ಇತ್ತೀಚೆಗೆ ಟೀಂ ಇಂಡಿಯಾ ಆಟಗಾರ ದುಬಾರಿ ಕಾರನ್ನು ಖರೀದಿಸಿದರು. ಆದರೆ ಕನಸಿನ ಕಾರನ್ನು ಖರೀದಿಸಿದ ಇವರು ಆ ಸಂಭ್ರಮವನ್ನು ಆಚರಿಸುವ ಮುನ್ನವೇ ಒಂದು ಕಾನೂನು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಈ ವಿಷಯದ ಕುರಿತು ಸಾರಿಗೆ ಇಲಾಖೆ ಅವರಿಗೆ ನೋಟಿಸ್ ಕಳುಹಿಸಿದೆ.

ಸೆಲೆಬ್ರಿಟಿಗಳ, ವಿಶೇಷವಾಗಿ ಕ್ರೀಡಾ ತಾರೆಯರ ಜೀವನವು ಹೊರನೋಟಕ್ಕೆ ತುಂಬಾ ವರ್ಣಮಯವಾಗಿ ಕಾಣುತ್ತದೆ.ಇನ್ನು ಈ ಸ್ಟಾರ್ ಪ್ಲೇಯರ್ಗಳು ಆಗಾಗ ದುಬಾರಿ ವಸ್ಥುಗಳನ್ನು ಖರೀದಿಸಿರುತ್ತಾರೆ. ಅಷ್ಟೇ ಅಲ್ಲ ಇದನ್ನ ಸೋಷಿಯಲ್ ಮೀಡಿಯಾದಲ್ಲಿ ಸಹ ಹಂಚಿಕೊಂಡಿರುತ್ತಾರೆ. ಆದರೆ ಕೆಲವೊಮ್ಮೆ ಅವರು ಅನುಭವಿಸುವ ಈ ಐಶಾರಾಮಿ ಜೀವನವು ಅವರಿಗೆ ಸಂಕಷ್ಟವನ್ನು ತಂದೊಡ್ಡುತ್ತದೆ. ಇಂತಹದ್ದೇ ಆಘಾತಕಾರಿ ಘಟನೆಯೊಂದು ಭಾರತೀಯ ವೇಗದ ಬೌಲರ್ ಆಕಾಶ್ ದೀಪ್ ಜೀವನದಲ್ಲಿ ನಡೆದಿದೆ.
ಬಹಳ ದಿನಗಳ ನಂತರ ತನ್ನ ಕನಸಿನ ಕಾರನ್ನು ಖರೀದಿಸಿದ ಈ ಆಟಗಾರನಿಗೆ ಕಾನೂನು ಸಂಕಷ್ಟವೊಂದು ಎದುರಾಗಿದೆ.. ಟೀಮ್ ಇಂಡಿಯಾದ ಯುವ ವೇಗಿ ಆಕಾಶ್ ದೀಪ್ ಸಂತೋಷದಿಂದ ಇರಬೇಕಾಗಿದ್ದ ದಿನದಂದು ಶಾಕಿಂಗ್ ಸಂಗತಿಯೊಂದು ಎದುರಾಗಿದೆ. ಅದೇನೆಂದರೆ ಸ್ಟಾರ್ ಆಟಗಾರನೀಗ ಕಾನೂನು ಸಮಸ್ಯೆಗಳಲ್ಲಿ ಸಿಲುಕಿಕೊಂಡಿದ್ದಾನೆ. ಹೊಸದಾಗಿ ದುಬಾರಿ ಮೊತ್ತದ ವಾಹನ ಖರೀದಿಸಿದ್ದ ಇವರಿಗೆ ಸಾರಿಗೆ ಇಲಾಖೆ ಧಿಡೀರ್ ನೋಟಿಸ್ ಕಳುಹಿಸಿದೆ. ಇದಕ್ಕೆ ಕಾರಣ ಇಲ್ಲಿದೆ..
ಇಂಗ್ಲೆಂಡ್ ಸರಣಿಯಲ್ಲಿ ಯಶಸ್ವಿಯಾದ ಆಕಾಶ್ ದೀಪ್ ಇತ್ತೀಚೆಗೆ ಉತ್ತರ ಪ್ರದೇಶದ ತಮ್ಮ ತವರು ಗ್ರಾಮಕ್ಕೆ ಮರಳಿದರು. ಇದಾದನಂತರ ಅವರು ಹುಟ್ಟೂರಲ್ಲಿ ತಮ್ಮ ಕನಸಿನ ಕಾರು ಕಪ್ಪು ಟೊಯೋಟಾ ಫಾರ್ಚೂನರ್ ಅನ್ನು ಖರೀದಿಸಿದ್ದರು. ಆಟಗಾರ ತಮ್ಮ ಯಶಸ್ಸನ್ನು ತಮ್ಮ ಕುಟುಂಬದೊಂದಿಗೆ ಸೇರಿ ಆಚರಿಸಿದರು. ಅಷ್ಟೇ ಅಲ್ಲ ಅಕಾಶ್ ಈ ಸಂಭ್ರಮದ ಕ್ಷಣಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ, ಈ ಸಂತೋಷವನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡರು.ಅಷ್ಟೇ ಅಲ್ಲ 'ಕನಸು ನನಸಾಯಿತು. ಕೀಲಿಗಳು ಸಿಕ್ಕವು.ನನಗೆ ಅತ್ಯಂತ ಮುಖ್ಯವಾದ ಜನರೊಂದಿಗೆ ನಾನು ಇದ್ದೇನೆ' ಎಂಬ ಭಾವನಾತ್ಮಕ ಶೀರ್ಷಿಕೆಯನ್ನು ಆಕಾಶ್ ತಮ್ಮ ಪೋಸ್ಟ್ ಮೇಲೆ ಬರೆದುಕೊಂಡಿದ್ದಾರೆ. ಇನ್ನು ಆಕಾಶ್ನ ಈ ಪೋಸ್ಟ್ ನೋಡಿದ ಅವರ ಅಭಿಮಾನಿಗಳು ಸಂತೋಷದಿಂದ ಅಭಿನಂದನೆಗಳನ್ನು ಹೇಳಿದ್ದಾರೆ. ಈ ಕಾರು ಫಾರ್ಚೂನರ್ನ ಟಾಪ್ ಮಾಡೆಲ್ ಆಗಿದ್ದು, ಇದರ ಬೆಲೆ ಸುಮಾರು 62 ಲಕ್ಷ ರೂ ಆಗಿದೆ.
ಆದರೆ ಆಕಾಶ್ ದೀಪ್ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್ ಈಗ ಅವರಿಗೆ ಸಂಕಷ್ಟ ತಂದೊಡ್ಡಿದೆ. ಕಾರು ಖರೀದಿಸಿದ ಸಂಭ್ರಮದಲ್ಲಿಯೇ ಆಟಗಾರನಿಗೆ ಸಾರಿಗೆ ಇಲಾಖೆ ಶಾಕ್ ಕೊಟ್ಟಿದೆ. ಇದಕ್ಕೆ ಕಾರಣವೆಂದರೆ ಕಾರಿನಲ್ಲಿ 'ಹೈ ಸೆಕ್ಯುರಿಟಿ ನೋಂದಣಿ ಪ್ಲೇಟ್ (HSRP) ಇಲ್ಲದಿರುವುದು. ಸಾಮಾನ್ಯವಾಗಿ ದೇಶದಲ್ಲಿ ಓಡುವ ಪ್ರತಿಯೊಂದು ವಾಹನಕ್ಕೂ ಈ HSRP ಕಡ್ಡಾಯವಾಗಿದೆ. ಆದ್ದರಿಂದ ಉತ್ತರ ಪ್ರದೇಶ ಸಾರಿಗೆ ಇಲಾಖೆಯು ಆಕಾಶ್ ದೀಪ್ ಈ ಪ್ಲೇಟ್ ಇಲ್ಲದೆ ತನ್ನ ಕಾರನ್ನು ಓಡಿಸುತ್ತಿರುವುದನ್ನು ಗಮನಿಸಿತು. ಇದರಿಂದ ಆಟಗಾರನಿಗೆ ಇಲಾಖೆ ತಕ್ಷಣವೇ ನೋಟಿಸ್ ಕಳುಹಿಸಿದೆ. ಈ ಕಾರಣದಿಂದಾಗಿ ಆಟಗಾರ ಕಾನೂನು ತೊಂದರೆಗೆ ಸಿಲುಕಿದ್ದಾರೆ.
HSRP ವಾಹನ ಭದ್ರತೆಗಾಗಿ ಕೇಂದ್ರ ಸರ್ಕಾರವು ಕಡ್ಡಾಯಗೊಳಿಸಿದ ವಿಶೇಷ ನಂಬರ್ ಪ್ಲೇಟ್ ಆಗಿದೆ. ಇದು ಸಾಮಾನ್ಯ ಪ್ಲೇಟ್ಗಳಿಗಿಂತ ಬಹಳ ಭಿನ್ನವಾಗಿದೆ. HSRPಗಳು ಲೇಸರ್ ಲೇಪಿತ ಕೋಡ್ಗಳು, ಕ್ರೋಮಿಯಂ ಆಧಾರಿತ ಹೊಲೊಗ್ರಾಮ್ ಮತ್ತು ಟ್ಯಾಂಪರ್-ಪ್ರೂಫ್ ತೆಗೆಯಲಾಗದ ಸ್ಕ್ರೂಗಳನ್ನು ಹೊಂದಿವೆ. ಈ ವಿಶೇಷ ನಂಬರ್ ಪ್ಲೇಟ್ಗಳು ವಾಹನ ಕಳ್ಳತನವನ್ನು ತಡೆಯಲು ಮತ್ತು ನಕಲಿ ನಂಬರ್ ಪ್ಲೇಟ್ಗಳನ್ನು ಗುರುತಿಸಲು ಉಪಯುಕ್ತವಾಗಿವೆ. ಅವು ಸಾಮಾನ್ಯ ನಂಬರ್ ಪ್ಲೇಟ್ಗಳಿಗಿಂತ ಹೆಚ್ಚು ಬಲವಾದವು ಮತ್ತು ಉತ್ತಮ ಗುಣಮಟ್ಟದ್ದಾಗಿವೆ. ಅವುಗಳ ನಕಲಿ ಆವೃತ್ತಿಗಳನ್ನು ತಯಾರಿಸುವುದು ತುಂಬಾ ಕಷ್ಟ.