ಪ್ರತಿ 2 ವರ್ಷಗಳಿಗೊಮ್ಮೆ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ನಡೆಸಲಾಗುತ್ತದೆ.
2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಚೊಚ್ಚಲ ಅಂದರೆ ಮೊದಲ ಟಿ20 ವಿಶ್ವಕಪ್ ಆವೃತ್ತಿ ನಡೆದಿತ್ತು.
ಕೊನೆಯ ಆವೃತ್ತಿಯು ಅಂದರೆ 2022ರಲ್ಲಿ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಡೆದಿತ್ತು.
ಈ ಚುಟುಕು ವಿಶ್ವಕಪ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ & ಇಂಗ್ಲೆಂಡ್ 2 ಬಾರಿ ಪ್ರಶಸ್ತಿ ಗೆದ್ದ ತಂಡಗಳಾಗಿವೆ.
2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಪಾಕಿಸ್ತಾನ ವಿರುದ್ಧ ರೋಚಕ ಜಯ ಸಾಧಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು.
ಇಂಗ್ಲೆಂಡ್ 2010 ಮತ್ತು 2022ರಲ್ಲಿ 2 ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಅದೇ ರೀತಿ ವೆಸ್ಟ್ ಇಂಡೀಸ್ 2012 ಮತ್ತು 2016ರಲ್ಲಿ ಟಿ20 ವಿಶ್ವಕಪ್ ಚಾಂಪಿಯನ್ ಆಗಿತ್ತು.
2009ರಲ್ಲಿ ಪಾಕಿಸ್ತಾನ, 2014ರಲ್ಲಿ ಶ್ರೀಲಂಕಾ ಮತ್ತು 2021ರಲ್ಲಿ ಆಸ್ಟ್ರೇಲಿಯಾ ಟಿ20 ಚಾಂಪಿಯನ್ ಆಗಿದ್ದವು.