)
Vaibhav Suryavanshi injured: ಇಂಡಿಯನ್ ಪ್ರೀಮಿಯರ್ ಲೀಗ್ನ 52ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ರಾಜಸ್ತಾನ ರಾಯಲ್ಸ್ ತಂಡದ ಓಪನರ್ ವೈಭವ್ ಸೂರ್ಯವಂಶಿ ಅವರು ಇನ್ನಿಂಗ್ಸ್ನ ಮೊದಲ ಓವರ್ನಲ್ಲೇ ಗಂಭೀರವಾಗಿ ಗಾಯಗೊಂಡಿದ್ದಾರೆ. ಗುಜರಾತ್ ಟೈಟನ್ಸ್ ತಂಡದ ನಾಯಕ ಶುಭ್ಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಅವರ ಅಮೋಘವಾದ ಬ್ಯಾಟಿಂಗ್ನಿಂದ ನಿಗದಿತ ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 230 ರನ್ಗಳ ಟಾರ್ಗೆಟ್ ನೀಡಿತ್ತು. ಈ ಗುರಿ ಬೆನ್ನಟ್ಟಿದ್ದ ರಾಜಸ್ತಾನ ರಾಯಲ್ಸ್ ಬಹುಬೇಗನೇ ಸೋಲೋಪ್ಪಿಕೊಂಡಿದೆ. ಇನ್ನಿಂಗ್ಸ್ನ ಆರಂಭದಲ್ಲೇ ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಮಾಡುವಾಗ ಗಾಯಕ್ಕೆ ಒಳಗಾಗಿದ್ದಾರೆ. ಇದರಿಂದ ಮುಂದಿನ ಪಂದ್ಯಕ್ಕೆ ಲಭ್ಯವಾಗುತ್ತಾರೋ, ಇಲ್ಲವೋ ಎನ್ನುವುದರ ಕುರಿತು ಫ್ರಾಂಚೈಸಿ ಮಾಹಿತಿ ನೀಡಬೇಕಿದೆ.
230 ರನ್ಗಳ ಗುರಿಯನ್ನು ಬೆನ್ನಟ್ಟಿದ ರಾಜಸ್ತಾನ ರಾಯಲ್ಸ್ ಓಪನರ್ ಯಶಸ್ವಿ ಜೈಸ್ವಾಲ್ ಮೊದಲ ಓವರ್ನಲ್ಲಿ 1 ರನ್ ಗಳಿಸಿ ವೈಭವ್ ಸೂರ್ಯವಂಶಿಗೆ ಬ್ಯಾಟಿಂಗ್ ಸ್ಟ್ರೈಕ್ ನೀಡಿದರು. ವೈಭವ್ ಎರಡನೇ ಎಸೆತದಲ್ಲಿ ಸಿಕ್ಸರ್ ಬಾರಿಸಿ ಕೀರನ್ ಪೊಲಾರ್ಡ್ ಅವರ ದಾಖಲೆಯನ್ನು ಮುರಿದರು. ಸೂರ್ಯವಂಶಿ ಅವರು 514 ಎಸೆತಗಳಲ್ಲಿ 100 ಟಿ20 ಸಿಕ್ಸರ್ಗಳನ್ನು ಸಿಡಿಸಿದ ಏಕೈಕ ಬ್ಯಾಟರ್ ಎನಿಸಿಕೊಂಡಿದ್ದಾರೆ. ಪೊಲಾರ್ಡ್ ಈ ಹಿಂದೆ 843 ಎಸೆತಗಳನ್ನು ತೆಗೆದುಕೊಂಡಿದ್ದರು. ಆದರೆ ವೈಭವ್ ಸೂರ್ಯವಂಶಿ ಇದಕ್ಕಿಂತ ಕಡಿಮೆ ಎಸೆತಗಳನ್ನು ತೆಗೆದುಕೊಂಡು ಸಾಧನೆ ಮಾಡಿದ್ದಾರೆ. ಇದೇ ಓವರ್ನ ಮೂರನೇ ಎಸೆತದಲ್ಲಿ ವೈಭವ್ ಗಾಯಗೊಂಡರು.
ಗುಜರಾತ್ ಟೈಟನ್ಸ್ನ ಪೇಸರ್ ಮೊಹಮ್ಮದ್ ಸಿರಾಜ್ ಅವರು ನಿಖರವಾದ ಯಾರ್ಕರ್ ಬಾಲ್ ಅನ್ನು ಸಿಕ್ಸರ್ ಬಾರಿಸಲು ಹೋದ ವೈಭವ್ ಸೂರ್ಯವಂಶಿ, ಚೆಂಡು ಬ್ಯಾಟ್ಗೆ ಟಚ್ ಆಗಿ ಕಾಲಿಗೆ ಬಲವಾಗಿ ಬಡಿದಿದೆ. ಬಲ ಪಾದದ ಮೂಳೆಯ ಬಳಿಗೆ ಬಡಿದು, ಅವರ ಶೂ ಅಥವಾ ಪ್ಯಾಡ್ ಇಲ್ಲದ ಸ್ಥಳದಲ್ಲಿ ಬಡಿದಿದೆ ಎಂದು ಹೇಳಲಾಗುತ್ತಿದೆ. ಬಾಲ್ ಬಲವಾಗಿ ಬಿದ್ದ ನಂತರ ವೈಭವ್ ಸೂರ್ಯವಂಶಿ ಅವರು ಕ್ರೀಸ್ನಲ್ಲೇ ನೋವಿನಿಂದ ನರಳುತ್ತಿರುವುದು ಕಂಡುಬಂದಿತು. ಹೀಗಾಗಿ ಸೂರ್ಯವಂಶಿಗೆ ಚಿಕಿತ್ಸೆ ನೀಡಲು ಭೌತಚಿಕಿತ್ಸಕರು ಮೈದಾನಕ್ಕೆ ಧಾವಿಸಿದ್ದರು.
ಮೊಹಮ್ಮದ್ ಸಿರಾಜ್ ಅವರ ಇನ್ ಸ್ವಿಂಗ್ ಆಗುವ ಯಾರ್ಕರ್ ಎಸೆದರು. ವೈಭವ್ ಮತ್ತೆ ತನ್ನ ಬ್ಯಾಟ್ ಅನ್ನು ಬಲವಾಗಿ ಬೀಸಲು ಪ್ರಯತ್ನಿಸಿದರು. ಆದರೆ ಚೆಂಡು ಒಳಗಿನ ಅಂಚಿಗೆ ಬಡಿದು ಸೂರ್ಯವಂಶಿಯ ಶೂಗೆ ಬಿದ್ದಿದೆ. ಚಿಕಿತ್ಸೆಯ ನೀಡಿದ ನಂತರ ವೈಭವ್ ಆಡಲು ರೆಡಿಯಾದರು. ಗಾಯಗೊಂಡ ವೈಭವ್ ಸೂರ್ಯವಂಶಿ ಆಕ್ರಮಣಕಾರಿಯಾದ ಬ್ಯಾಟಿಂಗ್ ಮಾಡಿದರು. ಸಿಕ್ಸರ್, ಬೌಂಡರಿಗಳನ್ನು ಬಾರಿಸಲು ಪ್ರಾರಂಭಿಸಿದರು. ಕಗಿಸೊ ರಬಾಡ ಅವರ ಎರಡನೇ ಓವರ್ನಲ್ಲಿ ಸತತ ಎರಡು ಸಿಕ್ಸರ್ಗಳನ್ನು ಸೂರ್ಯವಂಶಿ ಬಾರಿಸಿದರು. ಇದಾದ ಮೇಲೆ ಮೊಹಮ್ಮದ್ ಸಿರಾಜ್ ಅವರ ಓವರ್ನಲ್ಲಿ ಸೂರ್ಯವಂಶಿ ಮೂರು ಬೌಂಡರಿಗಳನ್ನು ಬಾರಿಸಿದರು.
ಅಂತಿಮವಾಗಿ ಮೊಹಮ್ಮದ್ ಸಿರಾಜ್ ಅವರು, ವೈಭವ್ ಸೂರ್ಯವಂಶಿಯನ್ನು ಔಟ್ ಮಾಡುವಲ್ಲಿ ಯಶಸ್ವಿಯಾದರು. ಸಿರಾಜ್ ಬಾಲ್ ಅನ್ನು ಜೋರಾಗಿ ಹೊಡೆದ ವೈಭವ್ ಸೂರ್ಯವಂಶಿ ನೇರ ಅರ್ಷದ್ ಖಾನ್ ಅವರಿಗೆ ಕ್ಯಾಚ್ ನೀಡಿದರು. ಸೂರ್ಯವಂಶಿಯ ಕ್ಯಾಚ್ ಹಿಡಿಯುತ್ತಿದ್ದಂತೆ ಸಿರಾಜ್ ಗೆಲುವು ನಮ್ಮದೇ ಎಂಬುವಂತೆ ಸಂಭ್ರಮಿಸಿದರು. ವೈಭವ್ 225.00 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟಿಂಗ್ ಮಾಡಿ 16 ಎಸೆತಗಳಲ್ಲಿ 36 ರನ್ ಗಳಿಸಿದರು. ರಾಜಸ್ತಾನದ ಆರಂಭಿಕ ಆಟಗಾರ ಮೂರು ಬೌಂಡರಿ ಮತ್ತು ಮೂರು ಸಿಕ್ಸರ್ಗಳನ್ನು ಚಚ್ಚಿದರು.
A Yorker to rattle to rattle Vaibhav Suryavanshi.
A bouncer to dismiss him.
DSP SIRAJ CELEBRATIONS SAYS IT ALL. 🥶🔥 pic.twitter.com/yZafC0NnaY
— Mufaddal Vohra (@mufaddal_vohra) May 9, 2026