ಐಪಿಎಲ್ ಮೆಗಾ ಹರಾಜು ಎರಡನೇ ದಿನಕ್ಕೆ ಕಾಲಿಟ್ಟಿದೆ. ಆದರೆ ಇದೀಗ ಈ ವರ್ಷದ ಐಪಿಎಲ್ ಹರಾಜಿನಲ್ಲಿ ರಿಷಬ್ ಪಂತ್ ದಾಖಲೆ ಬರೆದಿದ್ದಾರೆ.
ಟೀಂ ಇಂಡಿಯಾದ ಸ್ಟಾರ್ ಆಟಗಾರ ರಿಷಬ್ ಪಂತ್ ಅವರು ದುಬಾರಿ ಬೆಲೆ ಸೇಲ್ ಆಗುವ ಮೂಲಕ, ಹೊಸ ಇತಿಹಾಸವನ್ನು ಸೃಷ್ಟಿಸಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ತೊರೆದಿದ್ದ ರಿಷಬ್ ಪಂತ್ ಅವರು ಐಪಿಎಲ್ ಮೆಗಾ ಹರಾಜಿಗೆ ಕಾಲಿಟ್ಟಿದ್ದರು.
ಆದರೆ, ಲಕ್‌ನೌ ಜೈಂಟ್ಸ್ ತಂಡ ಇದೀಗ ರಿಷಬ್ ಪಂತ್ ಅವರನ್ನು 27 ಕೋಟಿ ರೂ. ಗೆ ಖರೀದಿಸಿದೆ.
ಆರ್‌ಸಿಬಿ ತಂಡ ರಿಷಬ್ ಪಂತ್ ಅವರನ್ನು ಎರಡು ಕೋಟಿಗೆ ಬಿಡ್ ಮಾಡಿತ್ತು, ಆದರೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಹೊಂದಿದ್ದ ರಿಷಬ್ ಪಂತ್ ಇದೀಗ 27 ಕೋಟಿ ಸೇಲ್ ಆಗಿದ್ದಾರೆ.
ಈ ಮೂಲಕ 100 ಕೋಟಿ ಆಸ್ತಿಯ ಒಡೆಯನಾಗಿದ್ದ ಈ ಸ್ಟಾರ್ ಆಟಗಾರನ ನಿವ್ವಳ ಮೌಲ್ಯ ಇದೀ 127 ಕೋಟಿಗೆ ಏರಿಕೆಯಾಗಿದೆ.
ಕಳೆದ ಐಪಿಎಲ್ ಸೀಸನ್‌ನಲ್ಲಿ ಕೆಕೆಆರ್ ತಂಡ ಮಿಚೆಲ್ ಮಾರ್ಶ್ ಅವರನ್ನು 24 ಕೋಟಿಗೆ ಕರೀದಿಸಿ ದಾಖಲೆ ಬರೆದಿತ್ತು.
ಈ ಭಾರಿ ಲಕ್ನೌ ತಂಡ ಭಾರತ ಆಟಾಗರನಿಗೆ ಪ್ರಾಮುಖ್ಯತೆ ನೀಡಿ 27 ಕೋಟಿಗೆ ಖರೀದಿಸಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.