ಅನುಷ್ಕಾ ಶರ್ಮಾಗಿಂತ ವಯಸ್ಸಲ್ಲಿ ಕಿರಿಯವರು ವಿರಾಟ್‌ ಕೊಹ್ಲಿ! ಇವರಿಬ್ಬರ ನಡುವಿನ ವಯಸ್ಸಿನ ಅಂತರವೆಷ್ಟು ಗೊತ್ತಾ?

Bhavishya Shetty
May 14,2025

ಕ್ರಿಕೆಟಿಗರು

ಟೀಂ ಇಂಡಿಯಾದಲ್ಲಿ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಸೇರಿದಂತೆ ಅನೇಕ ಭಾರತೀಯ ಕ್ರಿಕೆಟಿಗರು ತಮ್ಮ ಪತ್ನಿಯರಿಗಿಂತ ಕಿರಿಯರಾಗಿದ್ದಾರೆ. ಅವರೆಲ್ಲ ಯಾರು ಎಂಬುದನ್ನು ಮುಂದೆ ತಿಳಿಯೋಣ.

ಸಚಿನ್ ತೆಂಡೂಲ್ಕರ್-ಅಂಜಲಿ

ಸಚಿನ್ ತೆಂಡೂಲ್ಕರ್ ತಮ್ಮ ಪತ್ನಿ ಅಂಜಲಿ ತೆಂಡೂಲ್ಕರ್‌ಗಿಂತ 6 ವರ್ಷ ಚಿಕ್ಕವರು. ಇಬ್ಬರೂ ಮೇ 1995 ರಲ್ಲಿ ವಿವಾಹವಾದರು.

ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ

ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾಗಿಂತ 6 ತಿಂಗಳು ಚಿಕ್ಕವರು. ಹಲವು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ ಇಬ್ಬರೂ ಡಿಸೆಂಬರ್ 2017 ರಲ್ಲಿ ವಿವಾಹವಾದರು.

ಜಸ್ಪ್ರೀತ್ ಬುಮ್ರಾ-ಸಂಜನಾ ಗಣೇಶನ್

ಜಸ್ಪ್ರೀತ್ ಬುಮ್ರಾ ಅವರ ಪತ್ನಿ ಸಂಜನಾ ಗಣೇಶನ್ ಗಿಂತ 2 ವರ್ಷ 7 ತಿಂಗಳು ಚಿಕ್ಕವರು. ಸಂಜನಾ ವೃತ್ತಿಯಲ್ಲಿ ಕ್ರೀಡಾ ನಿರೂಪಕಿಯಾಗಿದ್ದು, ಇಬ್ಬರೂ ಮಾರ್ಚ್ 2021 ರಲ್ಲಿ ವಿವಾಹವಾದರು.

ರಾಬಿನ್ ಉತ್ತಪ್-ಶೀತಲ್ ಗೌತಮ್

ರಾಬಿನ್ ಉತ್ತಪ್ಪ ತಮ್ಮ ಪತ್ನಿ ಶೀತಲ್ ಗೌತಮ್ ಗಿಂತ ನಾಲ್ಕು ವರ್ಷ ಚಿಕ್ಕವರು. ಇಬ್ಬರೂ ಮಾರ್ಚ್ 2016 ರಲ್ಲಿ ವಿವಾಹವಾದರು.

ಅನಿಲ್ ಕುಂಬ್ಳೆ-ಚೇತನಾ ರಾಮತೀರ್ಥ

ಅನಿಲ್ ಕುಂಬ್ಳೆ ಅವರ ಪತ್ನಿ ಚೇತನಾ ರಾಮತೀರ್ಥ ಅವರಿಗಿಂತ ಏಳು ವರ್ಷ ಚಿಕ್ಕವರು. ಅವರು ಜುಲೈ 1999 ರಲ್ಲಿ ವಿವಾಹವಾದರು.

VIEW ALL

Read Next Story