ಟಿ20 ವಿಶ್ವಕಪ್ 2024 ವಿಜೇತ ಟೀಂ ಇಂಡಿಯಾ ಗುರವಾರ ಭಾರತಕ್ಕೆ ಬಂದು ಇಳಿದಿದೆ. ನಾಯಕರನ್ನು ನೋಡಿ ಅಭಿಮಾನಿಗಳ ದಂಡೇ ಆಗಮಿಸಿದೆ.
ಐಸಿಸಿ ಟಿ20 ವಿಶ್ವಕಪ್ ವಿಜೇತ ಭಾರತ ತಂಡ ಗುರುವಾರ ದೆಹಲಿಗೆ ಬಂದಿಳಿದಿದೆ
ತಮ್ಮ ನೆಚ್ಚಿನ ನಾಯಕರ ದರ್ಶನ ಪಡೆಯಲು ಬಂದಿದ್ದ ಅಭಿಮಾನಿಗಳು ಹುಡುಗರಿಗೆ ಆತ್ಮೀಯ ಸ್ವಾಗತ ಕೋರಿದರು.
ವಿಶ್ವಕಪ್‌ನ ನಂತರ ಬಾರ್ಬಡೋಸ್‌ನಲ್ಲಿ ಟೀಂ ಇಂಡಿಯಾದ ಆಟಗಾಗರು ಚಂಡಮಾರುತದ ದಾಳಿಗೆ ಸಿಲುಕಿ ನಲುಗಿದ್ದರು. ಬಿಸಿಸಿಐ ಭಾರತ ತಂದ ಆಟಗಾರರನ್ನು ಕರೆತರಲು ವಿಶೆಷ ವಿಮಾನವನ್ನು ಬಾರ್ಬಡೋಸ್‌ಗೆ ಕಳಿಸಿದ್ದರು. ಇದಿಗ ರೋಹಿತ್ ಪಡೆ ಭಾರತಕ್ಕೆ ಬಂದಿಳಿದಿದೆ.
ಭಾರತೀಯ ಆಟಗಾರರು ತಮ್ಮ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕ್ಷಣ, ಅಭಿಮಾನಿಗಳ ಜೋರಾದ ಹರ್ಷೋದ್ಗಾರಗಳ ನಡುವೆ ಅವರನ್ನು ಸ್ವಾಗತಿಸಿದರು.
13 ವರ್ಷಗಳ ಐಸಿಸಿ ಟ್ರೋಫಿಯ ಕನಸನ್ನು ನನಸಾಗಿಸಿ ಭಾರತ ಫೈನಲ್‌ನಲ್ಲಿ ಗೆಲುವಿನೊಂದಿಗೆ ಭಾರತಕ್ಕೆ ಎಂಟ್ರಿ ಕೊಟ್ಟಿದೆ.
ಪ್ರಧಾನಿ ನರೇಂದ್ರ ಮೋದಿ ಆಟಗಾರರನ್ನು ಬೇಟಿ ಮಾಡಲಿದ್ದು, ದಿಲ್ಲಿ ಹೋಟೆಲ್‌ನಲ್ಲಿ ಆಟಗಾರರು ಟಿಕಾಣಿ ಹೂಡಿದ್ದಾರೆ.