ಇವಿಷ್ಟೇ ಯಾಕೆ, ಜಾಹೀರಾತು ಶೂಟಿಂಗ್ ವೇಳೆ ಟೀಂ ಇಂಡಿಯಾದ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಇವರ ಅಂದ ಕಂಡು ಮಾರುಹೋಗಿದ್ದರಂತೆ. ಬಳಿಕ ಇಬ್ಬರೂ ಕೆಲ ವರ್ಷಗಳ ಕಾಲ ಡೇಟಿಂಗ್ ನಡೆಸಿ ಸಪ್ತಪದಿ ತುಳಿದರು.
ಅಭಿಮಾನಿಗಳ ಪ್ರೀತಿಯ ವಿರುಷ್ಕಾ ದಂಪತಿಗೆ ಮುದ್ದಾದ ಮಗಳಿದ್ದಾಳೆ. ಆ ಕಂದಮ್ಮನ ಹೆಸರು ವಮಿಕಾ.
ಇನ್ನು ಬಾಲಿವುಡ್ ನಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿರುವ ಅನುಷ್ಕಾ ಚಲನಚಿತ್ರ ನಿರ್ಮಾಪಕಿ ಮತ್ತು ರೂಪದರ್ಶಿಯೂ ಹೌದು. 1 ಮೇ 1988 ರಂದು ಅಯೋಧ್ಯೆಯಲ್ಲಿ ಜನಿಸಿದ ಅವರು, ಬೆಳೆದದ್ದು ಬೆಂಗಳೂರಿನಲ್ಲಿ.
ಬಳಿಕ ಶರ್ಮಾ 2007 ರಲ್ಲಿ ಮೊದಲ ಬಾರಿಗೆ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟರು. ನಂತರ ಮಾಡೆಲ್ ಆಗಿ ಪೂರ್ಣ ಸಮಯದ ವೃತ್ತಿಜೀವನವನ್ನು ಮುಂದುವರಿಸಲು ಮುಂಬೈಗೆ ತೆರಳಿದರು.
ಅನುಷ್ಕಾ ಮೊದಲ ಬಾರಿಗೆ ಬಣ್ಣ ಹಚ್ಚಿದ ಬಾಲಿವುಡ್ ಸಿನಿಮಾ ಬ್ಲಾಕ್‌ಬಸ್ಟರ್ ರೊಮ್ಯಾನ್ಸ್ ರಬ್ ನೆ ಬನಾ ದಿ ಜೋಡಿ (2008) ಬಾಕ್ಸಾಫಿಸ್ ಕೊಳ್ಳೆಹೊಡೆದಿತ್ತು.
ಬ್ಯಾಂಡ್ ಬಜಾ ಬಾರಾತ್ (2010), ಜಬ್ ತಕ್ ಹೈ ಜಾನ್ (2012), PK (2014),ಸುಲ್ತಾನ್ (2016) ಹೀಗೆ ಹಲವಾರು ಸಿನಿಮಾಗಳಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಅನುಷ್ಕಾ ಶರ್ಮಾ ಮತ್ತು ಸಹೋದರ ಕರ್ಣೇಶ್ ಶರ್ಮಾ ಜಂಟಿಯಾಗಿ ಕ್ಲೀನ್ ಸ್ಲೇಟ್ ಫಿಲ್ಮ್ಸ್ ನಿರ್ಮಾಣ ಸಂಸ್ಥೆಯನ್ನು ಹೊಂದಿದ್ದಾರೆ.