ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣ ನನ್ನದು ಎಂದು ಕೆ.ಎಲ್.ರಾಹುಲ್ ಅಧಿಕಾರಯುತವಾಗಿ ಹೇಳಬಹುದು ಮತ್ತು ಹೇಳಿದ್ದಾನೆ. ಅದು ಅವನಿಗೆ ಯಾರೋ ಕೊಟ್ಟ ಭಿಕ್ಷೆಯಲ್ಲ. ಅವನೇ ಸಂಪಾದಿಸಿದ ಗೌರವ.

KL Rahul: 10 ವರ್ಷಗಳಲ್ಲಿ 2 ರಣಜಿ ಟ್ರೋಫಿ, 2 ಇರಾನಿ ಕಪ್, 3 ವಿಜಯ್ ಹಜಾರೆ ಟ್ರೋಫಿ ಮತ್ತು ಒಂದು ಸೈಯದ್ ಮುಷ್ತಾಕ್ ಅಲಿ ಟಿ-20 ಟ್ರೋಫಿ. ಐಪಿಎಲ್ ಅನ್ನೇ ಕ್ರಿಕೆಟ್ ಎಂದುಕೊಂಡವರಿಗೆ “ಚಿನ್ನಸ್ವಾಮಿ ಕ್ರೀಡಾಂಗಣ ನನ್ನದು, ಇದು ನನ್ನ ನೆಲ” ಎಂದು ರಾಹುಲ್ ಬ್ಯಾಟ್ ಗುದ್ದಿ ತೋರಿಸಿದ್ದು ಮಹಾಪ್ರಮಾದದಂತೆ ಕಾಣಬಹುದು. ಆದರೆ ಆತ ಕರ್ನಾಟಕ ತಂಡಕ್ಕೆ ಆಡಿದ ರೀತಿಯನ್ನು ನೋಡಿದವರು ‘ರಾಹುಲ್ ಮಾಡಿದ್ದು ಸರಿ’ ಎನ್ನುತ್ತಾರೆ.
ʼಚಿನ್ನಸ್ವಾಮಿ ಕ್ರೀಡಾಂಗಣ ನನ್ನದುʼ ಎಂದು ರಾಹುಲ್ ಅಧಿಕಾರಯುತವಾಗಿ ಹೇಳಬಹುದು ಮತ್ತು ಹೇಳಿದ್ದಾನೆ. ಅದು ಅವನಿಗೆ ಯಾರೋ ಕೊಟ್ಟ ಭಿಕ್ಷೆಯಲ್ಲ. ಅವನೇ ಸಂಪಾದಿಸಿದ ಗೌರವ. ಕರ್ನಾಟಕ ತಂಡಕ್ಕಾಗಿ ರಾಹುಲ್ ಬರೀ ಬೆವರನ್ನಲ್ಲ.. ರಕ್ತವನ್ನೇ ಬಸಿದಿದ್ದಾನೆ. ಸುಮ್ಮನೆ ಉತ್ಪ್ರೇಕ್ಷೆಗೋ, ಅವನ ಮೇಲಿನ ಅಭಿಮಾನಕ್ಕೋ ಈ ಮಾತು ಹೇಳುತ್ತಿಲ್ಲ. ಒಂದು ಚರಿತ್ರೆಯನ್ನ ನೆನಪಿಸಿ ಕೊಡುತ್ತೇನೆ.. 2015.. ರಣಜಿ ಟ್ರೋಫಿ ಫೈನಲ್ ಪಂದ್ಯ. 2014ರಲ್ಲಿ ಹೈದರಾಬಾದ್ನಲ್ಲಿ ನಡೆದ ಫೈನಲ್ನಲ್ಲಿ ರಾಹುಲ್ ಶತಕ ಬಾರಿಸಿದ್ದ ಕ್ಷಣ, ಕರ್ನಾಟಕ ತಂಡ ರಣಜಿ ಟ್ರೋಫಿ ಗೆದ್ದ ಕ್ಷಣವನ್ನು ಕಣ್ಣಾರೆ ನೋಡಿದವನಿಗೆ ಮರು ವರ್ಷದ ಫೈನಲ್ ಪಂದ್ಯವನ್ನು ತಪ್ಪಿಸಿಕೊಳ್ಳಲು ಮನಸ್ಸಾಗಲಿಲ್ಲ. ಮುಂಬೈನ ವಾಂಖೆಡೆ ಕ್ರೀಡಾಂಗಣಕ್ಕೆ ಹೋಗಿ ಕೂತಿದ್ದೆ.
ಪಂದ್ಯದ ಮೊದಲ ದಿನ.. ದಾವಣಗೆರೆ ಎಕ್ಸ್ಪ್ರೆಸ್ ವಿನಯ್ ಕುಮಾರ್ ಮತ್ತು ಪೀಣ್ಯ ಎಕ್ಸ್ಪ್ರೆಸ್ ಅಭಿಮನ್ಯು ಮಿಥುನ್ ಪ್ರಚಂಡ ದಾಳಿಗೆ ತರಗೆಲೆಯಂತೆ ಉದುರಿ ಹೋಗಿತ್ತು ತಮಿಳುನಾಡು. ಸ್ಕೋರ್ ಬೋರ್ಡ್ನಲ್ಲಿ ಕೇವಲ 134 ರನ್. ‘ಇಷ್ಟು ಸಾಕು ಕರ್ನಾಟಕ ರಣಜಿ ಟ್ರೋಫಿ ಗೆಲ್ಲಲು’ ಎಂದೇ ಭಾವಿಸಿದ್ದೆ.. ಆದರೆ ಅದು ಸುಳ್ಳಾಗಲು ಹೆಚ್ಚು ಸಮಯ ಹಿಡಿಯಲಿಲ್ಲ. 31 ರನ್ ಗಳಿಸುವಷ್ಟರಲ್ಲಿ ಸಮರ್ಥ್, ಶಿಶಿರ್ ಭವಾನೆ, ರಾಬಿನ್ ಉತ್ತಪ್ಪ, ಮನೀಶ್ ಪಾಂಡೆ ಆಟ ಮುಗಿದಿತ್ತು. ರನ್ ಗಳಿಸುವ ಧಾವಂತದಲ್ಲಿ ಡೈವ್ ಹೊಡೆದಿದ್ದ ರಾಹುಲ್ ನಾಲ್ಕನೇ ಓವರ್ನಲ್ಲೇ ಕಾಲು ನೋವಿನ ಕಾರಣ ‘ರಿಟೈರ್ಡ್ ಹರ್ಟ್’ ಆಗಿ ಪೆವಿಲಿಯನ್ನಲ್ಲಿ ಕೂತಿದ್ದ. ಆ ಸಮಯದಲ್ಲಿ ನೈಟ್ ವಾಚ್ಮನ್ ಆಗಿ ಬಂದಿದ್ದ ಅಭಿಮನ್ಯು ಮಿಥುನ್ 39 ರನ್ ಗಳಿಸಿ ತನ್ನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾನೆ. ಮಿಥುನ್ ಔಟಾದಾಗ ಕರ್ನಾಟಕ ಇನ್ನಿಂಗ್ಸ್ ಮುನ್ನಡೆಯಿಂದ ಇನ್ನೂ 50 ರನ್ ದೂರದಲ್ಲಿತ್ತು.
ಲಕ್ಷ್ಮೀಪತಿ ಬಾಲಾಜಿ ನೇತೃತ್ವದ ತಮಿಳುನಾಡಿನ ಬೌಲಿಂಗ್ ಪಡೆ ವಿಜೃಂಭಿಸಿ ನಿಂತಿದ್ದ ಸಮಯ.. ಮೊದಲ ದಿನ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದ ರಾಹುಲ್ ತಂಡ ಅತ್ಯಂತ ಸಂಕಷ್ಟದಲ್ಲಿದ್ದಾಗ ಕುಂಟುತ್ತಲೇ ಮೈದಾನಕ್ಕಿಳಿಯುತ್ತಾನೆ. ಅವನಿಗೆ ಗೊತ್ತಿತ್ತು.. ಒಂದು ಒಳ್ಳೆಯ ಜೊತೆಯಾಟ ಕರ್ನಾಟಕ ತಂಡಕ್ಕೆ ಮರಳಿ ರಣಜಿ ಟ್ರೋಫಿ ಗೆಲ್ಲಿಸುತ್ತದೆ ಎಂದು. ಕರುಣ್ ನಾಯರ್ ಜೊತೆ ಕರ್ನಾಟಕಕ್ಕೆ ರಣಜಿ ಟ್ರೋಫಿ ಗೆಲ್ಲಿಸಲು ನಿಂತು ಬಿಟ್ಟ ರಾಹುಲ್. ನಡೆಯುವುದೇ ಕಷ್ಟ ಎಂಬ ಪರಿಸ್ಥಿತಿಯಲ್ಲಿ ರಾಹುಲ್ ಅವತ್ತು ಆಡಿದ ಇನ್ನಿಂಗ್ಸ್ ಇನ್ನೂ ಕಣ್ಣಿಗೆ ಕಟ್ಟಿದ ಹಾಗಿದೆ. 4ನೇ ಓವರ್ನಲ್ಲಿ ಮೈದಾನ ತೊರೆದು 25ನೇ ಓವರ್ನಲ್ಲಿ ವಾಪಸ್ ಬಂದವನು 188 ರನ್ ಗಳಿಸಿ 133ನೇ ಓವರ್ನಲ್ಲಿ ಔಟಾಗುತ್ತಾನೆ. ಔಟಾಗುವ ಮುಂಚೆ ಫೈನಲ್ ಪಂದ್ಯದ ತ್ರಿಶತಕವೀರ ಕರುಣ್ ನಾಯರ್ ಜೊತೆ 386 ರನ್ಗಳ ಜೊತೆಯಾಟವಾಡುತ್ತಾನೆ. ಈಡನ್ ಗಾರ್ಡರ್ನ್ಸ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ರಾಹುಲ್ ದ್ರಾವಿಡ್ ಮತ್ತು ವಿವಿಎಸ್ ಲಕ್ಷ್ಮಣ್ ಅವರ ಜೊತೆಯಾಟವನ್ನು ನೆನಪಿಸಿದ ಆಟವದು.
ಅಸಾಧ್ಯ ನೋವಿನಲ್ಲೇ ರಾಹುಲ್ ಕ್ರೀಸ್ಗಿಳಿದಾಗ 84 ರನ್ನಿಗೆ 5 ವಿಕೆಟ್ ಕಳೆದುಕೊಂಡಿತ್ತು ಕರ್ನಾಟಕ. ರಾಹುಲ್ ಔಟಾಗುವ ಹೊತ್ತಿಗೆ ಕರ್ನಾಟಕದ ಸ್ಕೋರ್ ಬೋರ್ಡ್ನಲ್ಲಿ ದಾಖಲಾಗಿದ್ದ ಮೊತ್ತವೆಷ್ಟು ಗೊತ್ತೇ.. 470 ರನ್. ಇಬ್ಬರು ಹುಡುಗರು ಸೇರಿ 3ನೇ ದಿನವೇ ಕರ್ನಾಟಕಕ್ಕೆ ರಣಜಿ ಟ್ರೋಫಿ ಗೆಲ್ಲಿಸಿದ್ದರು. ಕಾಲು ನೋವಿನ ಮಧ್ಯೆ 108 ಓವರ್ಗಳ ಕಾಲ ಕ್ರೀಸ್ಗೆ ಲಂಗರು ಹಾಕಿ ನಿಂತಿದ್ದ ರಾಹುಲ್. ಇದು ಕರ್ನಾಟಕ ತಂಡಕ್ಕಾಗಿ ಅವನು ತೋರಿದ್ದ ಬದ್ಧತೆ.
✍️ಸುದರ್ಶನ್ (ಈ ಲೇಖನವನ್ನ ಸುದರ್ಶನ್ ಅವರ ಫೇಸ್ಬುಕ್ ಖಾತೆಯಲ್ಲಿ ತೆಗೆದುಕೊಳ್ಳಲಾಗಿದೆ)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.