ಶೀಘ್ರದಲ್ಲೇ ಸಚಿನ್ ದಾಖಲೆಗೆ ಕುತ್ತು ತರಲಿದ್ದಾರೆ ವಿರಾಟ್ ಕೊಹ್ಲಿ...!
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಏಕದಿನ ವೃತ್ತಿಜೀವನದಲ್ಲಿ 12,000 ರನ್ ಗಳಿಸಲು ಕೇವಲ 133 ರನ್ಗಳಷ್ಟು ದೂರದಲ್ಲಿದ್ದಾರೆ. ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಈ ದಾಖಲೆಯನ್ನು ಮಾಡಬಹುದು ಎನ್ನಲಾಗಿದೆ.
ಧರ್ಮಶಾಲಾ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಏಕದಿನ ವೃತ್ತಿಜೀವನದಲ್ಲಿ 12,000 ರನ್ ಗಳಿಸಲು ಕೇವಲ 133 ರನ್ಗಳಷ್ಟು ದೂರದಲ್ಲಿದ್ದಾರೆ. ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಈ ದಾಖಲೆಯನ್ನು ಮಾಡಬಹುದು ಎನ್ನಲಾಗಿದೆ.
ವಿರಾಟ್ ಕೊಹ್ಲಿ ಕೊಹ್ಲಿ ತಮ್ಮ ವೃತ್ತಿಜೀವನದಲ್ಲಿ 239 ಇನ್ನಿಂಗ್ಸ್‌ಗಳನ್ನುಆಡಿದ್ದಾರೆ ಅಂದರೆ ಒಂದುವೇಳೆ ಈ ಸರಣಿಯಲ್ಲಿ ಅವರು 12,000 ರನ್ ಗಡಿ ದಾಟಿದರೆ, ಅವರು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ವೇಗವಾಗಿ ಅಳಿಸಿ ಹಾಕಲಿದ್ದಾರೆ.ಇನ್ನೊಂದೆಡೆಗೆ ಸಚಿನ್ ತೆಂಡೂಲ್ಕರ್ ಅವರು 300 ಇನ್ನಿಂಗ್ಸ್ ನಲ್ಲಿ ಈ ಸಾಧನೆ ಮಾಡಿದ್ದಾರೆ. ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಪ್ರಸ್ತುತ 314 ಇನ್ನಿಂಗ್ಸ್‌ಗಳಲ್ಲಿ 12,000 ಏಕದಿನ ರನ್ ಗಳಿಸಿರುವ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಶ್ರೀಲಂಕಾದ ಮಾಜಿ ನಾಯಕ ಕುಮಾರ್ ಸಂಗಕ್ಕಾರ 336 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ದಕ್ಷಿಣ ಆಫ್ರಿಕಾ ಸರಣಿಯಲ್ಲಿಯೇ ವಿರಾಟ್ ಕೊಹ್ಲಿ ಈ ದಾಖಲೆಯನ್ನು ಮುರಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಏಕೆಂದರೆ ಈ ಹಿಂದೆ ನ್ಯೂಜಿಲೆಂಡ್ ವಿರುದ್ಧ ಸರಣಿಯಲ್ಲಿ ಕೊಹ್ಲಿ ಕಳಪೆ ಪ್ರದರ್ಶನವನ್ನು ನೀಡಿದ್ದರಿಂದಾಗಿ ಅವರು ಟೀಕೆಗೆ ಒಳಗಾಗಿದ್ದರು.ಈ ಹಿನ್ನಲೆಯಲ್ಲಿ ಈಗ ಹರಿಣಗಳ ವಿರುದ್ಧ ಅವರು ಉತ್ತಮ ಪ್ರದರ್ಶನ ನೀಡಲೇಬೇಕಾದ ಒತ್ತಡ ಕೊಹ್ಲಿ ಮೇಲೆ ಇದೆ.
ಈಗ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯ ಗುರುವಾರ ಧರ್ಮಶಾಲಾದಲ್ಲಿ ನಡೆಯಲಿದ್ದು, ಎರಡನೇ ಏಕದಿನ ಪಂದ್ಯ ಭಾನುವಾರ ಲಖನೌದಲ್ಲಿ ನಡೆಯಲಿದೆ. ಅಂತಿಮ ಏಕದಿನ ಪಂದ್ಯ ಮಾರ್ಚ್ 18 ರಂದು ಕೋಲ್ಕತ್ತಾದಲ್ಲಿ ನಡೆಯಲಿದೆ.