ತಂಡವು ವಿಶ್ವಕಪ್ ಸೆಮಿಫೈನಲ್ ಪಂದ್ಯದಿಂದ ನಿರ್ಗಮಿಸಿದ ಬಳಿಕ ನಿವೃತ್ತಿ ಘೋಷಿಸಲಿದ್ದಾರೆ ಎನ್ನುವ ಊಹಾಪೋಹಗಳ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಬಿಸಿಸಿಐ ನ ಮಾಜಿ ಕಾರ್ಯದರ್ಶಿ ಸಂಜಯ್ ಜಗದಾಳೆ ಸಧ್ಯ ಧೋನಿ ಸ್ಥಾನಕ್ಕೆ ಪರ್ಯಾಯ ಆಯ್ಕೆಗಳಿಲ್ಲ ಎಂದು ತಿಳಿಸಿದ್ದಾರೆ.

Last Updated : Jul 20, 2019, 01:19 PM IST
ಧೋನಿ ಸ್ಥಾನಕ್ಕೆ ಪರ್ಯಾಯ ಆಟಗಾರ ಇಲ್ಲ - ಸಂಜಯ ಜಗದಾಳೆ    title=

ನವದೆಹಲಿ: ಭಾರತ ತಂಡವು ವಿಶ್ವಕಪ್ ಸೆಮಿಫೈನಲ್ ಪಂದ್ಯದಿಂದ ನಿರ್ಗಮಿಸಿದ ಬಳಿಕ ನಿವೃತ್ತಿ ಘೋಷಿಸಲಿದ್ದಾರೆ ಎನ್ನುವ ಊಹಾಪೋಹಗಳ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಬಿಸಿಸಿಐ ನ ಮಾಜಿ ಕಾರ್ಯದರ್ಶಿ ಸಂಜಯ್ ಜಗದಾಳೆ ಸಧ್ಯ ಧೋನಿ ಸ್ಥಾನಕ್ಕೆ ಪರ್ಯಾಯ ಆಯ್ಕೆಗಳಿಲ್ಲ ಎಂದು ತಿಳಿಸಿದ್ದಾರೆ.

'ಧೋನಿ ಒಬ್ಬ ಶ್ರೇಷ್ಠ ಆಟಗಾರ ಮತ್ತು ಯಾವಾಗಲೂ ನಿಸ್ವಾರ್ಥದಿಂದ ಭಾರತ ತಂಡಕ್ಕಾಗಿ ಆಡಿದ್ದಾರೆ. ನನ್ನ ಅಭಿಪ್ರಾಯದಲ್ಲಿ ಭಾರತ ತಂಡವು ಪ್ರಸ್ತುತ ಧೋನಿ ಸ್ಥಾನದಲ್ಲಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಆಗಿರುವ ಯಾವುದೇ ಸಮರ್ಥ ಪರ್ಯಾಯವನ್ನು ಹೊಂದಿಲ್ಲ" ಎಂದು ಸಂಜಯ್ ಜಗದೇಲ್ ಪಿಟಿಐಗೆ ತಿಳಿಸಿದರು.ಆದಾಗ್ಯೂ ಧೋನಿ ಸೀಮಿತ ಓವರ್‌ಗಳ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವಷ್ಟು ಪ್ರಬುದ್ಧರಾಗಿದ್ದಾರೆ ಎಂದು ಹೇಳಿದರು.

ಮುಂದಿನ ತಿಂಗಳು ಆರಂಭವಾಗಲಿರುವ ವೆಸ್ಟ್ ಇಂಡೀಸ್ ಸರಣಿಯ ತಂಡಗಳನ್ನು ಆಯ್ಕೆ ಮಾಡಲು ರಾಷ್ಟ್ರೀಯ ಆಯ್ಕೆ ಸಮಿತಿ ಭಾನುವಾರದಂದು ಮುಂಬೈನಲ್ಲಿ ಸಭೆ ಸೇರಲಿದೆ ಇದಕ್ಕೂ ಮುನ್ನ ಅವರು ಹೇಳಿಕೆ ನೀಡಿದ್ದಾರೆ.ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಧೋನಿ ಆಯ್ಕೆ ಮಾಡುವುದು ಅಥವಾ ಕೈ ಬಿಡುವುದರ ಆದಾರದ ಮೇಲೆ ಅವರ ಮುಂದಿನ ಭವಿಷ್ಯ ನಿರ್ಧಾರಿತವಾಗಲಿದೆ ಎನ್ನಲಾಗಿದೆ.

"ಧೋನಿ ಅವರ ನಿವೃತ್ತಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಷ್ಟು ಪ್ರಬುದ್ಧರಾಗಿದ್ದಾರೆ. ಆದರೆ ನಿವೃತ್ತಿಯ ಮೊದಲು ಸಚಿನ್ ತೆಂಡೂಲ್ಕರ್ ಅವರ ವಿಷಯದಲ್ಲಿ ಮಾಡಿದಂತೆ ಅವರ ವೃತ್ತಿಪರ ಭವಿಷ್ಯದ ಬಗ್ಗೆ ಅವರ ಮನಸ್ಸಿನಲ್ಲಿರುವ ವಿಚಾರದ ತಿಳಿಯಲು (ರಾಷ್ಟ್ರೀಯ) ಆಯ್ಕೆದಾರರು ಅವರನ್ನು ಭೇಟಿ ಮಾಡಬೇಕು," ಜಗದಾಳೆ ಹೇಳಿದರು.

ವಿಶ್ವಕಪ್‌ನಲ್ಲಿ ಧೋನಿ ನಿಧಾನಗತಿಯ ಬ್ಯಾಟಿಂಗ್‌ಗಾಗಿ ಟೀಕೆಗೆ ಗುರಿಯಾಗಿದ್ದರು,ಆದರೆ ಧೋನಿ ಬೆಂಬಲಿಸಿ ಮಾತನಾಡಿದ ಅವರು 'ಧೋನಿ ತಂಡದ ಅವಶ್ಯಕತೆಗೆ ಅನುಗುಣವಾಗಿ ವಿಶ್ವಕಪ್‌ನಲ್ಲಿ ಆಡಿದ್ದಾರೆ. ಸೆಮಿಫೈನಲ್‌ನಲ್ಲಿ ಅವರು ಅದೇ ತಂತ್ರದ ಪ್ರಕಾರ ಬ್ಯಾಟಿಂಗ್ ಮಾಡುತ್ತಿದ್ದರು. ಆದರೆ ದುರದೃಷ್ಟವಶಾತ್ ಅವರು ನಿರ್ಣಾಯಕ ಕ್ಷಣದಲ್ಲಿ ರನ್ ಔಟ್ ಆದರು" ಎಂದು ಅವರು ಹೇಳಿದರು.
 

Trending News