ನವದೆಹಲಿ: ಬಿಹಾರದ ಪ್ರತಿಭಾವಂತ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಎಂಬ 14 ವರ್ಷದ ಬಾಲಕ ಅತಿ ವೇಗದ ಶತಕ ಭಾರಿಸಿದ ಎರಡನೇ ಕ್ರಿಕೆಟಿಗ ಮತ್ತು ಮೊದಲನೇ ಭಾರತೀಯ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾನೆ.ಆ ಮೂಲಕ ಎಲ್ಲರಿಗೆ ಅಚ್ಚರಿ ಮೂಡಿಸಿದ್ದಾನೆ.
ಈಗ ಈ ದಾಖಲೆಯ ಬೆನ್ನಲ್ಲೇ 2021ರ ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ, ಕೇವಲ 10 ವರ್ಷದ ವಯಸ್ಸಿನಲ್ಲಿ ವೈಭವ್ ತನ್ನ ಮನೆಯ ಟೆರೇಸ್ ಮೇಲೆ ಕ್ರಿಕೆಟ್ ಅಭ್ಯಾಸ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಕೊವಿಡ್ ಹಿನ್ನೆಲೆಯಲ್ಲಿ ಆಗ ಭಾರತದಲ್ಲಿ ಲಾಕ್ ಡೌನ್ ಇದ್ದಿದ್ದರಿಂದಾಗಿ ಹಲವು ಕಟ್ಟುನಿಟ್ಟಿನ ನಿರ್ಭಂದಗಳಿದ್ದವು. ಹೊರಗೆ ಆಟವಾಡುವುದು ಸಾಧ್ಯವಾಗಿರಲಿಲ್ಲ. ಆದರೆ ವೈಭವ್, ತನ್ನ ಮನೆಯ ಟೆರೇಸ್ ಮೇಲೆಯೇ ತರಬೇತಿ ಪಡೆಯುತ್ತಿರುವ ದೃಶ್ಯ ಈಗ ಸೋಶಿಯಲ್ ಮೀಡಿಯಾದಲ್ಲಿ ಸೆರೆಯಾಗಿದೆ.
I Trust I Believe. Thank you for all blessings love and support ? pic.twitter.com/kS98ZcOZEN
— Vaibhav Sooryavanshi (@Vaibhavsooryava) April 29, 2025
ಇದೀಗ, ನಾಲ್ಕು ವರ್ಷಗಳ ನಂತರ, ವೈಭವ್ ಐಪಿಎಲ್ 2025ರಲ್ಲಿ ರಾಜಸ್ಥಾನ್ ರಾಯಲ್ಸ್ ಪರವಾಗಿ ಗುಜರಾತ್ ಟೈಟಾನ್ಸ್ ವಿರುದ್ಧ ಕೇವಲ 38 ಎಸೆತಗಳಲ್ಲಿ 101 ರನ್ ಗಳಿಸಿ, ಟಿ20 ಕ್ರಿಕೆಟ್‌ನಲ್ಲಿ ಅತ್ಯಂತ ಕಿರಿಯ ಶತಕ ವೀರ ಎನ್ನುವ ದಾಖಲೆ ಬರೆದಿದ್ದಾನೆ. ಈ ಇನಿಂಗ್ಸ್‌ನಲ್ಲಿ 11 ಸಿಕ್ಸರ್‌ಗಳು ಮತ್ತು 94 ರನ್‌ಗಳು ಬೌಂಡರಿಗಳ ಮೂಲಕ ಬಂದವು. ಇದು ಐಪಿಎಲ್‌ನಲ್ಲಿ ಭಾರತೀಯರ ಪೈಕಿ ಅತಿ ವೇಗದ ಶತಕವಾಗಿದ್ದು, ಯೂಸುಫ್ ಪಠಾಣ್ ಅವರ 15 ವರ್ಷದ ಹಳೆಯ ದಾಖಲೆಯನ್ನು ಮುರಿದಿದ್ದಾನೆ. ಈ ಸಾಧನೆಯ ಮೂಲಕ ವೈಭವ್, ವಿಜಯ್ ಝೋಲ್ (18 ವರ್ಷ, 2013) ಅವರ ದಾಖಲೆಯನ್ನು ಮೀರಿಸಿ, ಟಿ20 ಯಲ್ಲಿ ಅತ್ಯಂತ ಕಿರಿಯ ಶತಕ ವೀರನಾಗಿ ಹೊರಹೊಮ್ಮಿದ್ದಾನೆ.
10 years old Vaibhav Suryavanshi seen practicing during lockdown period pic.twitter.com/vhSIueRTmr
— Sunil the Cricketer (@1sInto2s) April 28, 2025
ವೈಭವ್‌ನ ಈ ಪಯಣವು ಭಾರತದಲ್ಲಿ ಗ್ರಾಮೀಣ ಕ್ರಿಕೆಟ್‌ನ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ. 2024ರ ಬಿಸಿಸಿಐ ವರದಿಯ ಪ್ರಕಾರ, ಐಪಿಎಲ್ ಆಟಗಾರರಲ್ಲಿ ಶೇ.70 ರಷ್ಟು ಮಂದಿ ಸಣ್ಣ ಪಟ್ಟಣಗಳಿಂದ ಬಂದವರು. ಲಾಕ್‌ಡೌನ್ ಸಮಯದಲ್ಲಿ ಸೀಮಿತ ಸೌಲಭ್ಯಗಳ ಮಧ್ಯೆಯೂ ತರಬೇತಿ ಪಡೆದ ವೈಭವ್, ತನ್ನ ಪೋಷಕರ ಬೆಂಬಲದೊಂದಿಗೆ ಈ ಎತ್ತರಕ್ಕೆ ಏರಿದ್ದಾನೆ. ಅವನ ಪೋಷಕರು ತಮ್ಮ ಜಮೀನನ್ನು ಮಾರಾಟ ಮಾಡಿ ಅವನ ಕ್ರಿಕೆಟ್ ಆಸಕ್ತಿಗೆ ಪ್ರೋತ್ಸಾಹ ನೀಡಿದ್ದಾರೆ. ಸಚಿನ್ ತೆಂಡೂಲ್ಕರ್ ಮತ್ತು ಆಡಮ್ ಗಿಲ್‌ಕ್ರಿಸ್ಟ್ ಸೇರಿದಂತೆ ಕ್ರಿಕೆಟ್ ದಿಗ್ಗಜರು ವೈಭವ್‌ನ ಸಾಧನೆಯನ್ನು ಶ್ಲಾಘಿಸಿದ್ದಾರೆ. ಈ ಯುವ ಪ್ರತಿಭೆ ಭಾರತೀಯ ಕ್ರಿಕೆಟ್‌ನ ಭವಿಷ್ಯದ ತಾರೆಯಾಗಿ ಮಿಂಚಲಿದ್ದಾನೆ ಎನ್ನುವುದು ಈಗ ಖಾತ್ರಿಯಾಗಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









