ಟೆಸ್ಟ್ ಕ್ರಿಕೆಟ್: ಸ್ಟೀವ್ ಸ್ಮಿತ್ ಹಿಂದಿಕ್ಕಿ ನಂಬರ್ 1 ಸ್ಥಾನಕ್ಕೇರಿದ ವಿರಾಟ್ ಕೊಹ್ಲಿ

   

Updated: Aug 5, 2018 , 05:46 PM IST
ಟೆಸ್ಟ್ ಕ್ರಿಕೆಟ್: ಸ್ಟೀವ್ ಸ್ಮಿತ್ ಹಿಂದಿಕ್ಕಿ ನಂಬರ್ 1 ಸ್ಥಾನಕ್ಕೇರಿದ ವಿರಾಟ್ ಕೊಹ್ಲಿ

ನವದೆಹಲಿ: ಐಸಿಸಿ ನೂತನ ಟೆಸ್ಟ್ ರ್ಯಾಂಕಿಂಗ್ ನಲ್ಲಿ  ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಆಷ್ಟ್ರೇಲಿಯಾದ ಸ್ಟೀವ್ ಸ್ಮಿತ್ ಅವರನ್ನು ಹಿಂದಿಕ್ಕಿ ನಂಬರ್ 1 ಸ್ಥಾನವನ್ನು ಅಲಂಕರಿಸಿದ್ದಾರೆ.

ಕೊಹ್ಲಿ ಇತ್ತೀಚಿಗೆ ಇಂಗ್ಲೆಂಡ್ ವಿರುದ್ದ ಮೊದಲ ಟೆಸ್ಟ್ ಎರಡು ಇನ್ನಿಂಗ್ಸ್ ನಲ್ಲಿ ನೀಡಿದ ಅಮೋಘ ಪ್ರದರ್ಶನದಿಂದಾಗಿ ಮೊದಲನೇ ಸ್ಥಾನಕ್ಕೆ ಏರಿದ್ಧಾರೆ.ಕೊಹ್ಲಿ  ಮೊದಲೆರಡು ಇನ್ನಿಂಗ್ಸ್ ನಲ್ಲಿ ಕ್ರಮವಾಗಿ 149 ಮತ್ತು 51 ರನ್ ಗಳಿಸಿದ್ದರು ಅದ್ಯಾಗ್ಯೂ ಭಾರತ ತಂಡ 31 ರನ್ ಅಂತರದಲ್ಲಿ ಸೋಲನ್ನು ಅನುಭವಿಸಿತ್ತು.

ಈಗ ಕೊಹ್ಲಿ  ಮೊದಲನೇ ಸ್ಥಾನಕ್ಕೆ ಏರುವ ಮೂಲಕ ಸಚಿನ ತೆಂಡೂಲ್ಕರ್ ನಂತರ ಈ ಸ್ಥಾನವನ್ನು ಏರಿದ ಮೊದಲ ಭಾರತೀಯ ಎನಿಸಿದ್ದಾರೆ.

ಟೆಸ್ಟ್ ರ್ಯಾಂಕಿಂಗ್ ಪಟ್ಟಿ 

1   ವಿರಾಟ್ ಕೊಹ್ಲಿ ಇಂಡಿಯಾ(ಭಾರತ) 934
2   ಡರ್ಬನ್ 2018 ರಲ್ಲಿ ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ) 929 
3   ಜೋ ರೂಟ್(ಇಂಗ್ಲೆಂಡ್) 865
4   ಕೇನ್ ವಿಲಿಯಮ್ಸನ್(ನ್ಯೂಜಿಲೆಂಡ್)  847 
5   ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ) 820
6   ಸಿ.ಪೂಜಾರ(ಭಾರತ) 791
7   ಡಿ.ಕರುಣಾರತ್ನೆ(ಶ್ರೀಲಂಕಾ) 754 
8   ಡಿ.ಚಂಡಿಮಾಲ್(ಶ್ರೀಲಂಕಾ  733 
9   ಡೀನ್ ಎಲ್ಗರ್(ದಕ್ಷಿಣ ಆಫ್ರಿಕಾ ) 724 
10  ಐಡೆನ್ ಮಾರ್ಕ್ರಾಮ್(ದಕ್ಷಿಣ ಆಫ್ರಿಕಾ) 703