)
ವಡೋದರಾ: ಇಲ್ಲಿನ ಬಿಸಿಎ ಕ್ರೀಡಾಂಗಣದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಅತ್ಯಂತ ವೇಗವಾಗಿ 28,000 ಅಂತರರಾಷ್ಟ್ರೀಯ ರನ್ಗಳನ್ನು ತಲುಪಿದ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇದಕ್ಕೂ ಮೊದಲು ಈ ವಿಶ್ವದಾಖಲೆ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿತ್ತು, ಈಗ ವಿರಾಟ್ ಕೊಹ್ಲಿ ಕೇವಲ 624 ಇನ್ನಿಂಗ್ಸ್ಗಳಲ್ಲಿ ಸಾಧನೆ ಮಾಡಿದ್ರೆ, ಸಚಿನ್ ತೆಂಡೂಲ್ಕರ್ ಈ ಸಾಧನೆ ಮಾಡಲು 644 ಇನ್ನಿಂಗ್ಸ್ ತೆಗೆದುಕೊಂಡಿದ್ದಾರೆ. ಇನ್ನೊಂದೆಡೆಗೆ ಶ್ರೀಲಂಕಾದ ಕುಮಾರ್ ಸಂಗಕ್ಕಾರ 666 ಇನ್ನಿಂಗ್ಸ್ಗಳಲ್ಲಿ ಈ ಗಡಿ ದಾಟಿದ್ದರು. ಈಗ ವಿರಾಟ್ ಕೊಹ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ 28,000 ರನ್ಗಳನ್ನು ತಲುಪಿದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
Virat Kohli etched his name in the history books, continuing his red-hot run with the bat in India’s win over New Zealand 🔥#INDvNZ https://t.co/9WQX3vMscT
— ICC (@ICC) January 11, 2026
ನ್ಯೂಜಿಲೆಂಡ್ ಸ್ಪಿನ್ನರ್ ಆದಿತ್ಯ ಅಶೋಕ್ ಅವರ ಎಸೆತವನ್ನು ಅವರು ಬೌಂಡರಿಗೆ ಕಳುಹಿಸುವ ಮೂಲಕ ಕೊಹ್ಲಿ ಈ ಮಹತ್ವದ ದಾಖಲೆ ನಿರ್ಮಿಸಿದರು.ಆದರೆ ಶತಕ ಗಳಿಸಲಿಕ್ಕೆ ಇನ್ನೂ ಕೇವಲ 7 ರನ್ ಗಳ ಅಗತ್ಯವಿದ್ದಾಗ ವಿಕೆಟ್ ಒಪ್ಪಿಸಿಸುವ ಮೂಲಕ ಶತಕ ವಂಚಿತರಾಗಿ ನಿರಾಸೆ ಮೂಡಿಸಿದರು.ಈಗ ವಿರಾಟ್ ಕೊಹ್ಲಿ ಈಗ ಏಕದಿನ ಕ್ರಿಕೆಟ್ನಲ್ಲಿ ಸಚಿನ್ ತೆಂಡೂಲ್ಕರ್ ನಂತರ ಎರಡನೇ ಅತಿ ಹೆಚ್ಚು ಅಂತರರಾಷ್ಟ್ರೀಯ ರನ್ ಗಳಿಸಿದ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಅವರು ಈಗ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ 28,068 ರನ್ಗಳನ್ನು ಗಳಿಸಿದ್ದಾರೆ.