ಎಂ.ಎಸ್.ಧೋನಿಯ ಈ ವಿಶ್ವದಾಖಲೆ ಅಳಿಸಿ ಹಾಕಿದ ವಿರಾಟ್ ಕೊಹ್ಲಿ...!

ಆಧುನಿಕ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಮತ್ತು ದಾಖಲೆ ಎನ್ನುವ ಪದಗಳು ಬಹುತೇಕ ಸಮಾನಾರ್ಥಕಗಳಾಗಿ ಮಾರ್ಪಟ್ಟಿವೆ. ಅವರು ವಿಶ್ವ ಕ್ರಿಕೆಟ್‌ನಲ್ಲಿ ಅಂತಹ ಅದ್ಬುತ ಆಟಗಾರರಾಗಿದ್ದು, ಅವರ ದಾಖಲೆಗಳು ಸೃಷ್ಟಿಯಾಗುತ್ತಲೇ ಇರುತ್ತವೆ. 

Updated: Jan 19, 2020 , 10:14 PM IST
ಎಂ.ಎಸ್.ಧೋನಿಯ ಈ ವಿಶ್ವದಾಖಲೆ ಅಳಿಸಿ ಹಾಕಿದ ವಿರಾಟ್ ಕೊಹ್ಲಿ...!
file photo

ನವದೆಹಲಿ: ಆಧುನಿಕ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಮತ್ತು ದಾಖಲೆ ಎನ್ನುವ ಪದಗಳು ಬಹುತೇಕ ಸಮಾನಾರ್ಥಕಗಳಾಗಿ ಮಾರ್ಪಟ್ಟಿವೆ. ಅವರು ವಿಶ್ವ ಕ್ರಿಕೆಟ್‌ನಲ್ಲಿ ಅಂತಹ ಅದ್ಬುತ ಆಟಗಾರರಾಗಿದ್ದು, ಅವರ ದಾಖಲೆಗಳು ಸೃಷ್ಟಿಯಾಗುತ್ತಲೇ ಇರುತ್ತವೆ. 

ಈಗ ಆಸಿಸ್ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕೊಹ್ಲಿ ಮತ್ತೊಂದು ಮೈಲಿಗಲ್ಲು ಪೂರ್ಣಗೊಳಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ನಾಯಕನೊಬ್ಬ ಧೋನಿಯ 5000 ರನ್‌ಗಳ ವೇಗದ ವಿಶ್ವ ದಾಖಲೆಯನ್ನು ಕೊಹ್ಲಿ ಮೀರಿಸಿದ್ದಾರೆ. ರಾಜ್‌ಕೋಟ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದ ನಂತರ, ಧೋನಿಯ ದಾಖಲೆಯನ್ನು ಅಳಿಸಿಹಾಕಲು ಕೊಹ್ಲಿಗೆ ಕೇವಲ 17 ರನ್ ಗಳ ಅವಶ್ಯಕತೆ ಇತ್ತು, ಆದರೆ ಈಗ ಮೂರನೇ ಏಕದಿನ ಪಂದ್ಯದಲ್ಲಿ ಅದನ್ನು ಮುರಿಯಲು ಅವರು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ.

ಧೋನಿ 127 ಇನ್ನಿಂಗ್ಸ್‌ಗಳಲ್ಲಿ ನಾಯಕನಾಗಿ 5000 ರನ್ ಗಳಿಸುವಲ್ಲಿ ಯಶಸ್ವಿಯಾದರು. ಆದರೆ ಕೊಹ್ಲಿ ಕೇವಲ 82 ಇನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಇದು ಭಾರತೀಯ ಕ್ರಿಕೆಟ್ ತಂಡದ ನಾಯಕನಾದ ನಂತರ ಕೊಹ್ಲಿ ತೋರಿಸಿದ ಗಮನಾರ್ಹ ಸ್ಥಿರತೆಯನ್ನು ತೋರಿಸುತ್ತದೆ.

ಇದೇ ವೇಳೆ ಕೊಹ್ಲಿ ಮಾತ್ರವಲ್ಲ, ರೋಹಿತ್ ಶರ್ಮಾ ಅವರ ವೃತ್ತಿ ಜೀವನದ ಪ್ರಮುಖ ಮೈಲಿಗಲ್ಲನ್ನು ಸಹ ಪೂರ್ಣಗೊಳಿಸಿದ್ದಾರೆ. ಭಾನುವಾರ ಬೆಂಗಳೂರಿನಲ್ಲಿ ನಡೆದ ಸರಣಿ ವೇಳೆ ರೋಹಿತ್ 9000 ಏಕದಿನ ರನ್ ಗಳಿಸಿದ ಮೂರನೇ ಅತಿ ವೇಗದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಏಕದಿನ ಪಂದ್ಯಗಳಲ್ಲಿ 9000 ರನ್ ಗಳಿಸುವಾಗ ರೋಹಿತ್, ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್ ಮತ್ತು ಬ್ರಿಯಾನ್ ಲಾರಾ ಅವರನ್ನು ಹಿಂದಿಕ್ಕಿದಾರಿ.  217 ಇನ್ನಿಂಗ್ಸ್‌ಗಳಲ್ಲಿ ರೋಹಿತ್  9000 ರನ್ ಗಳಿಸಿದ್ದು, ಗಂಗೂಲಿ (228 ಇನ್ನಿಂಗ್ಸ್), ತೆಂಡೂಲ್ಕರ್ (235 ಇನ್ನಿಂಗ್ಸ್) ಮತ್ತು ಲಾರಾ (239) ಇನ್ನಿಂಗ್ಸ್ ಗಳನ್ನು ತೆಗೆದುಕೊಂಡಿದ್ದಾರೆ. 

ಏಕದಿನ ಪಂದ್ಯಗಳಲ್ಲಿ ವೇಗವಾಗಿ 9000 ರನ್ ಗಳಿಸಿದ ಬ್ಯಾಟ್ಸ್‌ಮನ್ ಭಾರತದ ನಾಯಕ ವಿರಾಟ್ ಕೊಹ್ಲಿ 194 ರನ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ ಮತ್ತು ಅವರ ನಂತರ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ (205 ಇನ್ನಿಂಗ್ಸ್) ಇದ್ದಾರೆ.