IPL 2024: ಮುಂಬೈ ಇಂಡಿಯನ್ಸ್ ಸೋಲಿಗೆ ಕಾರಣವಾದ್ರಾ ಈ ಆಟಗಾರ? ಒಂದೇ ಒಂದು ವಿಕೆಟ್ ಪಡೆಯದೇ ಇದ್ದಿದ್ದೇ ತಂಡಕ್ಕೆ ಮುಳುವಾಯ್ತಾ!!
Reason for the mumbai indians defeat : ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧದ ಪಂದ್ಯದಲ್ಲಿ ಸೋತ ನಂತರ, ಮುಂಬೈ ಇಂಡಿಯನ್ಸ್ ತಂಡದ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಸೋಲಿನ ಕಾರಣವನ್ನು ತಿಳಿಸಿದ್ದಾರೆ.
ಮುಂಬೈ: ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್ 2024 ರಲ್ಲಿ ಸತತ ಎರಡನೇ ಸೋಲನ್ನು ಎದುರಿಸಿದೆ. ಬುಧವಾರ ನಡೆದ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ (MI) ತಂಡವನ್ನು ಸನ್‌ರೈಸರ್ಸ್ ಹೈದರಾಬಾದ್ (SRH) 31 ರನ್‌ಗಳಿಂದ ಸೋಲಿಸಿತು. ಸನ್‌ರೈಸರ್ಸ್ ಹೈದರಾಬಾದ್ (SRH) ಮೊದಲು ಬ್ಯಾಟಿಂಗ್ ಮಾಡಿ, 3 ವಿಕೆಟ್ ನಷ್ಟಕ್ಕೆ 277 ರನ್ ಕಲೆ ಹಾಕಿತು. ಇದು ಐಪಿಎಲ್‌ನಲ್ಲಿ ಹೊಸ ದಾಖಲೆಯಾಗಿದೆ.
ಮುಂಬೈ ಇಂಡಿಯನ್ಸ್ (MI) ತಂಡವೂ ಕಠಿಣ ಸವಾಲನ್ನು ನೀಡಿತು. ಉತ್ತಮ ಆರಂಭವನ್ನು ಪಡೆದರೂ 5 ವಿಕೆಟ್ ನಷ್ಟಕ್ಕೆ 246 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಪಂದ್ಯದಲ್ಲಿ ಒಟ್ಟು 523 ರನ್ ಗಳಿಸಿದ್ದು ಐಪಿಎಲ್ ನಲ್ಲಿ ಹೊಸ ದಾಖಲೆಯಾಗಿದೆ. ಅಷ್ಟೇ ಅಲ್ಲ, ಈ ಪಂದ್ಯದಲ್ಲಿ 38 ಸಿಕ್ಸರ್‌ಗಳನ್ನ ಬಾರಿಸಿದ್ದು, ಟಿ20 ಕ್ರಿಕೆಟ್‌ನಲ್ಲಿ ಹೊಸ ದಾಖಲೆಯಾಗಿದೆ. ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧ ಈ ಪಂದ್ಯದಲ್ಲಿ ಸೋತ ನಂತರ, ಮುಂಬೈ ಇಂಡಿಯನ್ಸ್‌ನ ನಾಯಕ ಹಾರ್ದಿಕ್ ಪಾಂಡ್ಯ ಮಾತನಾಡಿದ್ದಾರೆ.
ಇದನ್ನೂ ಓದಿ: SRH VS MI: Harshit Rana ಕಾಲೆಳೆಯುತ್ತ Mayank ಗೆ ಫ್ತ್ಲೆಯಿಂಗ್ ಕಿಸ್ಸ್ ನೀಡಿದ Rohit Sharma, ಫೋಟೋ ಡಿಲೀಟ್ ಮಾಡಿದ SRH!
ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (MI) ಅನ್ನು ಗುಜರಾತ್ ಟೈಟಾನ್ಸ್ (GT ಸೋಲಿಸಿತು. ಈಗ ಮುಂಬೈ ಇಂಡಿಯನ್ಸ್ ಅನ್ನು ಸನ್ ರೈಸರ್ಸ್ ಹೈದರಾಬಾದ್ (SRH) ಸೋಲಿಸಿದೆ. ಮುಂಬೈ ಇಂಡಿಯನ್ಸ್ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಹಾರ್ದಿಕ್ ಪಾಂಡ್ಯ, ವಾಸ್ತವದಲ್ಲಿ ಎಸ್‌ಆರ್‌ಎಚ್ ತಂಡ 277 ರನ್ ಗಳಿಸುತ್ತದೆ ಎಂದು ನಾವು ಭಾವಿಸಿರಲಿಲ್ಲ. ನೀವು ಎಷ್ಟೇ ಕೆಟ್ಟ ಅಥವಾ ಉತ್ತಮ ಬೌಲಿಂಗ್ ಮಾಡಿದರೂ, ಎದುರಾಳಿ ತಂಡವು ಅಂತಹ ದೊಡ್ಡ ಸ್ಕೋರ್ (277 ರನ್) ಮಾಡಿದರೆ ಅವರು ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದಾರೆ ಎಂದೇ ಅರ್ಥ. ಅವರ ಬೌಲರ್‌ಗಳು ಚೆನ್ನಾಗಿದ್ದರು, ಅಲ್ಲಿಯೂ ನಮಗೆ ಕಷ್ಟವಾಗಿತ್ತು ಎಂದಿದ್ದಾರೆ.
ನಾವು ಯುವ ಆಟಗಾರರನ್ನು ಹೊಂದಿದ್ದೇವೆ ಮತ್ತು ನಾವು ಕಲಿಯುತ್ತೇವೆ. ಎಲ್ಲಾ ಬ್ಯಾಟ್ಸ್‌ಮನ್‌ಗಳು ಉತ್ತಮವಾಗಿ ಕಾಣುತ್ತಿದ್ದರು. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (MI) ತಂಡವು ದಕ್ಷಿಣ ಆಫ್ರಿಕಾದ 17 ವರ್ಷದ ಯುವ ವೇಗದ ಬೌಲರ್ ಕ್ವೆನಾ ಮಫಕಾಗೆ (Kwena Maphaka) ಐಪಿಎಲ್‌ಗೆ ಪದಾರ್ಪಣೆ ಮಾಡಲು ಅವಕಾಶ ನೀಡಿತು. ಈ ಪಂದ್ಯದಲ್ಲಿ ಕ್ವೆನಾ ಮಫಕಾ 4 ಓವರ್‌ಗಳಲ್ಲಿ 66 ರನ್‌ಗಳನ್ನು ನೀಡಿದರು.
ಇದನ್ನೂ ಓದಿ: ಮೈದಾನದಲ್ಲಿ ಧೋನಿ ಪಾದ ಸ್ಪರ್ಶಿಸಿ ಆಶೀರ್ವಾದ ಪಡೆದ ಪತಿರಾಣ!? ವೈರಲ್ ವಿಡಿಯೋದ ಅಸಲಿಯತ್ತೇನು?
ಕ್ವೆನಾ ಮಫಕಾ ಅದ್ಭುತ ಆಟಗಾರ. ಅವರು ತಮ್ಮ ಮೊದಲ ಪಂದ್ಯದ ಆಡಿದ್ದಕ್ಕೆ ಸಂತೋಷಪಟ್ಟರು. ಇನ್ನೂ ಕೆಲವು ಪಂದ್ಯಗಳಲ್ಲಿ ಅವರು ಆಡಬೇಕು ಎಂದು ಪಾಂಡ್ಯ ಹೇಳಿದ್ದಾರೆ. ಈ ಪಂದ್ಯದಲ್ಲಿ ಕ್ವೆನಾ ಮಫಕಾ ಒಂದೇ ಒಂದು ವಿಕೆಟ್ ಪಡೆಯಲಿಲ್ಲ. ಅವರ ಎಕಾನಮಿ ರೇಟ್ ಕೂಡ 16.50 ಆಗಿತ್ತು. ಇದು ವರೆಗಿನ ಐಪಿಎಲ್ ಚೊಚ್ಚಲ ಪಂದ್ಯದಲ್ಲಿ ಬೌಲರ್ ನೀಡಿದ ಅತ್ಯಂತ ಕಳಪೆ ಬೌಲಿಂಗ್ ಪ್ರದರ್ಶನ ಇದಾಗಿದೆ. ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಕ್ವೆನಾ ಮಫಕಾ ಇನ್ನೂ ಯಾವುದೇ ಅಂತಾರಾಷ್ಟ್ರೀಯ ಪಂದ್ಯ ಆಡಿಲ್ಲ. ಆದರೆ ಈ 17 ವರ್ಷದ ವೇಗದ ಬೌಲರ್ 2024 ರ ಅಂಡರ್-19 ವಿಶ್ವಕಪ್‌ನಲ್ಲಿ 9.71 ರ ಸರಾಸರಿಯಲ್ಲಿ 21 ವಿಕೆಟ್‌ಗಳನ್ನು ಪಡೆದಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.