2025ರ ಐಪಿಎಲ್‌ ನಿಯಮಗಳಲ್ಲಿ ಬದಲಾವಣೆ; ಅಭಿಮಾನಿಗಳಿಗೆ ಸಿಗಲಿದೆ ಪೂರ್ಣ ಮನರಂಜನೆ!!

Kolkata Knight Riders vs Royal Challengers Bengaluru: ಆರ್‌ಸಿಬಿ ಮತ್ತು ಕೆಕೆಆರ್ ನಡುವಿನ ಐಪಿಎಲ್ 2025ರ ಮೊದಲ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿದೆ. ಈ ಬಾರಿ ರಜತ್ ಪಾಟಿದಾರ್  ಆರ್‌ಸಿಬಿ ತಂಡವನ್ನು ಮುನ್ನೆಡಸಲಿದ್ದಾರೆ. ಕೆಕೆಆರ್ ತಂಡಕ್ಕೆ ಅಜಿಂಕ್ಯ ರಹಾನೆ ನಾಯಕರಾಗಿದ್ದಾರೆ.

Written by - Puttaraj K Alur | Last Updated : Mar 21, 2025, 05:20 PM IST
  • ನಿಧಾನಗತಿಯ ಓವರ್ ರೇಟ್‌ಗೆ ಡಿಮೆರಿಟ್ ಅಂಕಗಳನ್ನು ನೀಡಲಾಗುತ್ತದೆ
  • ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಎರಡು ಹೊಸ ಚೆಂಡುಗಳು ಲಭ್ಯವಿರಲಿದೆ
  • ಈ ಬಾರಿ ಲಾಲಾರಸದ ಬಳಕೆಯ ಮೇಲಿನ ನಿಷೇಧ ತೆಗೆಯಲಾಗಿದೆ
2025ರ ಐಪಿಎಲ್‌ ನಿಯಮಗಳಲ್ಲಿ ಬದಲಾವಣೆ; ಅಭಿಮಾನಿಗಳಿಗೆ ಸಿಗಲಿದೆ ಪೂರ್ಣ ಮನರಂಜನೆ!!
IPL 2025

IPL 2025: ಐಪಿಎಲ್ 2025 ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಐಪಿಎಲ್ 2025ರ ಮೊದಲ ಪಂದ್ಯ ಆರ್‌ಸಿಬಿ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆಯಲಿದೆ. ಐಪಿಎಲ್ ಆಡಳಿತ ಮಂಡಳಿಯು ಈ ಬಾರಿಯ ಐಪಿಎಲ್ ಟೂರ್ನಿಗಾಗಿ ಹಲವು ನಿಯಮಗಳನ್ನು ಬದಲಾಯಿಸಿದೆ. ಈ ಪೈಕಿ ಒಂದು ನಿಯಮವನ್ನ ಬದಲಾಯಿಸಿದರೆ ಬೌಲರ್‌ಗಳಿಗೆ ಬಹಳಷ್ಟು ಪ್ರಯೋಜನವಾಗುತ್ತದೆ. ಇದು ಐಪಿಎಲ್ ಪಂದ್ಯಗಳನ್ನು ಮತ್ತಷ್ಟು ರೋಮಾಂಚನಗೊಳಿಸುತ್ತದೆ. ಇದರಿಂದ ಕ್ರಿಕೆಟ್ ಅಭಿಮಾನಿಗಳು ಐಪಿಎಲ್ ಪಂದ್ಯಗಳನ್ನು ಉತ್ತಮ ರೀತಿಯಲ್ಲಿ ಆನಂದಿಸಲು ಸಾಧ್ಯವಾಗುತ್ತದೆ. 

Add Zee News as a Preferred Source

1. ನಿಧಾನಗತಿಯ ಓವರ್ ರೇಟ್‌ಗೆ ಡಿಮೆರಿಟ್ ಅಂಕ‌ 

ಐಪಿಎಲ್ 2025ಕ್ಕೂ ಮೊದಲು ನಿಧಾನಗತಿಯ ಓವರ್ ರೇಟ್‌ನಿಂದಾಗಿ ನಾಯಕನನ್ನು ಒಂದು ಪಂದ್ಯಕ್ಕೆ ನಿಷೇಧಿಸಲಾಗುತ್ತಿತ್ತು. ಆದರೆ ಐಪಿಎಲ್ ಆಡಳಿತ ಮಂಡಳಿ ಇದನ್ನು ಬದಲಾಯಿಸಿದೆ. ಇನ್ಮುಂದೆ ನಿಧಾನಗತಿಯ ಓವರ್‌ ರೇಟ್‌ಗಾಗಿ ನಾಯಕನಿಗೆ ಡಿಮೆರಿಟ್ ಅಂಕಗಳನ್ನು ನೀಡಲಾಗುತ್ತದೆ. ನಾಯಕನಿಗೆ ಪಂದ್ಯ ಶುಲ್ಕದ ಶೇ.25ರಷ್ಟು ದಂಡ ವಿಧಿಸಿದರೆ, ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗುತ್ತದೆ. ಈ ಡಿಮೆರಿಟ್ ಪಾಯಿಂಟ್‌ಗಳು 36 ತಿಂಗಳವರೆಗೆ ದಾಖಲೆಯಲ್ಲಿ ಉಳಿಯುತ್ತವೆ. ಇಂತಹ ಪರಿಸ್ಥಿತಿಯಲ್ಲಿ ನಿಷೇಧದ ಸಾಧ್ಯತೆಯು ಬಹಳ ಮಟ್ಟಿಗೆ ಕಡಿಮೆಯಾಗುತ್ತದೆ.

ಇದನ್ನೂ ಓದಿ: ಸೋಶಿಯಲ್‌ ಮಿಡಿಯಾ ಸ್ಟಾರ್‌ ಜೊತೆ ಶುಭಮನ್‌ ಗಿಲ್‌ ಡೇಟಿಂಗ್‌! ಹಾಗಾದರೆ ಸಾರಾ ತೆಂಡೂಲ್ಕರ್‌..

2. ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ ಎರಡು ಹೊಸ ಚೆಂಡು 

ಕಳೆದ ಋತುವಿನಲ್ಲಿ ಪಂದ್ಯದ ಸಮಯದಲ್ಲಿ ಕೇವಲ ಒಂದು ಚೆಂಡನ್ನು ಮಾತ್ರ ಬಳಸಲಾಗಿತ್ತು. ಆದರೆ ಈಗ ಐಪಿಎಲ್ 2025ರಲ್ಲಿ ನಿಯಮವನ್ನು ಬದಲಾಯಿಸಲಾಗಿದೆ. ಈಗ ಎರಡನೇ ಇನ್ನಿಂಗ್ಸ್‌ನಲ್ಲಿ 11ನೇ ಓವರ್ ನಂತರ, 2ನೇ ಹೊಸ ಚೆಂಡನ್ನು 12ನೇ ಓವರ್‌ನಿಂದ ತೆಗೆದುಕೊಳ್ಳಬಹುದು. ಈ ಬಾರಿ ಎಲ್ಲಾ ಪಂದ್ಯಗಳು ಸಂಜೆ ನಡೆಯುತ್ತವೆ. 2ನೇ ಇನ್ನಿಂಗ್‌ ಆಡುವ ತಂಡದ ಬೌಲಿಂಗ್ ಹೆಚ್ಚು ಕಷ್ಟವಾಗುವುದಿಲ್ಲ. ಚೆಂಡನ್ನು ಬದಲಾಯಿಸಬೇಕೆ ಅಥವಾ ಬೇಡವೇ? ಅಂತಿಮ ನಿರ್ಧಾರವನ್ನು ಅಂಪೈರ್ ತೆಗೆದುಕೊಳ್ಳುತ್ತಾರೆ. 

3. ಲಾಲಾರಸ ಬಳಕೆಯ ಮೇಲಿನ ನಿಷೇಧ ವಾಪಸ್!

ಕೋವಿಡ್ -19 ಸಾಂಕ್ರಾಮಿಕ ರೋಗ ಹರಡಿದ ನಂತರ ಐಪಿಎಲ್‌ನಲ್ಲಿ ಲಾಲಾರಸದ ಬಳಕೆಯನ್ನು ನಿಷೇಧಿಸಲಾಗಿತ್ತು. ಆದರೆ ಐಪಿಎಲ್ 2025ರಲ್ಲಿ ಆಡಳಿತ ಮಂಡಳಿಯು ಲಾಲಾರಸದ ಬಳಕೆಯನ್ನು ಅನುಮತಿಸಿದೆ. ಬೌಲರ್‌ಗಳು ಚೆಂಡನ್ನು ರಿವರ್ಸ್ ಸ್ವಿಂಗ್ ಮಾಡಲು ಲಾಲಾರಸವನ್ನು ಬಳಸುತ್ತಾರೆ. ಇದರಿಂದ ಅವರು ಸಾಧ್ಯವಾದಷ್ಟು ಬೇಗ ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್‌ಗೆ ಕಳುಹಿಸಬಹುದು. ಲಾಲಾರಸದ ಮೇಲಿನ ನಿಷೇಧವನ್ನು ತೆಗೆದುಹಾಕಿದ ನಂತರ, ಬೌಲರ್‌ಗೆ ಲಾಭವಾಗುತ್ತದೆ. ಅವರು ಬ್ಯಾಟ್ಸ್‌ಮನ್‌ಗಳನ್ನು ಸುಲಭವಾಗಿ ನಿಯಂತ್ರಿಸಲು ಸಾಧ್ಯವಾಗುತ್ತದೆ. 

ಇದನ್ನೂ ಓದಿIPL 2025: ಕ್ರಿಕೆಟ್‌ ಜಗತ್ತಿನ ಅತಿ ನತದೃಷ್ಟ ಆಟಗಾರ ಅಂದ್ರೆ ಈತನೇ... ಐಪಿಎಲ್‌ ಶುರುವಾಗೋಕು ಮೊದಲೇ ಕೊನೆಯಾಯ್ತು ಈತನ ವೃತ್ತಿಜೀವನ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Puttaraj K Alur

ಪುಟ್ಟರಾಜ ಕೆ ಆಲೂರ ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser) ನ್ಯೂಸ್‌, ಒಪೊಯಿ‌ (Opoyi) ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. ...Read More

Trending News