ಕ್ರಿಕೆಟಿಗರನ್ನು ಮದುವೆಯಾದ ಬಳಿಕ ನಟನೆಯನ್ನೇ ತೊರೆದ ಖ್ಯಾತ ನಟಿಯರಿವರು

Bhavishya Shetty
Mar 10,2025

ನಟಿಯರು

ಬಾಲಿವುಡ್‌ನ ಅನೇಕ ನಟಿಯರು ಮದುವೆಯಾದ ಬಳಿಕ ನಟನೆಯನ್ನು ತೊರೆದಿದ್ದಾರೆ. ಅಂತಹವರಲ್ಲಿ ಕ್ರಿಕೆಟಿಗರ ಪ್ರೀತಿಗೆ ಬಿದ್ದ ನಂತರ ಸಿನಿಮಾರಂಗ ತೊರೆದ ನಟಿಯರ ಬಗ್ಗೆ ಈ ವರದಿಯಲ್ಲಿ ತಿಳಿಯೋಣ,.

ರೀನಾ ರಾಯ್

ಈ ಪಟ್ಟಿಯಲ್ಲಿರುವ ಮೊದಲ ಹೆಸರು ರೀನಾ ರಾಯ್. ರೀನಾ ರಾಯ್ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ 1983 ರಲ್ಲಿ ಪಾಕಿಸ್ತಾನಿ ಕ್ರಿಕೆಟಿಗ ಮೊಹ್ಸಿನ್ ಖಾನ್ ಅವರನ್ನು ವಿವಾಹವಾದರು. ಮದುವೆಯ ನಂತರ, ರೀನಾ ಪಾಕಿಸ್ತಾನಕ್ಕೆ ಸ್ಥಳಾಂತರಗೊಂಡು ಬಾಲಿವುಡ್ ತೊರೆದರು. ಆದರೆ ಕೆಲವು ವರ್ಷಗಳ ನಂತರ, ವಿಚ್ಛೇದನ ಪಡೆದು ಭಾರತಕ್ಕೆ ಮರಳಿದರು. ವಿಚ್ಛೇದನದ ನಂತರ, ರೀನಾ ಚಲನಚಿತ್ರಗಳಲ್ಲಿ ಮತ್ತೆ ನಟಿಸಿದರಾದರೂ ಆ ಸಿನಿಮಾ ಬಿಡುಗಡೆಯಾಗಲಿಲ್ಲ.

ಗೀತಾ ಬಸ್ರಾ

ಗೀತಾ ಬಸ್ರಾ, ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರ ಪತ್ನಿ. ಇವರಿಬ್ಬರು ಮದುವೆಯಾಗುವ ಮೊದಲು 8 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ್ದರು. ಇದಾದ ನಂತರ, ಅಕ್ಟೋಬರ್ 29, 2015 ರಂದು ಜಲಂಧರ್‌ನಲ್ಲಿ ವಿವಾಹವಾದರು. ಗೀತಾ ಮದುವೆಗೆ ಮೊದಲು ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದ್ದರು. ಆದರೆ ಹಿಟ್ ಆಗಿರಲಿಲ್ಲ. ಅದಾದ ಬಳಿಕ ಮದುವೆಯ ನಂತರ, ಅವರು ಬಾಲಿವುಡ್‌ನಿಂದ ದೂರವಿದ್ದು, ತಮ್ಮ ಕುಟುಂಬ ಜೀವನವನ್ನು ಆನಂದಿಸುತ್ತಿದ್ದಾರೆ.

ಹೇಜಲ್ ಕೀಚ್

ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರನ್ನು ಮದುವೆಯಾದ ನಂತರ, ಹೇಜಲ್ ಕೀಚ್ ಬಾಲಿವುಡ್‌ಗೆ ವಿದಾಯ ಹೇಳಿದರು. ನವೆಂಬರ್ 30, 2016 ರಲ್ಲಿ ವಿವಾಹವಾಗಿದ್ದಾರೆ ಈ ಜೋಡಿ.

ಸಂಗೀತಾ ಬಿಜಲಾನಿ

ಸಲ್ಮಾನ್ ಖಾನ್ ಮಾಜಿ ಗೆಳತಿ ಸಂಗೀತಾ ಬಿಜಲಾನಿ ಅನೇಕ ಬಾಲಿವುಡ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಜೊತೆ ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದ ಅವರು, ನಂತರ ವಿವಾಹವಾದರು. ಮದುವೆಯಾದ ನಂತರ ಬಾಲಿವುಡ್‌ನಿಂದ ದೂರವಾದರು. ಆದರೆ ಈ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ಇಬ್ಬರೂ ಶೀಘ್ರದಲ್ಲೇ ವಿಚ್ಛೇದನ ಪಡೆದರು.

ಸಾಗರಿಕಾ ಘಾಟ್ಗೆ

ಕ್ರಿಕೆಟಿಗ ಜಹೀರ್ ಖಾನ್ ಅವರನ್ನು ಮದುವೆಯಾದ ನಂತರ, ಸಾಗರಿಕಾ ಘಾಟ್ಗೆ ಬಾಲಿವುಡ್‌ನಿಂದ ದೂರವಿದ್ದಾರೆ. ಸಾಗರಿಕಾ 2017 ರಲ್ಲಿ ಜಹೀರ್ ಅವರನ್ನು ವಿವಾಹವಾದರು. ಇದಾದ ನಂತರ, ಅವರು ಎರಡು ಟಿವಿ ಕಾರ್ಯಕ್ರಮಗಳು ಮತ್ತು ಒಂದು ವೆಬ್ ಸರಣಿಯಲ್ಲಿ ಕೆಲಸ ಮಾಡಿದ್ದಾರೆ. ಕೊನೆಯ ಬಾರಿಗೆ 2020 ರಲ್ಲಿ ಫುಟ್‌ಫಿಯರ್ ಎಂಬ ದೂರದರ್ಶನ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು.

VIEW ALL

Read Next Story