IPL 2025: 'ಎಷ್ಟೇ ಟಾಪ್ ಬೌಲರ್‌ಗಳಿದ್ರೂ ಅಷ್ಟೇ'.. ವೈಭವ್ ಸೂರ್ಯವಂಶಿ

Vaibhav Suryavanshi statement after a brilliant century: ಐಪಿಎಲ್ ಇತಿಹಾಸದಲ್ಲಿ ಅದ್ಭುತ ಶತಕದೊಂದಿಗೆ ಅನೇಕ ದಾಖಲೆಗಳನ್ನು ಸೃಷ್ಟಿಸಿದ ವೈಭವ್‌ ಸೂರ್ಯವಂಶಿ ಶಾಕಿಂಗ್‌ ಹೇಳಿಕೆಯೊಂದನ್ನು ನೀಡಿದ್ದಾರೆ..     

Written by - Savita M B | Last Updated : Apr 29, 2025, 10:09 AM IST
  • 14 ವರ್ಷದ ವೈಭವ್ ಸೂರ್ಯವಂಶಿ ಇತಿಹಾಸವನ್ನು ಸೃಷ್ಟಿಸಿದರು
  • ವೈಭವ್ ಸೂರ್ಯವಂಶಿ ಗುಜರಾತ್ ಟೈಟಾನ್ಸ್ ಬೌಲರ್‌ಗಳನ್ನು ಚಚ್ಚಿ ಹಾಕಿ ಐಪಿಎಲ್ ಇತಿಹಾಸದಲ್ಲಿ ಎರಡನೇ ವೇಗದ ಶತಕ ಗಳಿಸಿದರು
IPL 2025: 'ಎಷ್ಟೇ ಟಾಪ್ ಬೌಲರ್‌ಗಳಿದ್ರೂ ಅಷ್ಟೇ'.. ವೈಭವ್ ಸೂರ್ಯವಂಶಿ

vaibhav suryavanshi: 14 ವರ್ಷದ ವೈಭವ್ ಸೂರ್ಯವಂಶಿ ಇತಿಹಾಸವನ್ನು ಸೃಷ್ಟಿಸಿದರು. ವೈಭವ್ ಸೂರ್ಯವಂಶಿ ಗುಜರಾತ್ ಟೈಟಾನ್ಸ್ ಬೌಲರ್‌ಗಳನ್ನು ಚಚ್ಚಿ ಹಾಕಿ ಐಪಿಎಲ್ ಇತಿಹಾಸದಲ್ಲಿ ಎರಡನೇ ವೇಗದ ಶತಕ ಗಳಿಸಿದರು. ವೈಭವ್ ತಮ್ಮ ಮೂರನೇ ಐಪಿಎಲ್ ಪಂದ್ಯದಲ್ಲಿ ಕೇವಲ 35 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದಾರೆ ಎಂಬುದು ಗಮನಾರ್ಹ. ಈ ಬ್ಯಾಟ್ಸ್‌ಮನ್ ತಮ್ಮ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಮತ್ತು 11 ಸಿಕ್ಸರ್‌ಗಳನ್ನು ಬಾರಿಸಿದರು.

Add Zee News as a Preferred Source

ಈ ಶತಕದ ಇನ್ನಿಂಗ್ಸ್ ನಂತರ ಮಾತನಾಡಿದ ವೈಭವ್ ಸೂರ್ಯವಂಶಿ, ʼಇದು ನನಗೆ ಒಂದು ಅದ್ಭುತ ಭಾವನೆ.. ಇದು ಐಪಿಎಲ್‌ನಲ್ಲಿ ನನ್ನ ಮೊದಲ ಶತಕ. ನಾನು ಈ ಸಾಧನೆಯನ್ನು ಮೂರನೇ ಇನ್ನಿಂಗ್ಸ್‌ನಲ್ಲಿ ಸಾಧಿಸಿದೆ. ತರಬೇತಿ ಅವಧಿಯಲ್ಲಿ ನಾನು ಪಟ್ಟ ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿತು. ಜೈಸ್ವಾಲ್ ಜೊತೆ ಬ್ಯಾಟಿಂಗ್ ಮಾಡುವುದು ಖುಷಿ ಕೊಟ್ಟಿತು.. ಐಪಿಎಲ್‌ನಲ್ಲಿ ಶತಕ ಗಳಿಸುವುದು ಕನಸಿನಂತೆ. ಇಂದು ನಾನು ಅದನ್ನು ಸಾಧಿಸಿದೆ. ಎಷ್ಟೇ ಟಾಪ್‌ ಬೌಲರ್‌ಗಳಿದ್ರೂ ನನಗೆ ಭಯವಿಲ್ಲ. ನಾನು ಹೆಚ್ಚು ಯೋಚಿಸುವುದಿಲ್ಲ. ನನ್ನ ಗಮನವೆಲ್ಲ ಆಟವಾಡುವುದರ ಮೇಲೆʼ ಎಂದು ಹೇಳಿದ್ದಾರೆ.. 

ಇದನ್ನೂ ಓದಿ: ಖ್ಯಾತ ಬಾಲಿವುಡ್‌ ನಟಿಯೊಂದಿಗೆ ಶಿಖರ್‌ ಧವನ್‌ ಡೇಟಿಂಗ್!‌ ಸಾಕ್ಷಿ ಸಮೇತ ಹೊರಬಿತ್ತು ಸ್ಟಾರ್ ಕ್ರಿಕೆಟರ್‌ ಸೀಕ್ರೆಟ್‌ ಲವ್‌ಸ್ಟೋರಿ..

ವೈಭವ್ ತಮ್ಮ ಶತಕದೊಂದಿಗೆ ಅನೇಕ ದಾಖಲೆಗಳನ್ನು ಸೃಷ್ಟಿಸಿದರು. ಐಪಿಎಲ್ ಇತಿಹಾಸದಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ಮತ್ತು ಅತ್ಯಂತ ವೇಗದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅದೇ ಸಮಯದಲ್ಲಿ, ಅವರು ಟಿ20 ಕ್ರಿಕೆಟ್‌ನಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಗುಜರಾತ್ ಟೈಟಾನ್ಸ್ (ಪ್ಲೇಯಿಂಗ್ XI): ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ಕೀಪರ್), ವಾಷಿಂಗ್ಟನ್ ಸುಂದರ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ಕರೀಂ ಜನತ್, ರಶೀದ್ ಖಾನ್, ರವಿ ಶ್ರೀನಿವಾಸನ್ ಸಾಯಿ ಕಿಶೋರ್, ಮೊಹಮ್ಮದ್ ಸಿರಾಜ್, ಫರೀದ್ ಕೃಷ್ಣ.

ರಾಜಸ್ಥಾನ್ ರಾಯಲ್ಸ್ (ಪ್ಲೇಯಿಂಗ್ XI): ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ, ನಿತೀಶ್ ರಾಣಾ, ರಿಯಾನ್ ಪರಾಗ್ (ನಾಯಕ), ಧ್ರುವ್ ಜುರೆಲ್ (ಕೀಪರ್), ಶಿಮ್ರಾನ್ ಹೆಟ್ಮೆಯರ್, ವನಿಂದು ಹಸರಂಗ, ಜೋಫ್ರಾ ಆರ್ಚರ್, ಮಹೇಶ್ ಟೀಕ್ಷನ್, ಸಂದೀಪ್ ಶರ್ಮಾ, ಯುದ್ಧವೀರ್ ಸಿಂಗ್ ಚರಕ್.

ಇದನ್ನೂ ಓದಿ: ಖ್ಯಾತ ಬಾಲಿವುಡ್‌ ನಟಿಯೊಂದಿಗೆ ಶಿಖರ್‌ ಧವನ್‌ ಡೇಟಿಂಗ್!‌ ಸಾಕ್ಷಿ ಸಮೇತ ಹೊರಬಿತ್ತು ಸ್ಟಾರ್ ಕ್ರಿಕೆಟರ್‌ ಸೀಕ್ರೆಟ್‌ ಲವ್‌ಸ್ಟೋರಿ..

ಎರಡೂ ತಂಡಗಳ ಪ್ರಭಾವಿ ಆಟಗಾರರು: 
ಗುಜರಾತ್ ಟೈಟಾನ್ಸ್ : ಇಶಾಂತ್ ಶರ್ಮಾ, ಮಹಿಪಾಲ್ ಲೊಮ್ರೋರ್, ಅನುಜ್ ರಾವತ್, ಅರ್ಷದ್ ಖಾನ್, ದಸುನ್ ಶನಕ.

ರಾಜಸ್ಥಾನ್ ರಾಯಲ್ಸ್ : ಶುಭಂ ದುಬೆ, ಕುಮಾರ್ ಕಾರ್ತಿಕೇಯ, ಆಕಾಶ್ ಮಾಧ್ವಾಲ್, ತುಷಾರ್ ದೇಶಪಾಂಡೆ, ಕುನಾಲ್ ಸಿಂಗ್ ರಾಥೋಡ್.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.  

...Read More

Trending News