ಪ್ರೇಮಿಗಳ ದಿನದಂದು ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಿದ್ದ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ರಾಜಸ್ಥಾನದ ಉದಯಪುರದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದಾರೆ
ಜೋಡಿ ತಮ್ಮ ವಿವಾಹದ ಫೋಟೋಗಳನ್ನು Instagram ನಲ್ಲಿ ಪೋಸ್ಟ್ ಮಾಡಿದ್ದಾರೆ. ಫೋಟೋಗಳನ್ನು ಹಂಚಿಕೊಂಡ ಅವರು "ಇಂದು ಮತ್ತು ಎಂದೆಂದಿಗೂ" ಎಂದು ಬರೆದುಕೊಂಡಿದ್ದಾರೆ.
ಹಾರ್ದಿಕ್ ಕಸೂತಿಯ ಶೆರ್ವಾನಿ ಮತ್ತು ನಯವಾದ ದುಪಟ್ಟಾವನ್ನು ಧರಿಸಿದ್ದು, ನತಾಶಾ ಕೆಂಪು ದುಪಟ್ಟಾದೊಂದಿಗೆ ಭಾರವಾದ ಕಸೂತಿಯ ಗೋಲ್ಡನ್ ಲೆಹೆಂಗಾವನ್ನು ಧರಿಸಿದ್ದಾರೆ.
ಹಾರ್ದಿಕ್ ನತಾಶಾರ ಹಣೆಯ ಮೇಲೆ ಸಿಂಧೂರ ಇಡುವುದನ್ನು ಕಾಣಬಹುದು. ಜೋಡಿಯ ಮಧುರ ಕ್ಷಣಗಳ ಫೋಟೋವನ್ನು ಇಲ್ಲಿ ನೋಡಿ.
"ಮೂರು ವರ್ಷಗಳ ಹಿಂದೆ ನಾವು ತೆಗೆದುಕೊಂಡ ಪ್ರತಿಜ್ಞೆಗಳಿಗೆ ಮರುಹುಟ್ಟು ನೀಡುತ್ತಿದ್ದೇವೆ. ಈ ಮೂಲಕ ನಾವು ಈ ಪ್ರೀತಿಯ ದ್ವೀಪದಲ್ಲಿ ಪ್ರೇಮಿಗಳ ದಿನವನ್ನು ಆಚರಿಸಿದ್ದೇವೆ” ಎಂದು ಬರೆದುಕೊಂಡಿದ್ದಾರೆ.
ಕ್ರಿಶ್ಚಿಯನ್ ಸಂಪ್ರದಾಯದ ಮದುವೆಯಲ್ಲಿ ನತಾಶಾ ಬಿಳಿಯ ನಿಲುವಂಗಿಯಲ್ಲಿ ವಿಶಿಷ್ಟವಾದ ಕ್ರಿಶ್ಚಿಯನ್ ಡ್ರೆಸ್ ಧರಿಸಿದ್ದರು.
ಹಾರ್ದಿಕ್ ಮತ್ತು ನತಾಸಾ 2020ರ ಜನವರಿ 1 ರಂದು ವಿಹಾರ ನೌಕೆಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಕೋವಿಡ್ ಲಾಕ್ಡೌನ್ ಸಮಯದಲ್ಲಿ ಮನೆಯಲ್ಲಿ ಸಮಾರಂಭವನ್ನು ಮಾಡಿ ಸಿಂಪಲ್ ಆಗಿ ಮದುವೆಯಾಗಿದ್ದರು.