ಭುವನೇಶ್ವರ್ ಕುಮಾರ್ ಎಂಬುದು ಬಹಳ ಉದ್ದವಾದ ಹೆಸರು. ಆದ್ದರಿಂದ, ಸುಲಭವಾದ ಉಚ್ಚಾರಣೆಗಾಗಿ ತಂಡದಲ್ಲಿ ಅವರನ್ನು 'ಭುವಿ' ಎಂದು ಕರೆಯಲಾಗುತ್ತದೆ.
ಇನ್ನು ಟೀಂ ಇಂಡಿಯಾ ಸೂಪರ್ ಬ್ಯಾಟ್ಸ್’ಮನ್ ವಿರಾಟ್ ಕೊಹ್ಲಿ ಅಡ್ಡ ಹೆಸರು ಚೀಕು. ಕ್ರಿಕೆಟ್ ತಂಡದಲ್ಲಿ ಮಾತ್ರವಲ್ಲದೆ ಮನೆಯಲ್ಲೂ ಇದೇ ಹೆಸರಿನಿಂದ ಕರೆಯುತ್ತಾರೆ.
ಸುರೇಶ್ ರೈನಾರನ್ನು ಜನ ಪ್ರೀತಿಯಿಂದ ‘ಸೋನು’ ಎಂದೇ ಕರೆಯುತ್ತಾರೆ. ಮನೆಯ ಬಳಿ ಆಟವಾಡುತ್ತಿದ್ದಾಗ ಯಾರೋ 'ಸೋನು' ಎಂದು ಕರೆದಿದ್ದರು. ಆ ಬಳಿಕ ಈ ಹೆಸರನ್ನು ಕರೆಯುತ್ತಾರೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು.
ಮೊದಲು ಎಂಎಸ್ ಧೋನಿಯ ಅಡ್ಡ ಹೆಸರು 'ಮಹೆ' ಅಂತಾ ಇತ್ತು. ಅಂದರೆ ಮಹೇಂದ್ರನ ಕಿರು ರೂಪ. ಆದರೆ ಕ್ರಮೇಣ ಖ್ಯಾತಿ ಗಳಿಸುತ್ತಿದ್ದಂತೆ ಜನ ಅವರನ್ನು ‘ಮಹಿ; ಎಂದು ಕರೆಯತೊಡಗಿದರು.
'ಅಜ್ಜು' ಮತ್ತು 'ಜಿಂಕ್ಸ್' ಇದು ಅಜಿಂಕ್ಯಾ ರಹಾನೆಯವರ ಅಡ್ಡ ಹೆಸರು.
'ರೋ', 'ಹಿಟ್ಮ್ಯಾನ್' ಮತ್ತು 'ಶೇನ್' ರೋಹಿತ್ ಶರ್ಮಾ ಅವರ ಅಡ್ಡಹೆಸರು. ಅವರಿಗೆ ಈ ಹೆಸರು ಕೊಟ್ಟವರು ಬೇರೆ ಯಾರೂ ಅಲ್ಲ ಯುವರಾಜ್ ಸಿಂಗ್. ರೋಹಿತ್ ತಂಡದ ಅತ್ಯಂತ ಬುದ್ಧಿವಂತ ಎಂದು ಯುವರಾಜ್ ಸಿಂಗ್ ಹೀಗೆ ಕರೆಯುತ್ತಾರಂತೆ. ಇನ್ನು ರೋಹಿತ್ ಪತ್ನಿ ‘ರೋ’ ಎಂದು ಕರೆಯುತ್ತಾರೆ.
ಹಾರ್ದಿಕ್ ಪಾಂಡ್ಯ ಅವರ ಅಡ್ಡ ಹೆಸರು 'ಹ್ಯಾರಿ'. ಇನ್ನೂ ಕೆಲವರು ಅವರನ್ನು 'ಕುಂಗ್-ಫು-ಪಾಂಡೆ' ಎಂದೂ ಕರೆಯುತ್ತಾರೆ.