ಕೊಹ್ಲಿಯ ಕ್ರಿಕೆಟ್ ಪ್ರಾಕ್ಟಿಸ್ ಚಿತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.ಇತ್ತೀಚೆಗೆ, ಅವರು ಗುಜರಾತ್ ಟೈಟಾನ್ಸ್ ಕೋಚ್ ನಯೀಮ್ ಅಲಿಯೊಂದಿಗಿನ ಚಿತ್ರವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.

ಕಿಂಗ್ ವಿರಾಟ್ ಕೊಹ್ಲಿ ಕೊನೆಯ ಬಾರಿಗೆ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಂಡಿದ್ದು, ಐಪಿಎಲ್ 2025ರ ಫೈನಲ್ ಪಂದ್ಯದಲ್ಲಿ. ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತನ್ನ ಇತಿಹಾಸದಲ್ಲಿ ಮೊದಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತು, ಆನಂತರ ಅವರು ಕುಟುಂಬದೊಂದಿಗೆ ಲಂಡನ್ ನಲ್ಲಿ ಸಮಯ ಕಳೆಯುತ್ತಿದ್ದಾರೆ. ಈಗ ಅವರ ಭಾರತ ತಂಡದಲ್ಲಿನ ಭವಿಷ್ಯದ ಬಗ್ಗೆ ಹಲವಾರು ವದಂತಿಗಗಳು ಹರಡಿರುವ ಬೆನ್ನಲ್ಲೇ ಈಗ ಅವರು ನೆಟ್ ಪ್ರಾಕ್ಟೀಸ್ ಮಾಡುತ್ತಿರುವ ಫೋಟೋವೊಂದು ವೈರಲ್ ಆಗಿದೆ
ಕೊಹ್ಲಿಯ ಮರಳುವಿಕೆ ಯಾವಾಗ?
ಪ್ರಸ್ತುತ, ಕೊಹ್ಲಿ ಟೆಸ್ಟ್ ಮತ್ತು ಟಿ20ಐ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದಾರೆ. ಆದ್ದರಿಂದ, ಅವರು ಏಕದಿನ ಕ್ರಿಕೆಟ್ನಲ್ಲಿ ಮಾತ್ರ ಆಡಲಿದ್ದಾರೆ. ಭಾರತ ತಂಡದ ಮುಂದಿನ ಏಕದಿನ ಕ್ರಿಕೆಟ್ ಸರಣಿಯು ಅಕ್ಟೋಬರ್ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ, ಕೊಹ್ಲಿ ಈ ತಂಡದ ಭಾಗವಾಗುವ ಸಾಧ್ಯತೆ ಇದೆ.
ಇತ್ತೀಚೆಗೆ, 36 ವರ್ಷದ ಕೊಹ್ಲಿಯ ಒಂದು ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ, ಇದನ್ನು ಅವರ ಅಭ್ಯಾಸದ ಸೆಷನ್ನಿಂದ ತೆಗೆದದ್ದು ಎಂದು ಹೇಳಲಾಗಿದೆ. ಈ ತಿಂಗಳ ಆರಂಭದಲ್ಲಿ, ಕೊಹ್ಲಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಗುಜರಾತ್ ಟೈಟಾನ್ಸ್ನ ಸಹಾಯಕ ಕೋಚ್ ನಯೀಮ್ ಅಲಿಯೊಂದಿಗೆ ತಾಲೀಮು ಕೇಂದ್ರದಿಂದ ಒಂದು ಚಿತ್ರವನ್ನು ಹಂಚಿಕೊಂಡಿದ್ದರು. "ಹಿಟ್ಗೆ ಸಹಾಯ ಮಾಡಿದ್ದಕ್ಕೆ ಧನ್ಯವಾದ ಸಹೋದರ, ನಿನ್ನನ್ನು ಭೇಟಿಯಾಗುವುದು ಯಾವಾಗಲೂ ಆನಂದದಾಯಕ," ಎಂದು ಅವರು ಚಿತ್ರಕ್ಕೆ ಶೀರ್ಷಿಕೆ ನೀಡಿದ್ದರು.
Virat Kohli clicked with a fan during the Practice Session in London. ?? pic.twitter.com/UenGhzIIgW
— Virat Kohli Fan Club (@Trend_VKohli) August 18, 2025
ಕೊಹ್ಲಿ ಮತ್ತು ರೋಹಿತ್ ಶರ್ಮಾ ನಿವೃತ್ತಿಯ ವದಂತಿ
ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿ ಒಂದು ವರದಿಯು ಕೊಹ್ಲಿ ಮತ್ತು ರೋಹಿತ್ ಶರ್ಮಾ ಆಸ್ಟ್ರೇಲಿಯಾ ಪ್ರವಾಸದ ಬಳಿಕ ನಿವೃತ್ತಿಯಾಗಬಹುದು ಎಂದು ಹೇಳಿದೆ. ಆದರೆ, ಇಬ್ಬರೂ ಬ್ಯಾಟಿಂಗ್ ದಿಗ್ಗಜರು 2027ರಲ್ಲಿ ನಡೆಯುವ ಏಕದಿನ ಕ್ರಿಕೆಟ್ ನ ವಿಶ್ವಕಪ್ನಲ್ಲಿ ಭಾರತವನ್ನು ಪ್ರತಿನಿಧಿಸುವ ಗುರಿಯನ್ನು ಹೊಂದಿದ್ದರೆ, ದೇಶದ ಪ್ರಮುಖ ಏಕದಿನ ಕ್ರಿಕೆಟ್ ನ ದೇಸಿ ಟೂರ್ನಮೆಂಟ್ ಆಗಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಬೇಕಾಗುತ್ತದೆ.
ಭಾರತದ ಮುಂದಿನ ಏಕದಿನ ಟೂರ್ನಿ:
ಆಸ್ಟ್ರೇಲಿಯಾದಲ್ಲಿ ಮೂರು ಪಂದ್ಯಗಳ ಒಡಿಐ ಸರಣಿಯ ನಂತರ, ಭಾರತವು ಡಿಸೆಂಬರ್ನಲ್ಲಿ ದಕ್ಷಿಣ ಆಫ್ರಿಕಾವನ್ನು ತವರಿನಲ್ಲಿ ಮೂರು ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಮುಂದಿನ ವರ್ಷ, ಭಾರತವು ನ್ಯೂಜಿಲೆಂಡ್ (ಜನವರಿ, ಅಕ್ಟೋಬರ್), ಅಫ್ಘಾನಿಸ್ತಾನ (ಜೂನ್), ಇಂಗ್ಲೆಂಡ್ (ಜುಲೈ), ಮತ್ತು ವೆಸ್ಟ್ ಇಂಡೀಸ್ (ಸೆಪ್ಟೆಂಬರ್) ವಿರುದ್ಧ ಏಕದಿನ ಕ್ರಿಕೆಟ್ ಸರಣಿಗಳನ್ನು ಆಡಲಿದೆ.ಕೊಹ್ಲಿಯ ಕ್ರಿಕೆಟ್ ಮರಳುವಿಕೆಯ ಬಗ್ಗೆ ಖಚಿತವಾದ ಉತ್ತರವನ್ನು ಕೇವಲ ಅವರೇ ಮತ್ತು ಭಾರತ ತಂಡದ ಆಡಳಿತವು ನೀಡಬಹುದು. ಆದರೆ, ಆಸ್ಟ್ರೇಲಿಯಾ ಸರಣಿಯೊಂದಿಗೆ ಅವರ ಒಡಿಐ ವೃತ್ತಿಜೀವನದ ಮುಂದಿನ ಅಧ್ಯಾಯ ಆರಂಭವಾಗುವ ಸಾಧ್ಯತೆಯಿದೆ.