ಭಾರತೀಯ ಕ್ರಿಕೆಟ್ ತಂಡದ ಈ ವಿಕೆಟ್-ಕೀಪರ್-ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ಈ ಹಿಂದೆ ನಿಕಿತಾ ವಂಜಾರಾ ಅವರನ್ನು ಮದುವೆಯಾಗಿದ್ದರು. ಆದರೆ ಇವರ ದಾಂಪತ್ಯಕ್ಕೆ ಮುರಳಿ ವಿಜಯ್ ಅಡ್ಡಿಯಾದ ಕಾರಣ ವಿಚ್ಛೇದನ ನೀಡಿ ಭಾರತೀಯ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಲ್ಲಿಕಲ್ ಜತೆ ಕಾರ್ತಿಕ್ ಮದುವೆಯಾದರು.
ಭಾರತದ ಅತ್ಯಂತ ವಿವಾದಾತ್ಮಕ ಆಟಗಾರರಲ್ಲಿ ಒಬ್ಬರಾದ ಮುಹಮ್ಮದ್ ಅಜರುದ್ದೀನ್ ಮೊದಲಿಗೆ ಮದುವೆಯಾಗಿದ್ದು, ನೌರೀನ್ ಎಂಬವರನ್ನು. ಆದರೆ ಈ ಮಧ್ತೆ ಅವರಿಗೆ ಸಂಗೀತಾ ಬಿಜಲಾನಿ ಜೊತೆ ಪ್ರೇಮ ಉಂಟಾಗಿ, ನೌರಿನ್ ಗೆ ಡಿವೋರ್ಸ್ ನೀಡಿ ಸಂಗೀತಾ ಅವರನ್ನು ವಿವಾಹವಾದರು. ಆದರೆ ಈ ಮದುವೆ ಕೂಡ 2010ರಲ್ಲಿ ಕೊನೆಯಾಗಿದೆ.
ಮಾಜಿ ಪಾಕಿಸ್ತಾನಿ ಕ್ರಿಕೆಟಿಗ ವಾಸಿಂ ಅಕ್ರಮ್, ಮನಶ್ಶಾಸ್ತ್ರಜ್ಞ ಹುಮಾ ಮುಫ್ತಿ ಅವರನ್ನು ಮದುವೆಯಾಗಿದ್ದರು. ಆದರೆ ದುರದೃಷ್ಟವಶಾತ್ ಬಹು ಅಂಗಾಂಗ ವೈಫಲ್ಯದಿಂದಾಗಿ ನಿಧನರಾದರು. ಈ ಬಳಿಕ ಮಾಜಿ ಸಾರ್ವಜನಿಕ ಸಂಪರ್ಕ ಸಲಹೆಗಾರರಾದ ಶಾನೀರಾ ಥಾಂಪ್ಸನ್ ಅವರನ್ನು ಮದುವೆಯಾದರು.
ಸಾನಿಯಾ ಮಿರ್ಜಾ ಜೊತೆ ಮದುವೆಯಾಗುವ ಮೊದಲು ವಾಸಿಂ ಅಕ್ರಮ್, ಆಯೇಶಾ ಸಿದ್ದಿಕಿ ಎಂಬವರನ್ನು ಮದುವೆಯಾಗಿದ್ದರು. 2010 ರಲ್ಲಿ ಸಾನಿಯಾ ಮಿರ್ಜಾ ಅವರನ್ನು ಮದುವೆಯಾದ ನಂತರ ಆಯೇಷಾ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಭಾರತೀಯ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅವರು ಆರಂಭದಲ್ಲಿ ತಮ್ಮ ಬಾಲ್ಯದ ಸ್ನೇಹಿತೆ ನೋಯೆಲ್ಲಾ ಲೂಯಿಸ್ ಅವರನ್ನು ವಿವಾಹವಾದರು. ಆದರೆ, ಬಳಿಕ ಮಾಜಿ ಮಾಡೆಲ್ ಆಂಡ್ರಿಯಾ ಹೆವಿಟ್ ಅವರನ್ನು ಲವ್ ಮಾಡಿದ್ದು, ಹೀಗಾಗಿ ಲೂಯಿಸ್ ಅವರ ದಾಂಪತ್ಯ ಕೊನೆಯಾಯಿತು.