)
Vaibhav Suryavanshi hit most sixes: 2025ರ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಪ್ರವೇಶ ಪಡೆದ ರಾಜಸ್ತಾನ ರಾಯಲ್ಸ್ ತಂಡದ ಓಪನರ್ ವೈಭವ್ ಸೂರ್ಯವಂಶಿ ದಾಖಲೆ ಮೇಲೆ ದಾಖಲೆಗಳನ್ನು ಸೃಷ್ಟಿಸುತ್ತಿದ್ದಾರೆ. ಕೇವಲ ಎರಡು ಪ್ರೀಮಿಯರ್ ಲೀಗ್ನಲ್ಲಿ ವೈಭವ್ ಸೂರ್ಯವಂಶಿ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡಿದ್ದಾರೆ. ಇದೀಗ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಮೂರು ಸಿಕ್ಸರ್ಗಳನ್ನು ಸಿಡಿಸುವ ಮೂಲಕ ಮತ್ತೊಂದು ಮಹತ್ವದ ಸಾಧನೆ ಮಾಡಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಐಪಿಎಲ್ನಲ್ಲಿ ಅತಿ ಹೆಚ್ಚು ಸಿಕ್ಸರ್ಗಳನ್ನು ಸಿಡಿಸಿದ ಬ್ಯಾಟ್ಸ್ಮನ್ ಎನ್ನುವ ಖ್ಯಾತಿಗೆ ವೈಭವ್ ಸೂರ್ಯವಂಶಿ ಅವರು ಪಾತ್ರರಾಗಿದ್ದಾರೆ. ವಿಶೇಷ ಎಂದರೆ ಅಭಿಷೇಕ್ ಶರ್ಮಾ, ವಿರಾಟ್ ಕೊಹ್ಲಿಯಂಥಹ ಆಟಗಾರರನ್ನ ಹಿಂದಿಕ್ಕಿದ್ದಾರೆ.
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ಅವರು ಟಾಸ್ ಗೆದ್ದು ಮೊದಲ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಇದರಿಂದ ರಾಜಸ್ಥಾನ್ ರಾಯಲ್ಸ್ ಬ್ಯಾಟಿಂಗ್ ಮಾಡಲು ಶುರು ಮಾಡಿತು. ಓಪನರ್ಗಳಾಗಿ ಕ್ರೀಸ್ಗೆ ಆಗಮಿಸಿದ ವೈಭವ್ ಸೂರ್ಯವಂಶಿ ಮತ್ತು ಯಶಸ್ವಿ ಜೈಸ್ವಾನ್ ಉತ್ತಮ ಆರಂಭ ಪಡೆಯಲಿಲ್ಲ. ಪಂದ್ಯದಲ್ಲಿ ಯಶಸ್ವಿ ಜೈಶ್ವಾಲ್ ಕೇವಲ 12 ರನ್ಗೆ ವಿಕೆಟ್ ಒಪ್ಪಿಸಿ ಹೊರ ನಡೆದರು.
ಆದರೆ ಇನ್ನೊಂದಡೆ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ಮಾಡುತ್ತಿದ್ದ ವೈಭವ್ ಸೂರ್ಯವಂಶಿ ಡೆಲ್ಲಿ ಬೌಲರ್ಗಳನ್ನು ಬೆಂಡೆತ್ತಿದರು. ವೈಭವ್ ಸೂರ್ಯವಂಶಿ ಪಂದ್ಯದಲ್ಲಿ ಕೇವಲ 21 ಎಸೆತಗಳನ್ನು ಎದುರಿಸಿದರು. ಇದರಲ್ಲಿ ಮೂರು ಸಿಕ್ಸರ್ಗಳು 5 ಬೌಂಡರಿಗಳ ನೆರವಿನಿಂದ 46 ರನ್ಗಳನ್ನು ಗಳಿಸಿ ಆಡುವಾಗ ಮಾಧವ್ ತಿವಾರಿ ಬೌಲಿಂಗ್ನಲ್ಲಿ ಡೇವಿಡ್ ಮಿಲ್ಲರಿಗೆ ಕ್ಯಾಚ್ ಕೊಟ್ಟು ಹೊರ ನಡೆದರು. ಇದೇ ಪಂದ್ಯದಲ್ಲಿ ಮೂರು ಸಿಕ್ಸರ್ಗಳನ್ನು ಸಿಡಿಸುವ ಮೂಲಕ ಐಪಿಎಲ್ ಸೀಸನ್ಗಳಲ್ಲಿ ಅತಿ ಹೆಚ್ಚು ಸಿಕ್ಸರ್ಗಳನ್ನು ಸಿಡಿಸಿದ ಬ್ಯಾಟ್ಸ್ಮನ್ ಸೂರ್ಯವಂಶಿ ಆಗಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಸೀಸನ್ನಲ್ಲಿ 12 ಪಂದ್ಯಗಳಿಂದ ಸೂರ್ಯವಂಶಿ ಅವರು 43 ಸಿಕ್ಸರ್ಗಳು ಹಾಗೂ 43 ಬೌಂಡರಿಗಳನ್ನು ಬಾರಿಸಿದ್ದಾರೆ. ವೈಭವ್ ಸೂರ್ಯವಂಶಿ ಅವರು 234.76 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ್ದು 486 ರನ್ಗಳನ್ನು ಗಳಿಸಿದ್ದಾರೆ. ಅಲ್ಲದೇ ಆರೆಂಜ್ ಕ್ಯಾಪ್ ರೇಸ್ನಲ್ಲಿ ಟಾಪ್ ಹತ್ತರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಭಾರತೀಯರಲ್ಲಿ ಐಪಿಎಲ್ ಸೀಸನ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟರ್ ವೈಭವ್ ಸೂರ್ಯವಂಶಿ ಮೊದಲ ಸ್ಥಾನ ಪಡೆದಿದ್ದಾರೆ. ಎರಡನೇ ಸ್ಥಾನದಲ್ಲಿ ಅಭಿಷೇಕ್ ಶರ್ಮಾ ಇದ್ದು ಇವರು 42 ಸಿಕ್ಸ್ ಬಾರಿಸಿದ್ದಾರೆ. ಇವರ ಬಳಿಕ ಶ್ರೇಯಸ್ ಅಯ್ಯರ್ ಇದ್ದು 39 ಸಿಕ್ಸರ್ ಗಳಿಸಿದ್ದಾರೆ.
ಐಪಿಎಲ್ ಸೀಸನ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಭಾರತೀಯ ಬ್ಯಾಟರ್ಸ್
43*- ವೈಭವ್ ಸೂರ್ಯವಂಶಿ
42- ಅಭಿಷೇಕ್ ಶರ್ಮಾ (2024)
39- ಶ್ರೇಯಸ್ ಅಯ್ಯರ್ (2025)
38- ವಿರಾಟ್ ಕೊಹ್ಲಿ (2016)
38- ವಿರಾಟ್ ಕೊಹ್ಲಿ (2024)
38- ಸೂರ್ಯಕುಮಾರ್ (2025)