ವಿದೇಶಿ ಪ್ರವಾಸದಲ್ಲಿ ಪತ್ನಿಯರು ಸಂಪೂರ್ಣ ಆಟಗಾರರ ಜೊತೆಯೇ ಇರಬೇಕೆಂದ ಕೊಹ್ಲಿ!

ವಿದೇಶಿ ಪ್ರವಾಸದಲ್ಲಿ ಪೂರ್ಣ ಅವಧಿಯವರೆಗೆ ತಂಡದೊಂದಿಗೆ ಪತ್ನಿಯರಿಗೆ ಅನುಮತಿ ನೀಡಿಲು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್ ಮಂಡಳಿಯನ್ನು ಆಗ್ರಹಿಸಿದ್ದಾರೆ.

Updated: Oct 7, 2018 , 03:06 PM IST
ವಿದೇಶಿ ಪ್ರವಾಸದಲ್ಲಿ ಪತ್ನಿಯರು ಸಂಪೂರ್ಣ ಆಟಗಾರರ ಜೊತೆಯೇ ಇರಬೇಕೆಂದ ಕೊಹ್ಲಿ!

ನವದೆಹಲಿ: ವಿದೇಶಿ ಪ್ರವಾಸದಲ್ಲಿ ಪೂರ್ಣ ಅವಧಿಯವರೆಗೆ ತಂಡದೊಂದಿಗೆ ಪತ್ನಿಯರಿಗೆ ಅನುಮತಿ ನೀಡಿಲು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್ ಮಂಡಳಿಯನ್ನು ಆಗ್ರಹಿಸಿದ್ದಾರೆ.

ಪ್ರಸ್ತುತ ನಿಯಮದನ್ವಯ ಆಟಗಾರರು ಮತ್ತು ಸಿಬ್ಬಂದಿ ಪತ್ನಿಯರಿಗೆ ಕೇವಲ ಎರಡು ವಾರಗಳವರೆಗೆ ಮಾತ್ರ ವಿದೇಶದಲ್ಲಿರಲು ಅವಕಾಶ ನೀಡುತ್ತದೆ. ವಿನೋದ್ ರಾಯ್ ಮತ್ತು ಡಯಾನಾ ಎಡುಲ್ಜಿ ನೇತೃತ್ವದ ಸಮಿತಿ (ಸಿಒಎ) ಗೆ ಕೊಹ್ಲಿ ಮೊದಲ ಬಾರಿಗೆ ಈ ವಿಚಾರವಾಗಿ ಹಂಚಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಪ್ರಸ್ತುತ ನಿಯಮವನ್ನು ಬದಲಿಸಲು ಔಪಚಾರಿಕ ಕೋರಿಕೆಯನ್ನು ಭಾರತ ತಂಡದ ಮ್ಯಾನೇಜರ್ ಸುನೀಲ್ ಸುಬ್ರಮಣ್ಯಂ ಅವರನ್ನು ಕೇಳಿಕೊಂಡಿದ್ದರೂ, ಸಹ ಶೀಘ್ರದಲ್ಲೇ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಇದರಿಂದಾಗಿ ಬಿಸಿಸಿಐ ನಿಲುವು ಬದಲಾಗಬೇಕಾದರೆ, ಹೊಸ ಬಿಸಿಸಿಐ ಸಮಿತಿ ರಚನೆಯಾಗುವವರೆಗೆ ಕಾಯುವಂತೆ ಹೇಳಲಾಗಿದೆ.

ಈ ವಿಚಾರವಾಗಿ ಕೆಲವು ವಾರಗಳ ಹಿಂದೆಯೇ ವಿನಂತಿಸಿಕೊಳ್ಳಲಾಗಿತ್ತು ಆದರೆ ಇದು ಬಿಸಿಸಿಐ ನಿಯಮದನ್ವಯ ವ್ಯವಸ್ಥಾಪಕನು ಮೊದಲು ಔಪಚಾರಿಕ ವಿನಂತಿಯನ್ನು ಸಲ್ಲಿಸಬೇಕು ಎಂದು ಹೇಳಲಾಗಿದೆ.