ಟೆಸ್ಟ್ ಸರಣಿಗೂ ಮೊದಲು ವೆಸ್ಟ್ ಇಂಡೀಸ್ ಬಿಚ್ ನಲ್ಲಿ ಮಿಂದೆದ್ದ ಕೊಹ್ಲಿ ಟೀಮ್

ಗುರುವಾರದಿಂದ ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೂ ಮೊದಲು ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಆಂಟಿಗುವಾ ಜಾಲಿ ಬಿಚ್ ನಲ್ಲಿ ಮಿಂದೆದ್ದಿದೆ.

Last Updated : Aug 21, 2019, 03:24 PM IST
ಟೆಸ್ಟ್ ಸರಣಿಗೂ ಮೊದಲು ವೆಸ್ಟ್ ಇಂಡೀಸ್ ಬಿಚ್ ನಲ್ಲಿ ಮಿಂದೆದ್ದ ಕೊಹ್ಲಿ ಟೀಮ್   title=
Photo: Instagram

ನವದೆಹಲಿ: ಗುರುವಾರದಿಂದ ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೂ ಮೊದಲು ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಆಂಟಿಗುವಾ ಜಾಲಿ ಬಿಚ್ ನಲ್ಲಿ ಮಿಂದೆದ್ದಿದೆ.

ಈಗ ವಿರಾಟ್ ಕೊಹ್ಲಿ ಬಿಚ್ ನಲ್ಲಿ ಮಿಂದೆದ್ದಿರುವ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂ ಪೇಜ್ ನಲ್ಲಿ ಹಂಚಿಕೊಂಡಿದ್ದು, ಎಲ್ಲ ಆಟಗಾರರು ಪೋಟೋದಲ್ಲಿ ಬಾಡಿ ಪ್ರದರ್ಶನದಲ್ಲಿ ನಿರತರಾಗಿದ್ದಾರೆ. ವಿಶೇಷವೆಂದರೆ ಗುರುವಾರದಿಂದ ಆರಂಭವಾಗಲಿರುವ ಟೆಸ್ಟ್ ತಂಡವು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ನ ಭಾಗವಾಗಿದ್ದು, ಈ ಹಿನ್ನಲೆಯಲ್ಲಿ ಈಗ ಈ ಸರಣಿಗೆ ಭಾರಿ ಮಹತ್ವ ಬಂದಿದೆ.

 
 
 
 

 
 
 
 
 
 
 
 
 

Stunning day at the beach with the boys 🇮🇳👌😎

A post shared by Virat Kohli (@virat.kohli) on

ವಿರಾಟ್ ಕೊಹ್ಲಿ ಈಗ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯದ ಸರಣಿಯಲ್ಲಿ ಎರಡು ಪಂದ್ಯಗಳಲ್ಲಿ ಶತಕ ಸಿಡಿಸುವ ಮೂಲಕ ಭರ್ಜರಿ ದಾಖಲೆ ಮಾಡಿದ್ದಾರೆ. ಆ ಮೂಲಕ ಈಗ ಸಚಿನ್ ದಾಖಲೆ ಮುರಿಯಲು ಅವರಿಗೆ ಕೇವಲ ಇನ್ನು ಏಳು ಶತಕಗಳು ಮಾತ್ರ ಅಗತ್ಯವಾಗಿವೆ.

ಈಗಾಗಲೇ ಭಾರತ ವೆಸ್ಟ್ ಇಂಡೀಸ್ ವಿರುದ್ಧ ಟ್ವೆಂಟಿ ಸರಣಿ ಹಾಗೂ ಹಾಗೂ ಏಕದಿನ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಅದೇ ರೀತಿ ಈಗ ಟೆಸ್ಟ್ ಸರಣಿಯನ್ನು ಗೆಲ್ಲುವ ಹುಮ್ಮಸ್ಸಿನಲ್ಲಿದೆ ಎನ್ನಲಾಗಿದೆ.

Trending News