Veteran stage artist Vimala Rangachar: ಹಿರಿಯ ರಂಗ ಕಲಾವಿದೆ, ಸಂಘಟಕಿ, ಲಲಿತಕಲೆಗಳ ಪೋಷಕರಾಗಿದ್ದ ವಿಮಲಾ ರಂಗಾಚಾರ್ (97) ಇಂದು ಸಂಜೆ ನಾಲ್ಕು ಗಂಟೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾದರು.
ಬೆಂಗಳೂರಿನ ಎಂಇಎಸ್ ಸಂಸ್ಥೆಯ ಸ್ಥಾಪಕ ಸದಸ್ಯರಾಗಿ, ಅಧ್ಯಕ್ಷರಾಗಿದ್ದರು. ಬೆಂಗಳೂರಿನ ಸೇವಾ ಸದನ ಕಟ್ಟಿ ಬೆಳೆಸಿದ ಅವರು, ಕಮಲಾದೇವಿ ಚಟ್ಟೋಪಾಧ್ಯಾಯ ಅವರು ಕಟ್ಟಿದ ಭಾರತೀಯ ನಾಟ್ಯ ಸಂಘದ ಕರ್ನಾಟಕ ಘಟಕದ ಅಧ್ಯಕ್ಷರಾಗಿದ್ದರು.
ಬೆಂಗಳೂರಿನ ಎಡಿಎ ರಂಗಮಂದಿರದ ಗೌರವ ಕಾರ್ಯದರ್ಶಿಯಾಗಿಯೂ ಆಗಿ ದುಡಿದಿದ್ದಾರೆ.ಅವರ ಮಗಳು ರೇವತಿ ವಿದೇಶದಲ್ಲಿದ್ದು, ಅವರು ಬಂದ ಬಳಿಕ ವಿಮಲಾ ಅವರ ಅಂತ್ಯಕ್ರಿಯೆ ಇದೇ 27ರಂದು ನಡೆಯಲಿದೆ.









