ಐಪಿಎಲ್ ಸೀಸನ್’ಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಬ್ಯಾಟ್ ಬೀಸುವ ರಜತ್ ಪಾಟಿದಾರ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಬಲಗೈ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ ಮತ್ತು ಆಫ್ ಸ್ಪಿನ್ನರ್ ಆಗಿ ಪರಿಣತಿ ಹೊಂದಿದ್ದಾರೆ ಪಾಟಿದಾರ್.
ಮಧ್ಯಪ್ರದೇಶದ ಇಂದೋರ್’ನಲ್ಲಿ 1 ಜೂನ್ 1993 ರಂದು ಜನಿಸಿದ ಪಾಟಿದಾರ್ ಅವರು ವ್ಯಾಪಾರ ಕುಟುಂಬಕ್ಕೆ ಸೇರಿದವರು.
8 ನೇ ವಯಸ್ಸಿನಲ್ಲಿ ಕ್ರಿಕೆಟ್ ಕ್ಲಬ್ ಸೇರುವ ಮೂಲಕ ಅವರ ಕ್ರಿಕೆಟ್ ಪ್ರಯಾಣ ಪ್ರಾರಂಭವಾಯಿತು. ಅದಾದ ಬಳಿಕ ಅವರ ಅಜ್ಜನ ಮಾರ್ಗದರ್ಶನದಲ್ಲಿ ಕ್ರಿಕೆಟ್ ಅಕಾಡೆಮಿಗೆ ಪ್ರವೇಶಿಸಿದರು. ಆರಂಭದಲ್ಲಿ ಬೌಲರ್ ಆಗಿದ್ದ ಪಾಟಿದಾರ್, ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಅಂಡರ್-15 ಮಟ್ಟವನ್ನು ತಲುಪಿದ ಬಳಿಕ ಬ್ಯಾಟಿಂಗ್ನತ್ತ ಗಮನ ಹರಿಸಿದರು.
ಪಾಟಿದಾರ್ ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಇಂದೋರ್’ನ ನ್ಯೂ ದಿಗಂಬರ್ ಪಬ್ಲಿಕ್ ಸ್ಕೂಲ್ನಲ್ಲಿ ಮಾಡಿದರು. ಇದರ ನಂತರ ಇಂದೋರ್ ವಿಶ್ವವಿದ್ಯಾಲಯದಿಂದ ಪದವಿ ಪಡೆದರು.
2022 ರ ಐಪಿಎಲ್ ಆಟಗಾರರ ಹರಾಜಿನಲ್ಲಿ ರಜತ್ ಪಾಟಿದಾರ್ ಮಾರಾಟವಾಗದೆ ಉಳಿದರು. ನಂತರ, ಗಾಯಾಳು ಲವ್ನಿತ್ ಸಿಸೋಡಿಯಾ ಬದಲಿಗೆ ಪಾಟಿದಾರ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಧ್ಯ ಋತುವಿನಲ್ಲಿ 20 ಲಕ್ಷ ರೂ.ಗೆ ಸಹಿ ಹಾಕಿತು.
25 ಮೇ 2022 ರಂದು, ಇಂಡಿಯನ್ ಪ್ರೀಮಿಯರ್ ಲೀಗ್’ನಲ್ಲಿ ಎಲಿಮಿನೇಟರ್ ಪಂದ್ಯದಲ್ಲಿ, ಪಾಟಿದಾರ್ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 112* (54) ಪಂದ್ಯ-ವಿಜೇತ ಇನ್ನಿಂಗ್ಸ್’ಗಳನ್ನು ಆಡಿದರು.
ಅಂದಹಾಗೆ ರಜತ್ ಪಾಟಿದಾರ್ ಅವರ ಗರ್ಲ್ ಫ್ರೆಂಡ್ ಫೋಟೋ ರಿವೀಲ್ ಆಗಿದೆ. ರಜತ್ ಪ್ರಸ್ತುತ ಸಂಬಂಧದಲ್ಲಿದ್ದು, ಆಕೆಯ ಚಿತ್ರವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.
ಆದರೆ ಆಕೆಯ ಹೆಸರು, ಏನು ಮಾಡುತ್ತಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಹೀಗಾಗಿ ಈ ಕ್ರಿಕೆಟಿಗನ ಬೆಟರ್ ಹಾಫ್ ಆಗಲಿರುವ ಆ ಅದೃಷ್ಟದ ಹುಡುಗಿ ಯಾರೆಂದು ತಿಳಿಯಲು ಮದುವೆಯವರೆಗೂ ಕಾಯಬೇಕಾಗಿದೆ.