ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್’ಮನ್ ವಿರಾಟ್ ಕೊಹ್ಲಿ ಅವರ ರೆಸ್ಟೋರೆಂಟ್ ಹೆಸರು One8 ಕಮ್ಯೂನ್ ರೆಸ್ಟೋರೆಂಟ್ ಸಿರೀಸ್. 2022ರಲ್ಲಿ ಮುಂಬೈ’ನಲ್ಲಿ ತಮ್ಮ ರೆಸ್ಟೋರೆಂಟ್ ಪ್ರಾರಂಭಿಸಿದರು. ಅದಾದ ಬಳಿಕ ಪುಣೆ, ದೆಹಲಿ ಮತ್ತು ಕೋಲ್ಕತ್ತಾದಲ್ಲಿ ಇದರ ಶಾಖೆಗಳಿವೆ.
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 2022ರಲ್ಲಿ ಸಸ್ಯಾಹಾರಿ ರೆಸ್ಟೊರೆಂಟ್ ಅನ್ನು ತೆರೆದಿದ್ದರು. ಧೋನಿ ಅವರ ರೆಸ್ಟೋರೆಂಟ್ ಬೆಂಗಳೂರು ವಿಮಾನ ನಿಲ್ದಾಣದಲ್ಲಿದೆ.
ಪ್ರಸ್ತುತ ಟೀಂ ಇಂಡಿಯಾದಿಂದ ಹೊರಗುಳಿದಿರುವ ಆರಂಭಿಕ ಆಟಗಾರ ಶಿಖರ್ ಧವನ್ ದುಬೈನಲ್ಲಿ ದಿ ಫ್ಲೈಯಿಂಗ್ ಕ್ಯಾಚ್ ಎಂಬ ಹೆಸರಿನ ರೆಸ್ಟೋರೆಂಟ್ ಹೊಂದಿದ್ದಾರೆ. 2023 ರಲ್ಲಿ ಈ ರೆಸ್ಟೋರೆಂಟ್ ಅನ್ನು ಪ್ರಾರಂಭಿಸಲಾಯಿತು.
ಇನ್ನು ಆಲ್ರೌಂಡರ್ ರವೀಂದ್ರ ಜಡೇಜಾ ಅವರ ರೆಸ್ಟೋರೆಂಟ್ ಹೆಸರು 'ಜಡ್ಡುಸ್ ಫುಡ್ ಫೀಲ್ಡ್'. ಇದು ರಾಜ್ಕೋಟ್’ನಲ್ಲಿದೆ. ಈ ರೆಸ್ಟೋರೆಂಟ್’ನಲ್ಲಿ ಗ್ರಾಹಕರಿಗೆ ಉಚಿತ ಸಿಹಿತಿಂಡಿಗಳನ್ನು ನೀಡಲಾಗುತ್ತದೆ.
ಲಾರ್ಡ್ ಆಫ್ ಕ್ರಿಕೆಟ್ ಸಚಿನ್ ತೆಂಡೂಲ್ಕರ್ ಅವರ ರೆಸ್ಟೋರೆಂಟ್ ಮುಂಬೈನ ಕೊಲಾಬಾದಲ್ಲಿದೆ. ಅದರ ಹೆಸರು ಸಚಿನ್ ಆಂಡ್ ತೆಂಡೂಲ್ಕರ್. ವಿಶ್ವ ದರ್ಜೆಯ ಆಹಾರ ಮತ್ತು ತಿನಿಸುಗಳು ಈ ರೆಸ್ಟೋರೆಂಟ್ನಲ್ಲಿ ಲಭ್ಯವಿದೆ.