Rohit Sharma and Mohammed Shami: ಭಾರತ ತಂಡದಲ್ಲಿ ಮೊಹಮ್ಮದ್ ಶಮಿ ಮತ್ತೆ ಯಾವಾಗ ಆಡುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಮನೆಮಾಡಿದೆ. ಕಳೆದ ಕೆಲವು ತಿಂಗಳಿಂದ ಗಾಯದಿಂದ ಬಳಲುತ್ತಿರುವ ಶಮಿ ತಂಡಕ್ಕೆ ಮರುಪ್ರವೇಶಿಸುವ ಸಾಧ್ಯತೆ ಹೆಚ್ಚಿದೆ ಎಂಬ ವರದಿಗಳು ಬಂದಿದ್ದವು. ಶಮಿ ನ್ಯೂಜಿಲೆಂಡ್ ಟೆಸ್ಟ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಲಾಗಿತ್ತು. ಆದರೆ ಅಲ್ಲಿಯೂ ಆಡಿರಲಿಲ್ಲ. ಆ ನಂತರ ರಣಜಿಯಲ್ಲಿ ಬಂಗಾಳ ತಂಡದ ಪರವಾಗಿ ಆಡಿದರು.
ಪಾದದ ಗಾಯದಿಂದಾಗಿ ಶಮಿ ಈ ವರ್ಷ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಗೊತ್ತೇ ಇದೆ. ಇದರಿಂದಾಗಿ ಐಪಿಎಲ್ 2024 ಮತ್ತು ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಕೊನೆಯ ಬಾರಿಗೆ 2023ರ ಏಕದಿನ ವಿಶ್ವಕಪ್‌ನಲ್ಲಿ ಶಮಿ ಆಡಿದ್ದರು. ಆ ಬಳಿಕ ಕಳೆದ ತಿಂಗಳಷ್ಟೇ ಮತ್ತೆ ಬೌಲಿಂಗ್ ಆರಂಭಿಸಿದ್ದರು. ರಣಜಿ ಟ್ರೋಫಿಯಲ್ಲಿ ಅವರು ಮಧ್ಯಪ್ರದೇಶ ವಿರುದ್ಧ 7 ವಿಕೆಟ್ ಪಡೆದರು. ಅದರ ಬೆನ್ನಲ್ಲೇ ಪ್ರಸ್ತುತ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದಾರೆ.
2ನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 10 ವಿಕೆಟ್‌ಗಳ ಸೋಲಿನ ನಂತರ ನಾಯಕ ರೋಹಿತ್ ಶರ್ಮಾ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ್ದರು. ಇದೇ ಸಂದರ್ಭದಲ್ಲಿ ಮೊಹಮ್ಮದ್ ಶಮಿ ಬಗ್ಗೆ ಪ್ರಶ್ನೆ ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ರೋಹಿತ್, "ಶಮಿಗಾಗಿ ಯಾವಗಲೂ ಟೀಂ ಇಂಡಿಯಾದ ಬಾಗಿಲು ತೆರೆದೇ ಇರುತ್ತದೆ. ಅವರ ಮೇಲೆ ಕೊಂಚ ನಿಗಾ ಇಟ್ಟಿದ್ದೇವೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆಡುವಾಗ ಕೂಡ ಅವರ ಮೊಣಕಾಲುಗಳಲ್ಲಿ ಸ್ವಲ್ಪ ಊತ ಇತ್ತು" ಎಂದಿದ್ದರು.
"ಇದೇ ಕಾರಣದಿಂದ ಟೆಸ್ಟ್ ಆಡಲು ಸಾಧ್ಯವಾಗಿರಲಿಲ್ಲ. ಅವರು ತುಂಬಾ ಜಾಗರೂಕತೆ ಅನುಸರಿಸಬೇಕೆಂದು ನಾವು ಇಚ್ಛಿಸುತ್ತೇವೆ. ಇಲ್ಲಿಗೆ ಬಂದು ಗಾಯವನ್ನು ದೊಡ್ಡದಾಗಿ ಮಾಡೋದು ನಮಗೆ ಇಷ್ಟವಿಲ್ಲ. ಶಮಿ 100 ಪ್ರತಿಶತ ಚೇತರಿಸಿಕೊಳ್ಳಲು ನಾವು ಕಾಯುತ್ತಿದ್ದೇವೆ. ಗಾಯಗೊಂಡು ಹಿಂತಿರುಗುತ್ತಿರುವ ಅವರನ್ನು ಇಲ್ಲಿಗೆ ಕರೆತಂದು ಹೆಚ್ಚಿನ ಕೆಲಸದ ಹೊರೆ ನೀಡಿ ಒತ್ತಡಕ್ಕೆ ಒಳಪಡಿಸುವುದು ನಮಗೆ ಇಷ್ಟವಿಲ್ಲ. ವೈದ್ಯಕೀಯ ತಂಡ ಅವರ ಮೇಲೆ ನಿಗಾ ಇರಿಸಿದೆ. ಭಾರತ ತಂಡದ ಪ್ರದರ್ಶನವನ್ನೂ ಅವರು ನೋಡಿಕೊಳ್ಳುತ್ತಾರೆ. ಸಂಪೂರ್ಣ ಚೇತರಿಸಿಕೊಂಡ ನಂತರ ಯಾವಾಗ ಬೇಕಾದರೂ ಬಂದು ಆಡಬಹುದು" ಎಂದು ರೋಹಿತ್ ಹೇಳಿದ್ದಾರೆ.
ಆದರೆ, ರೋಹಿತ್ ಮತ್ತು ಶಮಿ ನಡುವೆ ವಾಗ್ವಾದ ನಡೆದಿದೆ ಎನ್ನಲಾಗಿದೆ. ಕಳೆದ ತಿಂಗಳು ಬೆಂಗಳೂರಿನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಭಾರತದ ಮೊದಲ ಟೆಸ್ಟ್ ಪಂದ್ಯದ ವೇಳೆ ರೋಹಿತ್ ಶಮಿ ಮೊಣಕಾಲು ಊದಿಕೊಂಡಿದ್ದನ್ನು ಬಹಿರಂಗಪಡಿಸಿದ್ದರು. ನ್ಯೂಜಿಲೆಂಡ್ ಸರಣಿ ಆರಂಭಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ರೋಹಿತ್ ಶರ್ಮಾ, ಶಮಿ ಈ ಸರಣಿಗೆ ಅಥವಾ ಆಸ್ಟ್ರೇಲಿಯಾ ಸರಣಿಗೆ ಸಂಪೂರ್ಣ ಫಿಟ್ ಆಗುತ್ತಾರಾ ಎಂದು ಹೇಳಲು ಸಾಧ್ಯವಿಲ್ಲ.ಇದು ತುಂಬಾ ಕಷ್ಟದ ವಿಷಯ. ಶಮಿ ಮತ್ತೊಮ್ಮೆ ಗಾಯಗೊಂಡಿದ್ದಾರೆ. ಅವನ ಮೊಣಕಾಲಿನಲ್ಲಿ ಊತವಿದೆ ಚೇತರಿಸಿಕೊಳ್ಳುತ್ತಿದ್ದಾನೆ." ಎಂದಿದ್ದರು.
ಆದರೆ ಆ ಸಮಯದಲ್ಲಿ ಅವರು ಸಂಪೂರ್ಣವಾಗಿ ಫಿಟ್ ಆಗಿದ್ದರು ಮತ್ತು ಆಡಲು ಸಿದ್ಧರಾಗಿದ್ದರು ಎಂದು ಶಮಿ ರೋಹಿತ್‌ಗೆ ಹೇಳಿದ್ದರಂತೆ. ಆದರೆ ಇದನ್ನು ರೋಹಿತ್ ಗಮನಿಸದೆ, ಶಮಿಗೆ ಸಮಸ್ಯೆಯಿದೆ ಎಂಬುದು ತಿಳಿದುಬಂದಿಲ್ಲ.
ಇದನ್ನೂ ಓದಿ: ಈ 7 ಸೂಪರ್‌ಫುಡ್‌ಗಳನ್ನ ನಿಮ್ಮ ಚಳಿಗಾಲದ ಸ್ನೇಹಿತರನ್ನಾಗಿಸಿ; ಕೆಮ್ಮು, ಶೀತ & ಅಸ್ತಮಾ ಸೇರಿ ಯಾವುದೇ ಕಾಯಿಲೆ ಬರಲ್ಲ!
ಆಸ್ಟ್ರೇಲಿಯಾ ಸರಣಿಯಲ್ಲಿ ಶಮಿ ಆಡುತ್ತಾರಾ?
ವರದಿಯ ಪ್ರಕಾರ, ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಶಮಿ ಅವರನ್ನು ಸೇರಿಸಿಕೊಳ್ಳುವ ಬಗ್ಗೆ ಬಿಸಿಸಿಐ ಇನ್ನೂ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಶಮಿ ಆಸ್ಟ್ರೇಲಿಯಕ್ಕೆ ಹೋಗುವ ಸಾಧ್ಯತೆಯಿದ್ದರೂ, ಅವರು ಪ್ರಸ್ತುತ SMAT ನಲ್ಲಿ ಬಂಗಾಳದ ಪರವಾಗಿ ಆಡುತ್ತಿದ್ದಾರೆ. ಬಿಸಿಸಿಐ ಅವರಿಗೆ ಇನ್ನೂ ಅನುಮತಿ ನೀಡಿಲ್ಲ. ಎಲ್ಲರೂ ಎನ್‌ಸಿಎಯಿಂದ ಅಂತಿಮ ಅನುಮತಿಗಾಗಿ ಕಾಯುತ್ತಿದ್ದಾರೆ. ಒಂದು ವೇಳೆ ಶಮಿ ಆಸ್ಟ್ರೇಲಿಯಕ್ಕೆ ಬಂದರೂ 3ನೇ ಟೆಸ್ಟ್ ನಲ್ಲಿ ಆಡಲು ಅವಕಾಶವಿಲ್ಲ. ಬದಲಾಗಿ 4 ಮತ್ತು 5ನೇ ಟೆಸ್ಟ್ ನಲ್ಲಿ ಆಡುವ ಅವಕಾಶ ಪಡೆಯಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.